ರಾಜ್ಯಸಭೆ: ವಿಪಕ್ಷಗಳ ಪ್ರತಿಭಟನೆ, ಸಭಾತ್ಯಾಗದ ನಡುವೆಯೇ ರಾಷ್ಟ್ರ ರಾಜಧಾನಿ (ತಿದ್ದುಪಡಿ) ಮಸೂದೆ 2021 ಅಂಗೀಕಾರ

ಭಾರಿ ವಿವಾದಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ 2021 ಮಸೂದೆ 2021ನ್ನು ರಾಜ್ಯಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

Published: 24th March 2021 11:17 PM  |   Last Updated: 24th March 2021 11:17 PM   |  A+A-


primacy to Delhi L-G

ರಾಜಧಾನಿ (ತಿದ್ದುಪಡಿ) ಮಸೂದೆ 2021 ಅಂಗೀಕಾರ

Posted By : Srinivasamurthy VN
Source : PTI

ನವದೆಹಲಿ: ಭಾರಿ ವಿವಾದಕ್ಕೆ ಕಾರಣವಾಗಿದ್ದ ರಾಷ್ಟ್ರೀಯ ರಾಜಧಾನಿ (ತಿದ್ದುಪಡಿ) ಮಸೂದೆ 2021 ಮಸೂದೆ 2021ನ್ನು ರಾಜ್ಯಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ದೆಹಲಿಯ ಮೇಲೆ ಕೇಂದ್ರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ಪ್ರಸ್ತಾವಿತ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ ( ತಿದ್ದುಪಡಿ) ಮಸೂದೆ 2021 ರನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ದೆಹಲಿಯ ಚುನಾಯಿತ ಸರ್ಕಾರಕ್ಕಿಂತಲೂ ದೆಹಲಿಯಲ್ಲಿನ ಕೇಂದ್ರ ಸರ್ಕಾರದ ಪ್ರತಿನಿಧಿ ಲೆಫ್ಟಿನೆಂಟ್ ಗವರ್ನರ್ ಗೆ ಹೆಚ್ಚಿನ ಅಧಿಕಾರವನ್ನು ಈ ಪ್ರಸ್ತಾವಿತ ಕಾಯಿದೆ ನೀಡಲಿದೆ.

ವಿರೋಧ ಪಕ್ಷದ ನಾಯಕರ ಕೋಲಾಹಲದ ನಡುವೆ ಜಿಎನ್‌ಸಿಟಿಡಿ ಮಸೂದೆಯನ್ನು ಅಂಗೀಕರಿಸಲಾಯಿತು. ಕಾಯ್ದೆ ಕುರಿತು ನಡೆದ ಮತದಾನದಲ್ಲಿ 83 ಸದಸ್ಯರು ಕಾಯ್ದೆ ಪರವಾಗಿ ಮತ ಹಾಕಿದ್ದು, 45 ಮಂದಿ ಕಾಯ್ದೆ ವಿರುದ್ಧವಾಗಿ ಮತ ಹಾಕಿದ್ದಾರೆ ಎಂದು ತಿಳಿದುಬಂದಿದೆ.  

ರಾಜ್ಯಸಭೆಯಲ್ಲಿ ಕೋಲಾಹಲ
ಶಾಸಕಾಂಗವು ಅಂಗೀಕರಿಸಬೇಕಾದ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸಲಾದ 'ಸರ್ಕಾರ' ಎಂದರೆ ಲೆಫ್ಟಿನೆಂಟ್ ಗವರ್ನರ್ ಎಂದರ್ಥ. ಮಸೂದೆಯ ಪ್ರಕಾರ, ಯಾವುದೇ ನೀತಿ ನಿರ್ಧಾರವನ್ನು ಜಾರಿಗೆ ತರುವ ಮೊದಲು ದೆಹಲಿ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಅಭಿಪ್ರಾಯವನ್ನು ಪಡೆಯಬೇಕು. ಇದೇ ಕಾರಣಕ್ಕೆ ಆಪ್ ಸರ್ಕಾರ ಈ ವಿವಾದಿತ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು.

ರಾಜ್ಯಸಭಾ ಚರ್ಚೆ ವೇಳೆ ಕಾಂಗ್ರೆಸ್, ವೈಎಸ್‌ಆರ್‌ಸಿಪಿ, ಬಿಜೆಡಿ, ಎಸ್‌ಪಿ, ವೈಎಸ್ ಆರ್ ಕಾಂಗ್ರೆಸ್ ಮುಖಂಡರು ಇತರರು ಮೇಲ್ಮನೆಯಿಂದ ಹೊರನಡೆದರು. ಈ ವಿಚಾರವಾಗಿ ರಾಜ್ಯ ಸಭೆಯಲ್ಲಿ ಗದ್ದಲವಾಗಿದ್ದು, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರದ ವಿರುದ್ಧ ವಾಗ್ಧಾಳಿ ನಡೆಸಿದ್ದು, ದೆಹಲಿಯಲ್ಲಿ ಚುನಾಯಿತ ಸರ್ಕಾರವಿದ್ದರೂ ಕೂಡ ಇಂತಹ ಮಸೂದೆ ಜಾರಿಗೊಳಿಸಿರುವುದು ನಿಜಕ್ಕೂ ಪ್ರಜಾಭುತ್ವದ ನಾಶ ಎಂದು ಕಿಡಿಕಾರಿದ್ದಾರೆ. ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ 2021 ಅಂಗೀಕರಿಸಿದ ಹಿನ್ನೆಲೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ ಉಂಟಾಗಿತ್ತು.

'ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ನಾವು ಬಯಸುತ್ತೇವೆ. ಇದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ. ಇದನ್ನು ನಾವು ವಿರೋಧಿಸುತ್ತೇವೆ' ಎಂದು ಎಸ್‌ಪಿ ಸಂಸದ ವಿಶಂಭರ್ ಪ್ರಸಾದ್ ನಿಷಾದ್ ಹೇಳಿದ್ದಾರೆ. ಈ ಮಸೂದೆ ಅಂಗೀಕಾರದ ಪರವಾಗದಿರಲು ನಮ್ಮ ಪಕ್ಷ ನಿರ್ಧರಿಸಿದೆ. ಇದು ಚುನಾಯಿತ ವಿಧಾನಸಭೆಯ ಚುನಾಯಿತ ಸರ್ಕಾರದ ಅಧಿಕಾರ ಮತ್ತು ಅಧಿಕಾರವನ್ನು ಹಾಳು ಮಾಡುತ್ತದೆ ಎಂದು ಬಿಜೆಡಿ ಸಂಸದ ಪ್ರಸನ್ನ ಆಚಾರ್ಯ ಹೇಳಿದ್ದಾರೆ. ಇದನ್ನು ಮೊದಲು ಮಾರ್ಚ್ 22 ರಂದು ಕೆಳಮನೆ ಅಂಗೀಕರಿಸಿತು. 

ಏತನ್ಮಧ್ಯೆ, ರಾಜ್ಯಸಭೆ ಮತ್ತು ಲೋಕಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಮೊದಲಿನಿಂದಲೂ ಮಸೂದೆಯನ್ನು ವಿರೋಧಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ದುಃಖದ ದಿನ ಎಂದು ಕರೆದಿದ್ದರು. 'ಆರ್ಎಸ್ ಜಿಎನ್‌ಸಿಟಿಡಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಭಾರತೀಯ ಪ್ರಜಾಪ್ರಭುತ್ವಕ್ಕೆ ದುಃಖದ ದಿನ. ಜನರಿಗೆ ಅಧಿಕಾರವನ್ನು ಪುನಃಸ್ಥಾಪಿಸುವ ನಮ್ಮ ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಅಡೆತಡೆಗಳು ಏನೇ ಇರಲಿ, ನಾವು ಉತ್ತಮ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಕೆಲಸ ನಿಲ್ಲುವುದಿಲ್ಲ ಅಥವಾ ನಿಧಾನವಾಗುವುದಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp