ಸಚಿನ್ ವಾಜೆ ಸಮ್ಮುಖದಲ್ಲಿ ಮೀಠೀ ನದಿಯಿಂದ ಹಾರ್ಡ್ ಡಿಸ್ಕ್, ವಾಹನದ ನಂಬರ್ ಪ್ಲೇಟ್ ವಶಕ್ಕೆ ಪಡೆದ ಎನ್ಐಎ!

ದೇಶದ ಅಗ್ರ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆ ಎದುರು ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಮ್ಮುಖದಲ್ಲಿ ಮೀಠೀ ನದಿಯಿಂದ ಹಾರ್ಡ್ ಡಿಸ್ಕ್, ವಾಹನದ ನಂಬರ್ ಪ್ಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

Published: 28th March 2021 07:57 PM  |   Last Updated: 28th March 2021 07:57 PM   |  A+A-


Incident Photo

ಪ್ರತ್ಯಕ್ಷ ದೃಶ್ಯ

Posted By : Vishwanath S
Source : PTI

ಮುಂಬೈ: ದೇಶದ ಅಗ್ರ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆ ಎದುರು ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಮ್ಮುಖದಲ್ಲಿ ಮೀಠೀ ನದಿಯಿಂದ ಹಾರ್ಡ್ ಡಿಸ್ಕ್, ವಾಹನದ ನಂಬರ್ ಪ್ಲೇಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. 

ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನ ಮೀಠೀ ನದಿಯ ಬಳಿಗೆ ಸಚಿನ್ ವಾಜೆರನ್ನು ಕರೆದೊಯ್ದ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಸಿಬ್ಬಂದಿ ಕಂಪ್ಯೂಟರ್ ಸಿಪಿಯುಗಳು, ವಾಹನದ ನಂಬರ್ ಪ್ಲೇಟ್, ಎರಡು ಡಿವಿಆರ್ ಮತ್ತು ಒಂದು ಲ್ಯಾಪ್ ಟ್ಯಾಪ್ ಪತ್ತೆ ಹಚ್ಚಿ ದಡಕ್ಕೆ ತಂದಿದ್ದಾರೆ. 

ಸದ್ಯ ಸಚಿನ್ ವಾಜೆಯನ್ನು ಏಪ್ರಿಲ್ 3ರವರೆಗೆ ವಶಕ್ಕೆ ಪಡೆದಿರುವ ಎನ್ಐಎ ತೀವ್ರ ರೂಪದ ತನಿಖೆ ನಡೆಸುತ್ತಿದೆ. ಥಾಣೆಯ ವ್ಯಾಪಾರಿ ಮನ್ ಸುಖ್ ಹಿರೇನ್ ಕೊಲೆ ಪ್ರಕರಣದಲ್ಲಿಯೂ ವಾಜೆ ಆರೋಪಿಯಾಗಿದ್ದಾರೆ. ಬಂಧನಕ್ಕೂ ಮುನ್ನ ಹಿರೇನ್ ಸಾವಿನ ಪ್ರಕರಣದ ತನಿಖೆಯನ್ನು ವಾಜೆ ನಡೆಸುತ್ತಿದ್ದರು. 

ಸಚಿನ್ ವಾಜೆ ಸಾಕ್ಷಿಗಳನ್ನು ನದಿಗೆ ಎಸೆದು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಭಾನುವಾರ ಮಧ್ಯಾಹ್ನ 3.15ಕ್ಕೆ ನಡೆದ ಕಾರ್ಯಾಚರಣೆಯಲ್ಲಿ ಎನ್ಐಎ ಕರೆತಂದಿದ್ದ 11 ಮುಳುಗುತಜ್ಞರು ನದಿಯ ತಳಮಟ್ಟಿ ಸಾಕ್ಷ್ಯಗಳನ್ನು ಜಾಲಾಡಿ ಮೇಲಕ್ಕೆ ತಂದಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp