ಮನ್ಸುಖ್ ಹಿರೆನ್ ಕೊಲೆ ಪ್ರಕರಣ ಬೇಧಿಸಿದ ಎಟಿಎಸ್ ತಂಡವನ್ನು ಶ್ಲಾಘಿಸಿದ ಶಿವದೀಪ್ ಲಂಡೆ
ಮನ್ಸುಖ್ ಹಿರೆನ್ ಕೊಲೆ ಪ್ರಕರಣವನ್ನು ಬೇಧಿಸಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಂಡವನ್ನು ಉಪ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಶಿವದೀಪ್ ಲಂಡೆ ಶ್ಲಾಘಿಸಿದ್ದಾರೆ.
Published: 27th March 2021 03:00 PM | Last Updated: 27th March 2021 03:58 PM | A+A A-

ಶಿವದೀಪ್ ಲಂಡೆ
ಮುಂಬೈ: ಮನ್ಸುಖ್ ಹಿರೆನ್ ಕೊಲೆ ಪ್ರಕರಣವನ್ನು ಬೇಧಿಸಿದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಂಡವನ್ನು ಉಪ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಶಿವದೀಪ್ ಲಂಡೆ ಶ್ಲಾಘಿಸಿದ್ದಾರೆ.
ಈ ಸಾಧನೆ ಹಗಲುರಾತ್ರಿ ಎನ್ನದೇ ಶ್ರಮಿಸಿದ ಫಲ ಎಂದು ಲಂಡೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು,ಅತ್ಯಂತ ಸೂಕ್ಷ್ಮ ಮನ್ಸುಖ್ ಕೊಲೆ ಪ್ರಕರಣ ಬೇಧಿಸುವ ಜೊತೆಗೆ ಮನ್ಸುಖ್ ಕುಟುಂಬಕ್ಕೆ ನ್ಯಾಯ ಒದಗಿಸಲು ಸಹಾಯ ಮಾಡಿದ ಸಹೋದ್ಯೋಗಿಗಳನ್ನು ಲ್ಯಾಂಡೆ ಅಭಿನಂದಿಸಿದ್ದಾರೆ.
ಅಲ್ಲದೇ 'ಇದು ತಮ್ಮ ಪೊಲೀಸ್ ವೃತ್ತಿಜೀವನದ ಅತ್ಯಂತ ಸಂಕೀರ್ಣ ಪ್ರಕರಣಗಳಲ್ಲಿ ಒಂದಾಗಿದೆ'. ವಿಶೇಷವೆಂದರೆ, ಥಾಣೆ ಉದ್ಯಮಿ ಮನ್ಸುಖ್ ಹಿರೆನ್ ಅವರ ಕೊಲೆ ಪ್ರಕರಣದಲ್ಲಿ, ಎಟಿಎಸ್ ಮಾಜಿ ಕಾನ್ಸ್ಟೇಬಲ್ ವಿನಾಯಕ್ ಶಿಂಧೆ ಮತ್ತು ಕ್ರಿಕೆಟ್ ಬುಕ್ಕಿ ನರೇಶ್ ಗೌರ್ ಅವರನ್ನು ಭಾನುವಾರ ಬಂಧಿಸಲಾಗಿತ್ತು ಎಂದು ಲಂಡೆ ಫೇಸ್ ಬುಕ್ಕಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊಂದ ಬಳಿಕ, ಶವವನ್ನು ಕಲ್ವಾ ಕ್ರೀಕ್ ಬಳಿ ಮನ್ಸುಖ್ ಶವವನ್ನು ಎಸೆಯಲಾಗಿತ್ತು ಮತ್ತು ಮಾರ್ಚ್ 5ರಂದು ಆ ಶವ ಪತ್ತೆಯಾಗಿತ್ತು. ಇನ್ನು ಮನ್ಸುಖ್ ನಾಪತ್ತೆಯ ದೂರನ್ನು ಕುಟುಂಬ ಸದಸ್ಯರು ಮಾರ್ಚ್ 5ರ ಬೆಳಿಗ್ಗೆ ದಾಖಲಿಸಿದ್ದರು.
ಮನ್ಸುಖ್ ಮಾಲೀಕತ್ವಕ್ಕೆ ಸೇರಿದ್ದ ಕಾರೊಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ನಿವಾಸ ಆಂಟಿಲಿಯಾ ಬಳಿ ಪತ್ತೆಯಾಗಿದ್ದು,ಆ ಕಾರಿನಲ್ಲಿದ್ದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.