ಫೆಬ್ರವರಿ ಯಲ್ಲಿ ಅನಿಲ್ ದೇಶ್ ಮುಖ್ ಕೋವಿಡ್ ನಿಂದಾಗಿ ಆಸ್ಪತ್ರೆಯಲ್ಲಿದ್ದರು: ಪರಮ್ ಬಿರ್ ಸಿಂಗ್ ಪತ್ರ ಕುರಿತು ಶರದ್ ಪವಾರ್ ಪ್ರಶ್ನೆ

ತೀವ್ರ ಸಂಚಲನ ಮೂಡಿಸಿರುವ ಮುಂಬೈ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಪತ್ರದ ವಿಚಾರದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಎನ್ ಸಿಪಿ ನಾಯಕ ಶರದ್ ಪವಾರ್ ಸಮರ್ಥಿಸಿಕೊಂಡಿದ್ದಾರೆ.

Published: 22nd March 2021 02:19 PM  |   Last Updated: 23rd March 2021 08:11 AM   |  A+A-


Sharad Pawar

ಶರದ್ ಪವಾರ್

Posted By : Sumana Upadhyaya
Source : The New Indian Express

ಮುಂಬೈ: ತೀವ್ರ ಸಂಚಲನ ಮೂಡಿಸಿರುವ ಮುಂಬೈ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಪತ್ರದ ವಿಚಾರದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರನ್ನು ಎನ್ ಸಿಪಿ ನಾಯಕ ಶರದ್ ಪವಾರ್ ಸಮರ್ಥಿಸಿಕೊಂಡಿದ್ದಾರೆ.

ಪತ್ರದಲ್ಲಿರುವ ವಿಷಯವೇ ವಾಸ್ತವಕ್ಕೆ ವಿರುದ್ಧವಾಗಿದ್ದು, ಸತ್ಯಕ್ಕೆ ದೂರವಾಗಿದೆ. ಅದರಲ್ಲಿರುವ ವಿಷಯ ಪ್ರಶ್ನಾರ್ಥಕವಾಗಿದೆ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ಸಮಗ್ರ ತನಿಖೆಯಾಗಲಿದೆ ಎಂದಿದ್ದಾರೆ.

ಇಂದು ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀವು ಪರಮ್ ಬಿರ್ ಸಿಂಗ್ ಪತ್ರವನ್ನು ನೋಡಿದರೆ, ಫೆಬ್ರವರಿ ಮಧ್ಯಭಾಗದಲ್ಲಿ ಅಂದರೆ ಫೆಬ್ರವರಿ 6ರಿಂದ 16ರ ಮಧ್ಯೆ ಅನಿಲ್ ದೇಶ್ ಮುಖ್ ಅವರು ಕೆಲವು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಇದೆ. ಆದರೆ ಆ ಸಮಯದಲ್ಲಿ ಅನಿಲ್ ದೇಶ್ ಮುಖ್ ಅವರು ಕೊರೋನಾ ವೈರಸ್ ಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದರು.

ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಬಿಜೆಪಿಯ ಒತ್ತಡದ ಬಗ್ಗೆ ಪ್ರತಿಕ್ರಿಯಿಸಿದ ಶರದ್ ಪವಾರ್, ಅದಕ್ಕೆಲ್ಲಾ ಪ್ರಾಮುಖ್ಯತೆ ನೀಡಬೇಕಾಗಿಲ್ಲ, ಅದು ಪ್ರಮುಖವಾಗುವುದೂ ಇಲ್ಲ, ಪತ್ರದಲ್ಲಿ ಮಾಡಿರುವ ಆರೋಪ ಸಮಯದಲ್ಲಿ ಅನಿಲ್ ದೇಶ್ ಮುಖ್ ಆಸ್ಪತ್ರೆಯಲ್ಲಿದ್ದರು ಎಂದರು.

ಆದರೆ ಇದನ್ನು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ತಳ್ಳಿಹಾಕಿದ್ದಾರೆ. ಶರದ್ ಪವಾರ್ ಅವರು ಹೇಳಿದಂತೆ ಅನಿಲ್ ದೇಶ್ ಮುಖ್ ಅವರು ಫೆಬ್ರವರಿ 15ರಿಂದ 27ರವರೆಗೆ ಆಸ್ಪತ್ರೆಯಲ್ಲಿರಲಿಲ್ಲ, ಹೋಂ ಕ್ವಾರಂಟೈನ್ ನಲ್ಲಿದ್ದರು, ಈ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ ಎಂದು ವಿಡಿಯೊ ಸಾಕ್ಷಿಯನ್ನು ನೀಡಿ ಟ್ವೀಟ್ ಮಾಡಿದ್ದಾರೆ.

ಈ ಮಧ್ಯೆ, ಇಂದು ಪರಮ್ ಬಿರ್ ಸಿಂಗ್ ಅವರು ಮಹಾರಾಷ್ಟ್ರ ಗೃಹ ರಕ್ಷಕ ಇಲಾಖೆಯ ಮಹಾ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದಕ್ಷಿಣ ಮುಂಬೈಯಲ್ಲಿರುವ ಗೃಹ ರಕ್ಷಕ ಇಲಾಖೆಗೆ ಆಗಮಿಸಿದ ಪರಮ್ ಬಿರ್ ಸಿಂಗ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp