ವಿಷಯ ಗಂಭೀರವಾದದ್ದು: ದೇಶ್ ಮುಖ್ ವಿರುದ್ಧ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಮೊರೆ ಹೋಗಲು ಪರಂ ಬೀರ್ ಗೆ 'ಸುಪ್ರೀಂ' ಅನುಮತಿ

ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈ ನ ಹಿರಿಯ ಪೊಲೀಸ್ ಅಧಿಕಾರಿ ಪರಂ ಬೀರ್ ಸಿಂಗ್ ಮಾಡಿರುವ ಆರೋಪ ಗಂಭೀರವಾದದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 

Published: 24th March 2021 01:44 PM  |   Last Updated: 24th March 2021 01:47 PM   |  A+A-


Former Mumbai Police chief Param Bir Singh. (File | PTI)

ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್

Posted By : Srinivas Rao BV
Source : The New Indian Express

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಮುಂಬೈ ನ ಹಿರಿಯ ಪೊಲೀಸ್ ಅಧಿಕಾರಿ ಪರಂ ಬೀರ್ ಸಿಂಗ್ ಮಾಡಿರುವ ಆರೋಪ ಗಂಭೀರವಾದದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. 

ಇದೇ ವೇಳೆ ಪರಂ ಬೀರ್ ಸಿಂಗ್ ದೇಶ್ ಮುಖ್ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ನ ನ್ಯಾ, ಸಂಜಯ್ ಕೃಷ್ಣ ಕೌಲ್ ಹಾಗೂ ಆರ್ ಎಸ್ ರೆಡ್ಡಿ ಅವರ ಪೀಠ ಅವಕಾಶ ಮಾಡಿಕೊಟ್ಟಿದ್ದು, ವಿಷಯ ಗಂಭೀರವಾದದ್ದಾಗಿರುವುದರಿಂದ, ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಬಹುದು ಎಂದು ಅನುಮತಿ ನೀಡಿದೆ. 

ಪರಮ್ ಬೀರ್ ಸಿಂಗ್ ಮಾಡಿರುವ ಆರೋಪಗಳು ಗಂಭೀರವಾದದ್ದು ಎಂಬುದರಲ್ಲಿ ಅನುಮಾನವಿಲ್ಲ, ಆದರೆ ಅರ್ಜಿದಾರರು ಮೊದಲು ಬಾಂಬೆ ಹೈಕೋರ್ಟ್ ಗೆ ಮನವಿ ಮಾಡಲಿ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪರಮ್ ಬೀರ್ ಸಿಂಗ್ ಪರ ವಾದ ಮಂಡಿಸಿದ ಹಿರಿಯ ಅಡ್ವೊಕೇಟ್ ಮುಕುಲ್ ರೋಹಟ್ಗಿ ಹೈಕೋರ್ಟ್ ಗೆ ಇಂದೇ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. 

ಇದೇ ವೇಳೆ ತಮ್ಮನ್ನು ಮುಂಬೈ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆ ಮಾಡಿರುವುದನ್ನು ಸಹ ಪರಮ್ ಬೀರ್ ಸಿಂಗ್ ಪ್ರಶ್ನಿಸಿದ್ದರು. ಪ್ರತಿ ತಿಂಗಳೂ 100 ಕೋಟಿ ರೂಪಾಯಿ ಸಂಗ್ರಹಿಸುವಂತೆ ಗೃಹ ಸಚಿವ ಅನಿಲ್ ದೇಶ್ ಮುಖ್ ತಮಗೆ ಟಾರ್ಗೆಟ್ ನೀಡುತ್ತಿದ್ದರು ಎಂಬುದು ಪರಮ್ ಬೀರ್ ಸಿಂಗ್ ಅವರ ಪ್ರಮುಖ ಆರೋಪವಾಗಿದೆ. 


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp