ಸಚಿನ್ ವಾಜೆ ಎನ್ಐಎ ಕಸ್ಟಡಿ ಏಪ್ರಿಲ್ 3 ರವರೆಗೆ ವಿಸ್ತರಣೆ: ಮನೆಯಿಂದ 62 ಸಜೀವ ಗುಂಡು ಪತ್ತೆ!
ದೇಶದ ಅಗ್ರ ಶ್ರೀಮಂತ ಮುಖೇಶ್ ಅಂಬಾನಿ ಮನೆಯ ಬಳಿ ಸ್ಫೋಟಕಗಳಿಂದ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಜೆ ಎನ್ಐಎ ಕಸ್ಟಡಿಯನ್ನು ವಿಶೇಷ ನ್ಯಾಯಾಲಯವು ಏಪ್ರಿಲ್ 3ರವರೆಗೆ ವಿಸ್ತರಿಸಿದೆ.
Published: 25th March 2021 06:26 PM | Last Updated: 25th March 2021 07:37 PM | A+A A-

ಸಚಿನ್ ವಾಜೆ
ಮುಂಬೈ: ದೇಶದ ಅಗ್ರ ಶ್ರೀಮಂತ ಮುಖೇಶ್ ಅಂಬಾನಿ ಮನೆಯ ಬಳಿ ಸ್ಫೋಟಕಗಳಿಂದ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಜೆ ಎನ್ಐಎ ಕಸ್ಟಡಿಯನ್ನು ವಿಶೇಷ ನ್ಯಾಯಾಲಯವು ಏಪ್ರಿಲ್ 3ರವರೆಗೆ ವಿಸ್ತರಿಸಿದೆ.
ಈ ಅಪರಾಧಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಬಲಿಪಶುವಾಗಿ ಮಾಡಲಾಗಿದೆ ಎಂದು ಸಚಿನ್ ವಾಜೆ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದರು. ಮುಂಬೈ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ 49 ವರ್ಷದ ಸಚಿನ್ ವಾಜೆರನ್ನು ಮಾರ್ಚ್ 13ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.
ವಾಜೆಯ ಎನ್ಐಎ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇನ್ನು ತನಿಖೆಯ ಸಮಯದಲ್ಲಿ ಎನ್ಐಎ ವಾಜೆ ಮನೆಯಿಂದ 62 ಗುಂಡುಗಳನ್ನು ವಶಪಡಿಸಿಕೊಂಡಿದೆ. ಅವುಗಳನ್ನು ಮನೆಯಲ್ಲಿ ಯಾಕೆ ಇರಿಸಲಾಗಿದೆ ಎಂದು ತನಿಖೆ ಮಾಡಬೇಕಾಗಿದೆ ಎಂದು ಸಿಂಗ್ ಹೇಳಿದರು.
ಎನ್ಐಎ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ವಾಜೆ ಈ ಅಪರಾಧಕ್ಕೂ ನನಗೂ ಸಂಬಂಧವಿಲ್ಲ. ನಾನು ಒಂದೂವರೆ ದಿನದವರೆಗೂ ಪ್ರಕರಣದ ತನಿಖಾಧಿಕಾರಿಯಾಗಿದ್ದೆ, ತನಿಖೆಗೆ ಏನು ಅಗತ್ಯವಾಗಿತ್ತೊ ಅದನ್ನು ನಿರ್ವಹಿಸಿದೆ. ನಾನಷ್ಟೇ ಅಲ್ಲ, ಕ್ರೈಂ ಬ್ರ್ಯಾಂಚ್ ನ ಎಲ್ಲ ಅಧಿಕಾರಿಗಳು ಹಾಗೂ ಮುಂಬೈ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ಹೇಳಿದರು.
ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ವಾಹನ ಮಾಲೀಕ ಮನ್ಸುಖ್ ಹಿರೇನ್ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ಮುಂದುವರಿಸಿದೆ. ಇನ್ನು ಹಿರೇನ್ ಶಂಕಾಸ್ಪದ ಸಾವಿನಲ್ಲಿ ಸಚಿನ್ ವಾಜೆ ಕೈವಾಡವಿದೆ ಎಂದು ಹಿರೇನ್ ಅವರ ಪತ್ನಿ ಆರೋಪಿಸಿದ್ದರು. ಆರೋಪದ ಬೆನ್ನಲ್ಲೇ ಮುಂಬೈ ಕ್ರೈಂ ಬ್ರ್ಯಾಂಚ್ ಕರ್ತವ್ಯದಿಂದ ವಾಜೆ ಅವರನ್ನು ಅಮಾನತುಗೊಳಿಸಲಾಗಿತ್ತು.