ಮನ್ಸುಖ್ ಹಿರೆನ್ ಹತ್ಯೆ ಬೇಧಿಸುವಲ್ಲಿ ಮಹತ್ವದ ಪಾತ್ರನಿರ್ವಹಿಸಿದ ಕನ್ನಡಿಗ ಇನ್ಸ್ ಪೆಕ್ಟರ್ ದಯಾನಾಯಕ್

ಮುಂಬೈನ ಮನ್ಸುಖ್ ಹಿರೆನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಅತ್ಯಂತ ವ್ಯವಸ್ಥಿತವಾಗಿ ಬೇಧಿಸುವಲ್ಲಿ ಕನ್ನಡಿಗ ಇನ್ಸ್ ಪೆಕ್ಟರ್ ದಯಾ ನಾಯಕ್ ಅವರ ಪಾತ್ರ ಮಹತ್ವದ್ದಾಗಿದೆ.

Published: 28th March 2021 03:14 PM  |   Last Updated: 28th March 2021 03:14 PM   |  A+A-


Daya Nayak

ದಯಾ ನಾಯಕ್

Posted By : Vishwanath S
Source : UNI

ಮುಂಬೈ: ಮುಂಬೈನ ಮನ್ಸುಖ್ ಹಿರೆನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಅತ್ಯಂತ ವ್ಯವಸ್ಥಿತವಾಗಿ ಬೇಧಿಸುವಲ್ಲಿ ಕನ್ನಡಿಗ ಇನ್ಸ್ ಪೆಕ್ಟರ್ ದಯಾ ನಾಯಕ್ ಅವರ ಪಾತ್ರ ಮಹತ್ವದ್ದಾಗಿದೆ.

ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪ್ರಕಾರ, ದಯಾ ನಾಯಕ್ ಮತ್ತು ಅವರ ತಂಡ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಮಾಜಿ ಪೊಲೀಸ್ ಪೇದೆಗಳಾದ ವಿನಾಯಕ್ ಶಿಂಧೆ ಮತ್ತು ನರೇಶ್ ಗೋರ್ ಅವರನ್ನು ಬಂಧಿಸಿ ಮೊಬೈಲ್ ಫೋನ್ ಗಳು. ಸಿಮ್ ಕಾರ್ಡ್ ಗಳು ಸೇರಿದಂತೆ ಅಪರಾಧದಲ್ಲಿ ಬಳಸಿದ ಹಲವಾರು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದು, ಮಹತ್ವದ ಬೆಳವಣಿಗೆಯಾಗಿದೆ. ಸೂಪರ್ ಕಾಪ್ ಎಂದೇ ಪರಿಚಿತರಾದ ದಯಾನಾಯಕ್ ತನ್ನ ಚಾಣಾಕ್ಷತನದಿಂದ ಪ್ರಕರಣವನ್ನು ಬೇಧಿಸಿದ್ದಾರೆ.

ವಿಶೇಷವೆಂದರೆ ಥಾಣೆ ಉದ್ಯಮಿ ಮನ್ಸುಖ್ ಹಿರೆನ್ ಅವರ ಕೊಲೆ ಪ್ರಕರಣದಲ್ಲಿ, ಕಳೆದ ಭಾನುವಾರ ನಡೆದ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮಾಜಿ ಕಾನ್ ಸ್ಟೆಬಲ್ ವಿನಾಯಕ್ ಶಿಂಧೆ ಮತ್ತು ಕ್ರಿಕೆಟ್ ಬುಕ್ಕಿ ನರೇಶ್ ಗೋರ್ ಅವರನ್ನು ಎಟಿಎಸ್ ಬಂಧಿಸಿದೆ. 

ಕನ್ಸಾ ಕ್ರೀಕ್ ಬಳಿ ಮನ್ಸುಖ್ ಶವವನ್ನು ಎಸೆಯಲಾಗಿತ್ತು. ಮಾರ್ಚ್ 5 ರಂದು ಅವರ ಶವ ಪತ್ತೆಯಾಗಿತ್ತು. ಇವರು ನಾಪತ್ತೆಯಾಗಿದ್ದರು ಎಂಬ  ದೂರನ್ನು ಕುಟುಂಬ ಸದಸ್ಯರು ಮಾರ್ಚ್ 5 ರ ಬೆಳಿಗ್ಗೆ ದಾಖಲಿಸಿದ್ದರು.

ಮನ್ಸುಖ್ ಹತ್ಯಾಕಾಂಡ ಪ್ರಕರಣದಲ್ಲಿ ಮನ್ಸುಖ್ ಕುಟುಂಬಕ್ಕೆ ನ್ಯಾಯ ಒದಗಿಸಲು ಸಹಾಯ ಮಾಡಿದ ಅವರ ಸಹೋದ್ಯೋಗಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಗಿದೆ. ಅತ್ಯಂತ ಸೂಕ್ಷ್ಮವಾದ ಮನ್ಸುಖ್ ಕೊಲೆ ಪ್ರಕರಣವನ್ನು ಇದೀಗ ಸುಲಲಿತವಾಗಿ ಬಗೆಹರಿಸಲಾಗಿದೆ.

ಥಾಣೆ ಉದ್ಯಮಿ ಮನ್ಸುಖ್ ಹಿರೆನ್ ಅವರ ಕೊಲೆ ಪ್ರಕರಣದಲ್ಲಿ, ಎಟಿಎಸ್ ಮಾಜಿ ಪೇದೆ ವಿನಾಯಕ ಶಿಂಧೆ ಮತ್ತು ಕ್ರಿಕೆಟ್ ಬುಕ್ಕಿ ನರೇಶ್ ಗೋರ್ ಅವರನ್ನು ಕಳೆದ ಭಾನುವಾರ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಶಿಕ್ಷೆಗೊಳಪಡಿಸಿರುವುದು ವಿಶೇಷವಾಗಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp