ತಮಿಳುನಾಡು ಸಿಎಂ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಎ.ರಾಜಾ ಕ್ಷಮೆಯಾಚನೆ

ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ತಾಯಿಯ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಡಿಎಂಕೆ ಸಂಸದ ಎ ರಾಜಾ ಅವರು ಸೋಮವಾರ ಕ್ಷಮೆಯಾಚಿಸಿದ್ದಾರೆ.

Published: 29th March 2021 04:02 PM  |   Last Updated: 29th March 2021 04:54 PM   |  A+A-


A Raja arbitrarily subverted procedures for dual technology says CBI

ಎ ರಾಜಾ

Posted By : Lingaraj Badiger
Source : The New Indian Express

ಚೆನ್ನೈ: ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ತಾಯಿಯ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಡಿಎಂಕೆ ಸಂಸದ ಎ ರಾಜಾ ಅವರು ಸೋಮವಾರ ಕ್ಷಮೆಯಾಚಿಸಿದ್ದಾರೆ.

"ನನ್ನ ಟೀಕೆಗಳಿಂದಾಗಿ ಸಿಎಂಗೆ ತೀವ್ರ ನೋವುಂಟಾಗಿದೆ ಎಂದು ತಿಳಿದು ನನಗೆ ಬೇಸರವಾಯಿತು. ನನ್ನ ಟೀಕೆಗಳಿಗೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಎ ರಾಜಾ ಹೇಳಿದ್ದಾರೆ.

ನನ್ನ ಭಾಷಣವು ಸಿಎಂ ಮೇಲಿನ ವೈಯಕ್ತಿಕ ದಾಳಿಯಲ್ಲ. ಆದರೆ ಅವರ ಸಾರ್ವಜನಿಕ ಜೀವನದ ಬಗ್ಗೆ ಇಬ್ಬರು ನಾಯಕರ ನಡುವೆ ಹೋಲಿಕೆ ಮಾಡಿದ್ದೆ ಎಂದಿದ್ದಾರೆ.

ಎ ರಾಜಾ ಅವರು ತಮ್ಮ ನಾಯಕ ಸ್ಟಾಲಿನ್‌ ಅವರನ್ನು ಹೊಗಳುವ ಭರದಲ್ಲಿ ‘ಸ್ಟಾಲಿನ್ ಅವರು ಉತ್ತಮ ಸಂಬಂಧದಿಂದ, ನಾರ್ಮಲ್ ಡೆಲಿವರಿ ಮೂಲಕ ಜನಿಸಿದ್ದಾರೆ. ಆದರೆ, ಪಳನಿಸ್ವಾಮಿ ಜನಿಸಿದ್ದು ಅಕ್ರಮ ಸಂಬಂಧದಿಂದ ಮತ್ತು ಅದು ಅಕಾಲಿಕ ಜನನ’ ಎಂದು ಅವಹೇಳನ ಮಾಡಿ ಹೀಯಾಳಿಸಿದ್ದರು.

ನಿನ್ನೆ ಚುನಾವಣಾ ಪ್ರಚಾರದ ವೇಳೆ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರು ಎ ರಾಜಾ ಅವರು ತಮ್ಮ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ನೆನೆದು ಕಣ್ಣೀರು ಹಾಕಿದ್ದರು.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp