ಶ್ರೀಲಂಕಾ ನೌಕಾಪಡೆಯಿಂದ 54 ಭಾರತೀಯ ಮೀನುಗಾರರ ಬಂಧನ, 5 ಮೀನುಗಾರಿಕಾ ದೋಣಿ ವಶ!

ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 54 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 5 ದೋಣಿಗಳನ್ನು ವಶಪಡಿಸಿಕೊಂಡಿದೆ.

Published: 25th March 2021 03:46 PM  |   Last Updated: 25th March 2021 04:00 PM   |  A+A-


arrest

ಸಾಂಕೇತಿಕ ಚಿತ್ರ

Posted By : Vishwanath S
Source : Associated Press

ಕೊಲಂಬೊ: ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 54 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 5 ದೋಣಿಗಳನ್ನು ವಶಪಡಿಸಿಕೊಂಡಿದೆ.

14 ಸಿಬ್ಬಂದಿಗಳೊಂದಿಗೆ ದೊಡ್ಡ ಭಾರತೀಯ ಮೀನುಗಾರಿಕಾ ಹಡಗನ್ನು ಜಾಫ್ನಾದ ಕೋವಿಲಾನ್ ಕರಾವಳಿಯಲ್ಲಿ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ನೌಕಾಪಡೆ ಬಂಧಿಸಿದೆ.

ಇನ್ನು 20 ಸಿಬ್ಬಂದಿಗಳೊಂದಿಗೆ ಇನ್ನೂ ಎರಡು ಭಾರತೀಯ ಮೀನುಗಾರಿಕಾ ಹಡಗುಗಳನ್ನು ಮನ್ನಾರ್‌ನಿಂದ 7 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಪೆನಲೈ ಮತ್ತು ಇರಾನಾಟಿವು ದ್ವೀಪದಿಂದ 5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಬಂಧಿಸಲಾಗಿದೆ. 

ಮುಲ್ಲೈಟಿವಿನಿಂದ 7.5 ಮತ್ತು 8.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 20 ಸಿಬ್ಬಂದಿಗಳನ್ನು ಹೊಂದಿರುವ ಇನ್ನೆರಡು ಭಾರತೀಯ ಮೀನುಗಾರಿಕಾ ಹಡಗುಗಳನ್ನು ಬಂಧಿಸಲಾಗಿದೆ.

ವಶಕ್ಕೆ ಪಡೆದಿರುವ ಮೀನುಗಾರರನ್ನು ಸ್ಥಳೀಯ ನೌಕಾ ಕೇಂದ್ರಕ್ಕೆ ಕರೆದೊಯ್ದಿರುವ ಶ್ರೀಲಂಕಾ ಪಡೆಗಳು, ವಿಚಾರಣೆಗೊಳಪಡಿಸಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕ ಶ್ರೀಲಂಕಾ ಮೀನುಗಾರಿಕಾ ಪ್ರಾಧಿಕಾರದ ವಶಕ್ಕೆ ನೀಡಲಿದ್ದಾರೆಂದು ತಿಳಿಸಿದ್ದಾರೆ.

ಮೀನುಗಾರರನ್ನು ಶ್ರೀಲಂಕಾಪಡೆಗಳು ವಶಕ್ಕೆ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರರ ಸಂಘದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದು, ಶೀಘ್ರಗತಿಯಲ್ಲಿ ಬಿಡುಗಡೆ ಮಾಡುವಂತೆ ಕೇಂದ್ರ ಹಾಗೂ ತಮಿಳುನಾಡು ಸರ್ಕಾರವನ್ನು ಆಗ್ರಹಿಸಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp