ಪಂಜಾಬಿನಲ್ಲಿ ಬಿಜೆಪಿ ಶಾಸಕನ ಬಟ್ಟೆ ಹರಿದು ಥಳಿಸಿದ ರೈತರ ಗುಂಪು- ವಿಡಿಯೋ

 ರೈತರ ಗುಂಪೊಂದು ಪಂಜಾಬ್ ಶಾಸಕನ ಬಟ್ಟೆ ಹರಿದು, ಥಳಿಸಿರುವ  ಘಟನೆ  ಮುಕ್ತಸರ ಜಿಲ್ಲೆಯ ಮೌಲಾಟ್ ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Published: 28th March 2021 12:58 PM  |   Last Updated: 28th March 2021 01:02 PM   |  A+A-


BJP_Mla1

ಬಿಜೆಪಿ ಶಾಸಕ

Posted By : Nagaraja AB
Source : Online Desk

ಚಂಡೀಘಡ: ರೈತರ ಗುಂಪೊಂದು ಪಂಜಾಬ್ ಶಾಸಕನ ಬಟ್ಟೆ ಹರಿದು, ಥಳಿಸಿರುವ  ಘಟನೆ  ಮುಕ್ತಸರ ಜಿಲ್ಲೆಯ ಮೌಲಾಟ್ ನಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬೋಹರ್  ಬಿಜೆಪಿ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಛಿಯನ್ನುದ್ದೇಶಿಸಿ ಮಾತನಾಡಲು ಸ್ಥಳೀಯ ಮುಖಂಡರೊಂದಿಗೆ ಮೌಲಾಟ್ ಗೆ ತೆರಳಿದಾಗ, ಅವರನ್ನು ಸುತ್ತುವರೆದ ಪ್ರತಿಭಟನಾ ನಿರತ ರೈತರ ಗುಂಪೊಂದು, ಕಪ್ಪು ಇಂಕ್ ನ್ನು ಅವರ ಮೇಲೆ ಎರಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಂತರ ಕೆಲ ಪೊಲೀಸರು ಶಾಸಕರು ಮತ್ತು ಸ್ಥಳೀಯ ಮುಖಂಡರನ್ನು ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅವರು ಹೊರಬಂದಾಗಲೂ ಪ್ರತಿಭಟನಾಕಾರರು, ನಾರಂಗ್ ಬಟ್ಟೆ ಹರಿದು, ಥಳಿಸಿದ್ದಾರೆ. ತದನಂತರ ಎಸ್ಕಾರ್ಟ್ ನೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಶಾಸಕ ನಾರಂಗ್ ಅವರನ್ನು ಪೊಲೀಸರು ಕರೆದೊಯ್ದದರು ಎಂದು ಅಧಿಕಾರಿ ಹೇಳಿದ್ದಾರೆ. 

 

ಈ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ಸಣ್ಣ ಪ್ರಮಾಣದ ಗಾಯವಾಗಿರುವುದಾಗಿ ಮೌಲಾಟ್ , ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್ ಹೇಳಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp