ಹಠಾತ್ ಹೃದಯಾಘಾತದಿಂದ ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್ ನಿಧನ
ಹಠಾತ್ ಹೃದಯಾಘಾತದಿಂದ ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್ ಮಂಗಳವಾರ ನಿಧನರಾಗಿದ್ದಾರೆ. ಪ್ರಚಾರ ಮುಗಿಸಿ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದ 73 ವರ್ಷದ ರಾಜ್ಯಸಭಾ ಸದಸ್ಯ, ಸಂಜೆಯ ಪ್ರಚಾರಕ್ಕೆ ಸಿದ್ಧತೆ ನಡೆಸುವಾಗಲೇ ಎದೆ ನೋವಿನಿಂದ ಕುಸಿದು ಬಿದಿದ್ದಾರೆ.
Published: 23rd March 2021 07:45 PM | Last Updated: 23rd March 2021 07:49 PM | A+A A-

ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್
ರಾಣಿಪೇಟೆ: ಹಠಾತ್ ಹೃದಯಾಘಾತದಿಂದ ಎಐಎಡಿಎಂಕೆ ಸಂಸದ ಮೊಹಮ್ಮದ್ಜಾನ್ ಮಂಗಳವಾರ ನಿಧನರಾಗಿದ್ದಾರೆ. ಪ್ರಚಾರ ಮುಗಿಸಿ ಮಧ್ಯಾಹ್ನ ಊಟಕ್ಕಾಗಿ ಮನೆಗೆ ಬಂದಿದ್ದ 73 ವರ್ಷದ ರಾಜ್ಯಸಭಾ ಸದಸ್ಯ, ಸಂಜೆಯ ಪ್ರಚಾರಕ್ಕೆ ಸಿದ್ಧತೆ ನಡೆಸುವಾಗಲೇ ಎದೆ ನೋವಿನಿಂದ ಕುಸಿದು ಬಿದಿದ್ದಾರೆ.
ಕೂಡಲೇ ವಾಲಾಜಪೇಟೆಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆ ಮಹಾನಿರ್ದೇಶಕ ಸಿಂಗರಾವೇಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ಗೆ ತಿಳಿಸಿದ್ದಾರೆ.ಮೃತದೇಹವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಮೊಹಮ್ಮದ್ಜಾನ್ 2011-16ರ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆಯಲ್ಲಿ ರಾಣಿಪೇಟೆ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ಕಿರು ಅವಧಿಗೆ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
2019 ಜುಲೈನಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಂಸತ್ತಿನಲ್ಲಿ ಪಕ್ಷದ ನಿರ್ಧಾರದಂತೆ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮತ ಚಲಾಯಿಸಿದ್ದರು. ತದನಂತರ ರಾಣಿಪೇಟೆಯಲ್ಲಿರುವ ಜಮಾತ್ ನೊಂದಿಗೆ ಎಲ್ಲಾ ಜವಾಬ್ದಾರಿಗಳನ್ನು ಕಳೆದುಕೊಂಡಿದ್ದರು. ರಾಣಿಪೇಟೆ ಪುರಸಭೆಯ ಕೌನ್ಸಿಲರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.