ಪರಮ್ ಬಿರ್ ಸಿಂಗ್ ಪತ್ರದಿಂದ ಮಹಾರಾಷ್ಟ್ರ ಗೃಹ ಇಲಾಖೆ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ, ಇದು ಬಿಜೆಪಿ ಪಿತೂರಿ: ಶಿವಸೇನೆ

ಮುಂಬೈ ಪೊಲೀಸ್ ಇಲಾಖೆ ಅಧಿಕಾರಿ ಪರಮ್ ಬಿರ್ ಸಿಂಗ್ ಅವರು ರಾಜ್ಯ ಗೃಹ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಇಲಾಖೆಗೆ ಕಳಂಕವನ್ನುಂಟುಮಾಡಿದ್ದರೂ ಕೂಡ ಮಹಾರಾಷ್ಟ್ರದ ಮಹಾ ವಿಕಾಸ್ ಅಘಡಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿವಸೇನೆ ಪ್ರತಿಕ್ರಿಯಿಸಿದೆ.

Published: 22nd March 2021 01:39 PM  |   Last Updated: 22nd March 2021 01:55 PM   |  A+A-


Mumbai Police Commissioner Param Bir Singh (L) and Maharashtra CM Uddhav Thackeray.

ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಮತ್ತು ಸಿಎಂ ಉದ್ಧವ್ ಠಾಕ್ರೆ(ಸಂಗ್ರಹ ಚಿತ್ರ)

Posted By : Sumana Upadhyaya
Source : PTI

ಮುಂಬೈ: ಮುಂಬೈ ಪೊಲೀಸ್ ಇಲಾಖೆ ಅಧಿಕಾರಿ ಪರಮ್ ಬಿರ್ ಸಿಂಗ್ ಅವರು ರಾಜ್ಯ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಇಲಾಖೆಗೆ ಕಳಂಕವನ್ನುಂಟುಮಾಡಿದ್ದರೂ ಕೂಡ ಮಹಾರಾಷ್ಟ್ರದ ಮಹಾ ವಿಕಾಸ್ ಅಘಡಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ, ಅದಕ್ಕೆ ಬಹುಮತವಿದೆ, ಸರ್ಕಾರ ಉರುಳುವುದಿಲ್ಲ ಎಂದು ಶಿವಸೇನೆ ಪ್ರತಿಕ್ರಿಯಿಸಿದೆ.

ಈ ವಿವಾದ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ಪ್ರತಿಷ್ಠೆಯ ವಿಷಯವಾಗಿದೆ ಎಂದು ಕೂಡ ಶಿವಸೇನೆ ಹೇಳಿದೆ. ನಿನ್ನೆಯಷ್ಟೇ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ ಸಿಪಿ) ಅನಿಲ್ ದೇಶ್ ಮುಖ್ ಅವರ ರಾಜೀನಾಮೆಯನ್ನು ತಳ್ಳಿಹಾಕಿತ್ತು.

ಈ ಕುರಿತು ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಶಿವಸೇನೆ, ಬಹುಮತವನ್ನು ಹೊಂದಿರುವ ಮಹಾವಿಕಾಸ್ ಅಘಡಿ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನಿಸಿದರೆ ಬೆಂಕಿಯೇಳುತ್ತದೆ ಎಂದು ಎಚ್ಚರಿಸಿದೆ.

ಕಳೆದ ವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಪತ್ರ ಬರೆದಿದ್ದ ಪೊಲೀಸ್ ಅಧಿಕಾರಿ ಪರಮ್ ಬಿರ್ ಸಿಂಗ್, ಗೃಹ ಸಚಿವ ಅನಿಲ್ ದೇಶ್ ಮುಖ್ ಪೊಲೀಸ್ ಅಧಿಕಾರಿಗಳ ಬಳಿ ತಿಂಗಳಿಂಗ 100 ಕೋಟಿ ರೂಪಾಯಿ ಸಂಗ್ರಹಿಸುವಂತೆ, ಹೊಟೇಲ್-ಬಾರ್ ಗಳಿಂದ 50ರಿಂದ 60 ಕೋಟಿ ರೂಪಾಯಿ ಸಂಗ್ರಹ ಮಾಡುವಂತೆ ಸೂಚನೆ ನೀಡಿದ್ದರು ಎಂದು ಆರೋಪಿಸಿದ ಬಳಿಕ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿತು.

ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಹೊರಗೆ ವಾರಗಳ ಹಿಂದೆ ಸಿಕ್ಕಿದ ಎಸ್ ಯುವಿ ಕಾರಿನಲ್ಲಿ ಸ್ಫೋಟಕಗಳನ್ನು ವಶಪಡಿಸಿಕೊಂಡ ನಂತರ ರಾಷ್ಟ್ರೀಯ ತನಿಖಾ ತಂಡ(ಎನ್ಐಎ) ಈ ಬಗ್ಗೆ ತನಿಖೆ ನಡೆಸುತ್ತಿದೆ. ಈ ಮಧ್ಯೆ ಪರಮ್ ಬಿರ್ ಸಿಂಗ್ ಅವರನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ವಜಾ ಮಾಡಲಾಗಿದೆ.

ಉನ್ನತ ಹುದ್ದೆಯಲ್ಲಿರುವ ಸಹೋದ್ಯೋಗಿಗಳ ಗಂಭೀರ ಮತ್ತು ಕ್ಷಮಿಸಲಾಗದ ತಪ್ಪುಗಳಿಂದ ಪರಮ್ ಬಿರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಅನಿಲ್ ದೇಶ್ ಮುಖ್ ಹೇಳಿದ್ದರು. ಈ ಸಂದರ್ಭದಲ್ಲಿ ತಮ್ಮ ಮೇಲೆ ಕೇಳಿಬಂದ ಭ್ರಷ್ಟಾಚಾರ ಆರೋಪವನ್ನು ತಳ್ಳಿಹಾಕಿದ್ದರು.

ಇದು ಬಿಜೆಪಿ ನಾಯಕರು ಮಾಡಿರುವ ಪಿತೂರಿ ಎಂಬುದು ಶಿವಸೇನೆಯ ಆರೋಪವಾಗಿದೆ. ಕಳೆದ ವಾರ ದೆಹಲಿಯಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಕೆಲವೇ ದಿನಗಳಲ್ಲಿ ಪರಮ್ ಬಿರ್ ಸಿಂಗ್ ಅವರ ಪತ್ರ ಹೊರಬಿದ್ದಿದೆ.

ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ವಾದಿಸುವ ಮೂಲಕ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವುದು ಬಿಜೆಪಿಯ ಗುರಿಯಾಗಿದೆ ಎಂದು ತೋರುತ್ತದೆ. ಇದಕ್ಕಾಗಿ, ಹೊಸ ಕಥೆಯನ್ನು ಹೆಣೆದಿರುವುದು ಸ್ಪಷ್ಟವಾಗಿದೆ, ಸಿಂಗ್ ಅವರನ್ನು ಇದಕ್ಕೆ ಬಿಜೆಪಿ ಬಳಸಿಕೊಂಡಿದೆ ಎಂದು ಶಿವಸೇನೆ ಸಾಮ್ನಾದಲ್ಲಿ ಆರೋಪಿಸಿದೆ.

ಅಂಬಾನಿಯ ನಿವಾಸದ ಹೊರಗೆ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಿಂಗ್ ಅವರನ್ನು ಬಳಸಿಕೊಂಡ ಬಿಜೆಪಿಯ ಡಾರ್ಲಿಂಗ್ ಅವರಾಗಿದ್ದಾರೆ. ಈಗ ಗನ್ ಅನ್ನು ಭುಜದ ಮೇಲೆ ಇಟ್ಟುಕೊಂಡು ಸರ್ಕಾರವನ್ನು ಗುರಿಯಾಗಿಸಿಕೊಂಡಿದೆ ಎಂದು ಶಿವಸೇನೆ ಬಿಜೆಪಿಯನ್ನು ಟೀಕಿಸಿದೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp