ಉಗ್ರರಿಗೆ ಹಣಕಾಸಿನ ನೆರವು: ಪಿಡಿಪಿ ನಾಯಕ ವಹೀದ್ ಪರಾ ವಿರುದ್ಧ ಎನ್ಐಎ ಚಾರ್ಜ್ ಶೀಟ್
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಅವರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೋಮವಾರ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕ ವಹೀದ್ ಪರಾ ಮತ್ತು ಇತರ ಇಬ್ಬರ ವಿರುದ್ಧ ಪೂರಕ ಚಾರ್ಜ್ಶೀಟ್ ದಾಖಲಿಸಿದೆ.
Published: 23rd March 2021 11:46 AM | Last Updated: 23rd March 2021 12:53 PM | A+A A-

ವಹೀದ್ ಪರಾ
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಅವರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೋಮವಾರ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕ ವಹೀದ್ ಪರಾ ಮತ್ತು ಇತರ ಇಬ್ಬರ ವಿರುದ್ಧ ಪೂರಕ ಚಾರ್ಜ್ಶೀಟ್ ದಾಖಲಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ದವೀಂದರ್ ಸಿಂಗ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು.
ಎನ್ಐಎ ಪ್ರಕಾರ, ಪಿಡಿಪಿ ನಾಯಕ ಪರಾ ಅವರು ಹಿಜ್ಬ್-ಉಲ್-ಮುಜಾಹಿದ್ದೀನ್ ಉಗ್ರರಿಗೆ ಹಣ ಸಂಗ್ರಹಿಸುವ ಮತ್ತು ವರ್ಗಾವಣೆ ಮಾಡುವ ಪಿತೂರಿಯ ಭಾಗವಾಗಿದ್ದು, ಆಗ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿಂಗ್ ಅವರು ಇದಕ್ಕೆ ಸಹಕರಿಸಿದ್ದಾರೆ ಎಂಬ ಆರೋಪದ ಮೇಲೆ 2020 ರ ಜನವರಿಯಲ್ಲಿ ಕೇಂದ್ರ ಸಂಸ್ಥೆ ಬಂಧಿಸಿತ್ತು ಮತ್ತು ದೆಹಲಿ ನ್ಯಾಯಾಲಯವು ಕಳೆದ ವರ್ಷ ಜೂನ್ 19 ರಂದು ಅವರಿಗೆ ಜಾಮೀನು ನೀಡಿತ್ತು.
ಕಳೆದ ವರ್ಷ ದವೀಂದರ್ ಸಿಂಗ್ ಸೇರಿದಂತೆ ಆರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದ ಎನ್ ಐಎ, ಈಗ ಪರಾ, ಶಾಹೀನ್ ಅಹ್ಮದ್ ಲೋನ್ ಮತ್ತು ತಫಝುಲ್ ಹುಸೇನ್ ಪರಿಮೂ ವಿರುದ್ಧ ಪೂರಕ ಚಾರ್ಜ್ಶೀಟ್ ಅನ್ನು ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.