ಮಹಾರಾಷ್ಟ್ರದ ವಿದರ್ಭದಲ್ಲಿ ರಾಮ ಮಂದಿರಕ್ಕಾಗಿ ಆರ್‌ಎಸ್‌ಎಸ್ ಕಾರ್ಯಕರ್ತರಿಂದ 57 ಕೋಟಿ ರೂ. ಸಂಗ್ರಹಣೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಕಾರ್ಯಕರ್ತರು ಮಹಾರಾಷ್ಟ್ರದ ವಿದರ್ಭ ಪ್ರದೇಶದ 27 ಲಕ್ಷ ಕುಟುಂಬಗಳಿಂದ ಬರೋಬ್ಬರಿ 57 ಕೋಟಿ ರೂ. ಸಂಗ್ರಹಿಸಿದ್ದಾರೆ.

Published: 25th March 2021 11:50 AM  |   Last Updated: 25th March 2021 01:01 PM   |  A+A-


proposed model of Ram temple in Ayodhya

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಮಾದರಿ

Posted By : Lingaraj Badiger
Source : PTI

ನಾಗ್ಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್)ದ ಕಾರ್ಯಕರ್ತರು ಮಹಾರಾಷ್ಟ್ರದ ವಿದರ್ಭ ಪ್ರದೇಶದ 27 ಲಕ್ಷ ಕುಟುಂಬಗಳಿಂದ ಬರೋಬ್ಬರಿ 57 ಕೋಟಿ ರೂ. ಸಂಗ್ರಹಿಸಿದ್ದಾರೆ.

ಆರ್‌ಎಸ್‌ಎಸ್‌ನ ವಿದರ್ಭ 'ಪ್ರಾಂತ್ ಕಾರ್ಯವಾಹ' ದೀಪಕ್ ತಮ್‌ಶೆಟ್ಟಿವಾರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

"ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ದೇಣಿಗೆ ಅಭಿಯಾನದಲ್ಲಿ, 7,512 ಮಹಿಳೆಯರು ಸೇರಿದಂತೆ 70,796 ಆರ್‌ಎಸ್‌ಎಸ್ ಸ್ವಯಂಸೇವಕರು ವಿದರ್ಭದಲ್ಲಿ 12,310 ಗ್ರಾಮಗಳು ಮತ್ತು 27,67,991 ಕುಟುಂಬಗಳನ್ನು ಭೇಟಿ ನೀಡಿ 57 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ" ಎಂದು ಅವರು ಹೇಳಿದರು. 

ವಿದರ್ಭ ಪ್ರದೇಶದ 11 ಜಿಲ್ಲೆಗಳಾದ ಯವತ್ಮಾಲ್, ಅಕೋಲಾ, ಅಮರಾವತಿ, ವಾರ್ಧಾ, ಬುಲ್ಖಾನಾ, ವಾಶಿಮ್, ನಾಗ್ಪುರ, ಚಂದ್ರಪುರ, ಭಂಡಾರ, ಗಡ್ಚಿರೋಲಿ ಮತ್ತು ಗೊಂಡಿಯಾದಲ್ಲಿ ದೇಣಿಗೆ ಸಂಗ್ರಹಿಸಲಾಗಿದೆ.

ರಾಮ ಮಂದಿರ ದೇಣಿ ಸಂಗ್ರಹಕ್ಕಾಗಿ 80,424 ಮಹಿಳೆಯರು ಸೇರಿದಂತೆ ಒಟ್ಟು 20,64,622 ಸ್ವಯಂಸೇವಕರು ದೇಶದ 5,45,737 ಗ್ರಾಮಗಳು ಮತ್ತು 12,42,21,214 ಕುಟುಂಬಗಳಿಗೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp