ಪುಣೆಯ ಫ್ಯಾಶನ್ ಸ್ಟ್ರೀಟ್‌ನಲ್ಲಿ ಬೆಂಕಿ ಆಕಸ್ಮಿಕ: 500 ಅಂಗಡಿಗಳು ಸುಟ್ಟು ಭಸ್ಮ

ಪುಣೆಯ ಪ್ರಸಿದ್ಧ ಫ್ಯಾಷನ್ ಸ್ಟ್ರೀಟ್ ಮಾರ್ಕೆಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ  ಸುಮಾರು 500 ಅಂಗಡಿಗಳು ಸುಟ್ಟು ಭಸ್ಮವಾಗಿವೆ.

Published: 27th March 2021 11:30 AM  |   Last Updated: 27th March 2021 12:51 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : PTI

ಪುಣೆ: ಪುಣೆಯ ಪ್ರಸಿದ್ಧ ಫ್ಯಾಷನ್ ಸ್ಟ್ರೀಟ್ ಮಾರ್ಕೆಟ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ  ಸುಮಾರು 500 ಅಂಗಡಿಗಳು ಸುಟ್ಟು ಭಸ್ಮವಾಗಿವೆ.

ಶುಕ್ರವಾರ ರಾತ್ರಿ 11 ಗಂಟೆಗೆ ಸಂಭವಿಸಿದ ಅವಘಡದಲ್ಲಿ ಅಂಗಡಿಗಳು ಸುಟ್ಟು ಹೋಗಿವೆ,  ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ  ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ  16 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯರಾತ್ರಿ 1 ಗಂಟೆಗೆ ಸುಮಾರಿಗೆ ಬೆಂಕಿ ನಂದಿಸುವ ಕಾರ್ಯ ತಹಬಂದಿಗೆ ಬಂದಿತ್ತು. ಆದರೆ ಅಷ್ಟರಲ್ಲಾಗಲೇ 500 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂದು ಇನ್ನೂ ತಿಳಿದಿಲ್ಲ.

ಪುಣೆ ಕಂಟೋನ್ಮೆಂಟ್ ಬೋರ್ಡ್ (ಪಿಸಿಬಿ) ಪ್ರದೇಶದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಫ್ಯಾಶನ್ ಸ್ಟ್ರೀಟ್ ಪ್ರಸಿದ್ಧ 'ವಿಂಡೋ ಶಾಪಿಂಗ್' ತಾಣವಾಗಿದ್ದು, ಇದು ಉಡುಪುಗಳು, ಬೂಟುಗಳು, ಕನ್ನಡಕಗಳು ಮತ್ತು ಇತರ ಪರಿಕರಗಳನ್ನು ಮಾರಾಟ ಮಾಡುವ ಸಣ್ಣ ಮಳಿಗೆಗಳನ್ನು ಹೊಂದಿದೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp