ಸೇನೆಯಲ್ಲಿ ಮಹಿಳೆಯರ ಶಾಶ್ವತ ಆಯೋಗ: ಎಸಿಆರ್ ಮೌಲ್ಯಮಾಪನ ದೋಷಪೂರಿತ ಎಂದ ಸುಪ್ರೀಂ ಕೋರ್ಟ್
ಸೇನೆಯಲ್ಲಿ ಶಾಶ್ವತ ಆಯೋಗ ನೀಡುವಂತೆ ಕೋರಿ ಹಲವಾರು ಮಹಿಳಾ ಎಸ್ಎಸ್ಸಿ ಅಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಷ್ಕರಿಸಿದ ಸುಪ್ರೀಂ ಕೋರ್ಟ್, ದೈಹಿಕ ಕ್ಷಮತೆ ಆಧಾರದಲ್ಲಿ ಮಹಿಳಾ ಅಧಿಕಾರಿಗಳನ್ನು ಶಾಶ್ವತ...
Published: 25th March 2021 04:25 PM | Last Updated: 25th March 2021 04:25 PM | A+A A-

ಮಹಿಳಾ ಅಧಿಕಾರಿಗಳು
ನವದೆಹಲಿ: ಸೇನೆಯಲ್ಲಿ ಶಾಶ್ವತ ಆಯೋಗ ನೀಡುವಂತೆ ಕೋರಿ ಹಲವಾರು ಮಹಿಳಾ ಎಸ್ಎಸ್ಸಿ ಅಧಿಕಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಷ್ಕರಿಸಿದ ಸುಪ್ರೀಂ ಕೋರ್ಟ್, ದೈಹಿಕ ಕ್ಷಮತೆ ಆಧಾರದಲ್ಲಿ ಮಹಿಳಾ ಅಧಿಕಾರಿಗಳನ್ನು ಶಾಶ್ವತ ಆಯೋಗದಿಂದ ಹೊರಗಿಡುವುದು ಸರಿಯಲ್ಲ ಮತ್ತು ಎಸಿಆರ್ ಮೌಲ್ಯಮಾಪನ ದೋಷಪೂರಿತ ಎಂದು ಗುರುವಾರ ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ್ದ ಆದೇಶ ಜಾರಿಗೊಳಿಸುವಂತೆ ಕೋರಿ ಹಲವು ಮಹಿಳಾ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, ಸ್ವಾತಂತ್ರ್ಯದ ನಂತರ, ಲಿಂಗ ತಾರತಮ್ಯೆ ಹೊಗಲಾಡಿಸಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶವನ್ನು ನೀಡಲು ಪ್ರಯತ್ನಿಸಲಾಗಿದೆ. ಈ ವಿಷಯವನ್ನು ಒಂದು ತಿಂಗಳೊಳಗೆ ಮರುಪರಿಶೀಲಿಸುವಂತೆ ಸೇನೆಗೆ ಸೂಚಿಸಿದೆ.
ಮಹಿಳೆಯರಿಗೆ ಸೇನಾಪಡೆಗಳಲ್ಲಿನ ವೃತ್ತಿಯಲ್ಲಿ ಹಲವಾರು ಸವಾಲುಗಳಿವೆ. ಮಕ್ಕಳ ಲಾಲನೆ ಪಾಲನೆ ಹಾಗೂ ಮನೆಗಲಸಗಳ ಒತ್ತಡವನ್ನು ಅವರ ಮೇಲೆ ಹೇರಿದಾಗ ಇನ್ನಷ್ಟು ಕಷ್ಟವಾಗುತ್ತದೆ. ಶಾಶ್ವತ ಆಯೋಗವನ್ನು ನೀಡುವಾಗ 10 ವರ್ಷಗಳ ಹಿಂದಿನ ಅವರ ದೈಹಿಕ ಕ್ಷಮತೆಯನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.
ಸೇನೆಯ ವಾರ್ಷಿಕ ಗೌಪ್ಯತಾ ವರದಿ(ಎಸಿಆರ್)ಯನ್ನು ತಡವಾಗಿ ಅನುಷ್ಠಾನಗೊಳಿಸುವುದು ಮತ್ತು ಎಸಿಆರ್ ಮೌಲ್ಯಮಾಪನ ಹಾಗೂ ವೈದ್ಯಕೀಯ ಫಿಟ್ನೆಸ್ ಮಾನದಂಡಗಳು ಮಹಿಳಾ ಅಧಿಕಾರಿಗಳಿಗೆ ಎಸಗಿದ ತಾರತಮ್ಮ ಎಂದು ನ್ಯಾಯಾಲಯ ಹೇಳಿದೆ.