ಕೋವಿಡ್-19: ಕರ್ನಾಟಕ ಸೇರಿ ಎಂಟು ರಾಜ್ಯಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿ

ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕೇರಳ, ತಮಿಳುನಾಡು ಮತ್ತು ಛತ್ತೀಸ್‌ಗಢ ಸೇರಿ ಎಂಟು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯ ಏರಿಕೆ ಕಾಣುತ್ತಿವೆ.

Published: 29th March 2021 05:16 PM  |   Last Updated: 29th March 2021 06:57 PM   |  A+A-


Kalaburagi comes to terms with COVID-19 a year after first death in country

ಸಾಂದರ್ಭಿಕ ಚಿತ್ರ

UNI

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕೇರಳ, ತಮಿಳುನಾಡು ಮತ್ತು ಛತ್ತೀಸ್‌ಗಢ ಸೇರಿ ಎಂಟು ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯ ಏರಿಕೆ ಕಾಣುತ್ತಿವೆ.

ಈ ರಾಜ್ಯಗಳಿಂದ ದೈನಂದಿನ ಹೊಸ ಪ್ರಕರಣಗಳಲ್ಲಿ ಶೇ.84.5ರಷ್ಟು ಪ್ರಕರಣಗಳು ವರದಿಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಒಟ್ಟು 68,020 ಹೊಸ ಪ್ರಕರಣಗಳು ದಾಖಲಾಗಿವೆ, ಇದರಲ್ಲಿ ಮಹಾರಾಷ್ಟ್ರ 40,414 ಪ್ರಕರಣಗಳು ವರದಿ ಮಾಡಿದೆ. ಇದರ ನಂತರ ಕರ್ನಾಟಕದಲ್ಲಿ 3,082 ರಷ್ಟಿದ್ದರೆ, ಪಂಜಾಬ್‌ನಲ್ಲಿ 2,870 ಹೊಸ ಪ್ರಕರಣಗಳು ದಾಖಲಾಗಿವೆ.

ಭಾರತದ ಒಟ್ಟು 'ಸಕ್ರಿಯ ಪ್ರಕರಣ'ಗಳು 5,21,808ಕ್ಕೆ ತಲುಪಿದೆ. ಚೇತರಿಕೆ ದರ 1,13,55,993 ರಷ್ಟಿದ್ದರೆ, ಕಳೆದ 24 ಗಂಟೆಗಳಲ್ಲಿ ಒಟ್ಟು 32,231 ಜನರು ಗುಣಮುಖರಾಗಿದ್ದಾರೆ. 

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 312 ಸಾವುಗಳು ವರದಿಯಾಗಿವೆ. ಆರು ರಾಜ್ಯಗಳು ಹೊಸ ಸಾವುಗಳು ಶೇ. 82.69 ರಷ್ಟಿದ್ದರೆ, ಮಹಾರಾಷ್ಟ್ರವು ಗರಿಷ್ಠ 166 ಸಾವಿನ ಪ್ರಕರಣಗಳನ್ನು ದಾಖಲಿಸಿದೆ. ಪಂಜಾಬ್ 45 ದೈನಂದಿನ ಸಾವುಗಳನ್ನು ಅನುಸರಿಸುತ್ತಿದೆ ಮತ್ತು ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 14 ಸಾವು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ ಹದಿನೈದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳು) ಯಾವುದೇ ಕೋವಿಡ್‌ ಸಾವುಗಳು ವರದಿಯಾಗಿಲ್ಲ.


Stay up to date on all the latest ರಾಷ್ಟ್ರೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp