ಲಸಿಕೆ ನೀಡಿಕೆಗೆ ವಯೋಮಿತಿ ಬೇಡ, ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ, ಪಂಜಾಬ್ ಮುಖ್ಯಮಂತ್ರಿಗಳ ಮನವಿ

ದೇಶದಲ್ಲಿ ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತೀಯೊಬ್ಬರಿಗೂ ಲಸಿಕೆ ನೀಡಬೇಕು. ಹೀಗಾಗಿ ಲಸಿಕೆ ನೀಡಿಕೆಗೆ ವಯೋಮಿತಿ ನಿಯಮ ತೆಗೆಯಿರಿ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್, ಪಂಜಾಬ್ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರ ಮನವಿ ಮಾಡಿದ್ದಾರೆ.

Published: 24th March 2021 01:20 AM  |   Last Updated: 24th March 2021 01:20 AM   |  A+A-


COVID-19-vaccination

ಕೋವಿಡ್ ವ್ಯಾಕ್ಸಿನ್ ವಿತರಣೆ

Posted By : Srinivasamurthy VN
Source : PTI

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತೀಯೊಬ್ಬರಿಗೂ ಲಸಿಕೆ ನೀಡಬೇಕು. ಹೀಗಾಗಿ ಲಸಿಕೆ ನೀಡಿಕೆಗೆ ವಯೋಮಿತಿ ನಿಯಮ ತೆಗೆಯಿರಿ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್, ಪಂಜಾಬ್ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕೇಂದ್ರ ಸರ್ಕಾರ ಮನವಿ ಮಾಡಿದ್ದಾರೆ.

ದೇಶದಲ್ಲಿ ಮಾರಕ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತೀಯೊಬ್ಬರಿಗೂ ಲಸಿಕೆ ನೀಡಬೇಕು. ಕೋವಿಡ್ 19 ಲಸಿಕೆಗಳನ್ನು ಎಲ್ಲಾ ವಯಸ್ಸಿನವರಿಗೆ ಲಭ್ಯವಾಗುವ ಹಾಗೆ ಮಾಡುವುದರಿಂದ ಕೋವಿಡ್ ನ ರೂಪಾಂತರಿ ಅಲೆ ಅಥವಾ ಎರಡನೇ ಅಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಈಗಾಗಲೇ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡಿದೆ. ಆದರೂ, ಅತಿ ಶೀಘ್ರದಲ್ಲಿ ಹೆಚ್ಚು ಜನ ಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟಿಗೆ ಲಸಿಕಾ ಕೇಂದ್ರಗಳನ್ನು ತೆರೆಯುವಂತೆ ಪಜಾಬ್ ಸಿಎಂ ಅಮರಿಂದರ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ ರೂಪಾಂತರಿ ವೈರಸ್ ವೇಗವಾಗಿ ಹಬ್ಬುತ್ತಿರುವ ಕಾರಣ ಎಲ್ಲಾ ವಯಸ್ಸಿನವರಿಗೆ ಲಸಿಕೆ ಲಭ್ಯವಾಗುವ ಹಾಗೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅಮರಿಂದರ್ ಕೇಳಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕೋವಿಡ್ 19 ರೂಪಾಂತರಿ ವೈರಸ್ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಆತಂಕಕಾರಿಯಾಗಿ ಕಾಣಿಸುತ್ತಿದೆ. ವ್ಯಾಕ್ಸಿನೇಶನ್ ನನ್ನು ಕೇಂದ್ರ ಸರ್ಕಾರ ಜಾಸ್ತಿ ಮಾಡಬೇಕಿದೆ. ಕೋವಿಡ್ 19 ರೂಪಾಂತರಿ ವೈರಸ್ ನಿಂದ ಜನರನ್ನು ರಕ್ಷಣೆ ಮಾಡಬೇಕಿದೆ. ಆದ್ದರಿಂದ ವ್ಯಾಕ್ಸಿನೇಶನ್ ಗೆ ವಯೋ ಮಿತಿಯನ್ನು ತೆಗೆದು ಹಾಕಬೇಕು ಎಂದು ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೂಟ್, ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ವ್ಯಾಕ್ಸಿನೇಷನ್ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಕೋವಿಡ್-19 ವಿರುದ್ಧ ಗರಿಷ್ಠ ವ್ಯಾಕ್ಸಿನೇಷನ್ ನೀಡುವ ಮೂಲಕ ಸಾರ್ವಜನಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು. ಆದ್ದರಿಂದ, ವಯಸ್ಸಿನ ಮಾನದಂಡಗಳನ್ನು ತೆಗೆದುಹಾಕಬೇಕು ಮತ್ತು ವ್ಯಾಕ್ಸಿನೇಷನ್ ಎಲ್ಲರಿಗೂ ಲಭ್ಯವಿರಬೇಕು ಎಂದು ಹೇಳಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp