ಸೆಬಿ ಉನ್ನತ ಅಧಿಕಾರಿಗಳ ಕಚೇರಿ ಮೇಲೆ ಸಿಬಿಐ ದಾಳಿ!

ಮುಂಬೈ ನಲ್ಲಿ ಸೆಬಿ ಉನ್ನತ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. 

Published: 22nd March 2021 08:52 PM  |   Last Updated: 22nd March 2021 08:52 PM   |  A+A-


Saradha scam: CBI raids offices of top SEBI officials

ಸೆಬಿ ಉನ್ನತ ಅಧಿಕಾರಿಗಳ ಕಚೇರಿ ಮೇಲೆ ಸಿಬಿಐ ದಾಳಿ!

Posted By : Srinivas Rao BV
Source : The New Indian Express

ಮುಂಬೈ: ಮುಂಬೈ ನಲ್ಲಿ ಸೆಬಿ ಉನ್ನತ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ. 

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಈ ಸಿಬಿಐ ದಾಳಿ ನಡೆದಿದೆ. ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವ ಸೆಬಿ ಅಧಿಕಾರಿಗಳು 2009-13 ರ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

ಡಿಜಿಎಂ ಅಧಿಕಾರಿ ಹಾಗೂ ಮತ್ತೋರ್ವ ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿದ್ದ ಅಧಿಕಾರಿಯ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದಷ್ಟೇ ಹೇಳಿರುವ ಸಿಬಿಐ, ಅಧಿಕಾರಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಕ್ಕೆ ನಿರಾಕರಿಸಿದೆ. 

8 ಕಡೆಗಳಲ್ಲಿ ಸಿಬಿಐ ದಾಳಿ ನಡೆದಿದ್ದು, ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲೇ ಸಿಬಿಐ ದಾಳಿ ನಡೆದಿದೆ. 10,000 ಕೋಟಿ ರೂಪಾಯಿ ಮೊತ್ತದ ಶಾರದಾ ಹಗರಣ ಏಪ್ರಿಲ್ 2013 ರಲ್ಲಿ ಬೆಳಕಿಗೆ ಬಂದಿತ್ತು. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp