ಹುತಾತ್ಮ ದಿನ: ಭಗತ್ ಸಿಂಗ್, ಸುಖದೇವ್, ರಾಜ್ ಗುರು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
ಮಾರ್ಚ್ 23, ಹುತಾತ್ಮರ ದಿನ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ದಿನ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರೇಮಿ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಅವರನ್ನು ಸ್ಮರಿಸಿ ಇಂಥವರ ತ್ಯಾಗ, ಬಲಿದಾನಗಳು ತಲೆತಲಾಂತರದವರೆಗೆ ಜನರಿಗೆ ಸ್ಪೂರ್ತಿಯಾಗಿ ಉಳಿಯಲಿದೆ ಎಂದಿದ್ದಾರೆ.
Published: 23rd March 2021 11:11 AM | Last Updated: 23rd March 2021 11:11 AM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಮಾರ್ಚ್ 23, ಹುತಾತ್ಮರ ದಿನ, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ದಿನ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರೇಮಿ ಭಗತ್ ಸಿಂಗ್, ಸುಖ್ ದೇವ್ ಮತ್ತು ರಾಜ್ ಗುರು ಅವರನ್ನು ಸ್ಮರಿಸಿ ಇಂಥವರ ತ್ಯಾಗ, ಬಲಿದಾನಗಳು ತಲೆತಲಾಂತರದವರೆಗೆ ಜನರಿಗೆ ಸ್ಪೂರ್ತಿಯಾಗಿ ಉಳಿಯಲಿದೆ ಎಂದಿದ್ದಾರೆ.
ಸ್ವಾತಂತ್ರ್ಯದ ಕ್ರಾಂತಿಕಾರಿ ಹುತಾತ್ಮರಾದ ವೀರ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್ ಗುರು ಅವರಿಗೆ ಹುತಾತ್ಮ ದಿನದಂದು ವಂದನೆಗಳು. ಮಾತೃ ಭಾರತದ ಈ ಮಹಾನ್ ಪುತ್ರರ ತ್ಯಾಗ ದೇಶದ ಪ್ರತಿ ಪೀಳಿಗೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ. ಜೈ ಹಿಂದ್, ಶಹೀದ್ ದಿವಸ್ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
931ರಲ್ಲಿ ಬ್ರಿಟಿಷ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಭಾರತೀಯ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜ್ಗುರು ಮತ್ತು ಸುಖದೇವ್ ಅವರಿಗೆ ಗೌರವ ಸಲ್ಲಿಸಲು ಮಾರ್ಚ್ 23 ಅನ್ನು ಶಹೀದ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ಮೂವರು 1928 ರಲ್ಲಿ ಉಪ ಪೊಲೀಸ್ ಅಧೀಕ್ಷಕ ಜೆ.ಪಿ. ಸೌಂದರ್ ಅವರಿಂದ ಅಪರಾಧಿಗಳೆಂದು ಘೋಷಿಸಲ್ಪಟ್ಟಿದ್ದರು.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ಹೋರಾಟಗಾರ ಡಾ.ರಾಮ್ ಮನೋಹರ್ ಲೋಹಿಯಾ ಅವರನ್ನು ಅವರ ಜನ್ಮದಿನದಂದು ನೆನಪಿಸಿಕೊಂಡಿದ್ದು, ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆ ದೇಶವಾಸಿಗಳಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
आजादी के क्रांतिदूत अमर शहीद वीर भगत सिंह, सुखदेव और राजगुरु को शहीदी दिवस पर शत-शत नमन। मां भारती के इन महान सपूतों का बलिदान देश की हर पीढ़ी के लिए प्रेरणास्रोत बना रहेगा। जय हिंद! #ShaheedDiwas pic.twitter.com/qs3SqAHkO9
— Narendra Modi (@narendramodi) March 23, 2021
ಉತ್ತರ ಪ್ರದೇಶದ ಅಕ್ಬರ್ಪುರ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಲೋಹಿಯಾ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕೊನೆಯ ಹಂತದಲ್ಲಿ ಕಾಂಗ್ರೆಸ್ ರೇಡಿಯೊದೊಂದಿಗೆ ಕೆಲಸ ಮಾಡಿದರು, ಇದು ಬಾಂಬೆಯ ವಿವಿಧ ಸ್ಥಳಗಳಿಂದ ರಹಸ್ಯವಾಗಿ 1942 ರವರೆಗೆ ಪ್ರಸಾರವಾಯಿತು. ಲೋಹಿಯಾ ಅವರು, 1962 ರ ಸಾರ್ವತ್ರಿಕ ಚುನಾವಣೆಯಲ್ಲಿ ನೆಹರೂ ವಿರುದ್ಧ ಸೋತರು ಆದರೆ 1963 ರಲ್ಲಿ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಲೋಕಸಭೆಗೆ ಪ್ರವೇಶಿಸಿದ್ದರು.