ಶರದ್ ಪವಾರ್ ಯುಪಿಎ ಮುಖ್ಯಸ್ಥರಾಗಬೇಕು ಎಂದ ರಾವತ್ ಗೆ ಎಂವಿಎಗೆ ನೀಡಿರುವ ಬೆಂಬಲ ನೆನಪಿಸಿದ ಕಾಂಗ್ರೆಸ್!

ಯುಪಿಎ ಇದೀಗ ಅಧೋಗತಿ ಸ್ಥಿತಿಯಲ್ಲಿದ್ದು, ಶರದ್ ಪವಾರ್ ನಂತಹ ಕಾಂಗ್ರೆಸ್ ಯೇತರ ಮುಖಂಡರು ಅದರ ಅಧ್ಯಕ್ಷರಾಗಬೇಕಾಗಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. 

Published: 25th March 2021 02:39 PM  |   Last Updated: 25th March 2021 02:52 PM   |  A+A-


Sanjay_Raut1

ಸಂಜಯ್ ರಾವತ್

Posted By : Nagaraja AB
Source : The New Indian Express

ನವದೆಹಲಿ: ಯುಪಿಎ ಇದೀಗ ಅಧೋಗತಿ ಸ್ಥಿತಿಯಲ್ಲಿದ್ದು, ಶರದ್ ಪವಾರ್ ನಂತಹ ಕಾಂಗ್ರೆಸ್ ಯೇತರ ಮುಖಂಡರು ಅದರ ಅಧ್ಯಕ್ಷರಾಗಬೇಕಾಗಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ ಸಂಜಯ್ ರಾವತ್,  ಯುಪಿಎ ಪರಿಸ್ಥಿತಿ ಇದೀಗ ಹದಗೆಟ್ಟಿದ್ದು, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಷ್ಟ್ರಮಟ್ಟದಲ್ಲಿ ಯುಪಿಎ ಮುನ್ನಡೆಸುವುದು ಸೂಕ್ತ ಅನ್ನಿಸುತ್ತಿದೆ ಎಂದರು. ಈ ಹಿಂದೆ ಕೂಡಾ ಅನೇಕ ಸಲ ಇದೇ ರೀತಿಯ ಸಲಹೆಯನ್ನು ಸಂಜಯ್ ರಾವತ್ ನೀಡಿದ್ದಾರೆ.

ಶರದ್ ಪವಾರ್ ಯುಪಿಎ ಮುಖ್ಯಸ್ಥರಾಗುವುದಕ್ಕೆ ಇತರ ಪಕ್ಷಗಳ ಬೆಂಬಲ ಕುರಿತಂತೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ಪವರ್ ಯುಪಿಎ ಅಧ್ಯಕ್ಷರಾದರೆ  ಪ್ರಾದೇಶಿಕ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದ್ದಂತಿಲ್ಲ. ನಾವೆಲ್ಲ ಬಿಜೆಪಿಯ ವಿರೋಧಿಗಳಾಗಿದ್ದೇವೆ ಎಂದರು.

ಸಂಜಯ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ರಾವತ್, ಶಿವಸೇನಾ ಯುಪಿಎ ಅಂಗಪಕ್ಷವಲ್ಲಾ, ಅದು ಯುುಪಿಎ ಮೈತ್ರಿ ಪಕ್ಷವಾಗಿದ್ದರೆ ಅರ್ಥಮಾಡಿಕೊಳ್ಳಬಹುದಾಗಿತ್ತು. ಸಂಜಯ್ ರಾವತ್ ಅಂತಹ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಹೇಳಿದರು.

ಮತ್ತೋರ್ವ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಹುಸೈನ್ ದಲ್ವಾಯ್ ಮಾತನಾಡಿ, ಕಳೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನಾ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಮುಖ್ಯಮಂತ್ರಿ ಹುದ್ದೆ ಪಡೆದುಕೊಂಡಿದೆ. ಆದರೆ, ಶಿವಸೇನಾ ಈಗಲೂ ಕೂಡಾ ಯುಪಿಎ ಅಂಗಪಕ್ಷವಲ್ಲಾ, ಸಂಜಯ್ ರಾವತ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಮಹಾ ವಿಕಾಸ್ ಅಘಾದಿ ಸರ್ಕಾರ ರಚನೆಯಾಗಿದೆ ಎಂಬುದನ್ನು ಸಂಜಯ್ ರಾವತ್ ಮರೆಯಬಾರದು.ಈ ರೀತಿಯ ವಿವಾದಾತ್ಮಕ ಹೇಳಿಕೆಯನ್ನು ನೀಡಬಾರದು ಎಂದು ದಲ್ವಾಯ್ ತಿಳಿಸಿದರು. 


Stay up to date on all the latest ರಾಷ್ಟ್ರೀಯ news
Poll
Rahul gandhi and sonia gandhi

ಗಾಂಧಿ ಕುಟುಂಬದ ಹೊರತಾಗಿ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ಕಾಂಗ್ರೆಸ್ ಹುಡುಕಬೇಕೇ?


Result
ಹೌದು
ಬೇಡ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp