ಹವಾಮಾನ ಬದಲಾವಣೆ ಶೃಂಗಸಭೆ, ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರ ಆಹ್ವಾನ, ಪಟ್ಟಿಯಲ್ಲಿಲ್ಲ ಇಮ್ರಾನ್ ಖಾನ್ ಹೆಸರು! 

ಏಪ್ರಿಲ್ 22 ಮತ್ತು 23ರಂದು ವರ್ಚುವಲ್ ಆಗಿ ನಡೆಯುವ ಹವಾಮಾನ ಬದಲಾವಣೆ ಶೃಂಗಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ 40 ನಾಯಕರನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಸ್ವಾಗತಿಸಿದ್ದಾರೆ.

Published: 28th March 2021 12:08 PM  |   Last Updated: 28th March 2021 12:08 PM   |  A+A-


Joe Biden

ಜೊ ಬೈಡನ್

Posted By : Sumana Upadhyaya
Source : PTI

ನವದೆಹಲಿ: ಏಪ್ರಿಲ್ 22 ಮತ್ತು 23ರಂದು ವರ್ಚುವಲ್ ಆಗಿ ನಡೆಯುವ ಹವಾಮಾನ ಬದಲಾವಣೆ ಶೃಂಗಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ 40 ನಾಯಕರನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಸ್ವಾಗತಿಸಿದ್ದಾರೆ.

ಹವಾಮಾನ ಬದಲಾವಣೆಯ ಕ್ಷಿಪ್ರ ಕೆಲಸದ ತುರ್ತು ಅಗತ್ಯ ಮತ್ತು ಅದರಿಂದ ಆರ್ಥಿಕ ಪ್ರಯೋಜನಗಳ ಕುರಿತು ಶೃಂಗಸಭೆಯಲ್ಲಿ ಒತ್ತು ನೀಡಲಾಗುತ್ತಿದ್ದು ಇದರ ನೇರಪ್ರಸಾರವಿರುತ್ತದೆ ಎಂದು ಶ್ವೇತಭವನ ತಿಳಿಸಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಮೆರಿಕ ಅಧ್ಯಕ್ಷರು ಆಹ್ವಾನ ನೀಡಿಲ್ಲ. ಈ ವರ್ಷ ನವೆಂಬರ್ ನಲ್ಲಿ ಗ್ಲಾಸ್ಗೊದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನ(ಸಿಒಪಿ26)ಕ್ಕೆ ಈ ಶೃಂಗಸಭೆ ಮೈಲುಗಲ್ಲಾಗಲಿದೆ ಎಂದು ಶ್ವೇತಭವನ ತಿಳಿಸಿದೆ.

ನಾಯಕರ ಶೃಂಗಸಭೆ ಮತ್ತು ಸಿಒಪಿ 26 ರ ಪ್ರಮುಖ ಉದ್ದೇಶವೆಂದರೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಗುರಿಯವರೆಗೆ ಸೀಮಿತಗೊಳಿಸುವ ಪ್ರಯತ್ನಗಳನ್ನು ವೇಗವರ್ಧಿಸುವುದು. "ಶೃಂಗಸಭೆಯು ವರ್ಧಿತ ಹವಾಮಾನ ಮಹತ್ವಾಕಾಂಕ್ಷೆಯು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತದೆ, ನವೀನ ತಂತ್ರಜ್ಞಾನಗಳನ್ನು ಹೇಗೆ ಮುನ್ನಡೆಸುತ್ತದೆ ಮತ್ತು ದುರ್ಬಲ ದೇಶಗಳಿಗೆ ಹವಾಮಾನ ಪರಿಣಾಮಗಳಿಗೆ ಹೊಂದಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಉದಾಹರಣೆಗಳನ್ನು ತೋರಿಸುತ್ತದೆ ಎಂದು ಶ್ವೇತಭವನ ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp