ದೆಹಲಿ ಬಿಜೆಪಿ ಮುಖಂಡ ಉದ್ಯಾನವನದೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ದೆಹಲಿ ಬಿಜೆಪಿ ಮುಖಂಡರೊಬ್ಬರು ಪಶ್ಚಿಮ ದೆಹಲಿಯ ಸುಭಾಷ್ ನಗರದ ಉದ್ಯಾನವನದೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಪೋಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.
Published: 30th March 2021 12:08 PM | Last Updated: 30th March 2021 12:08 PM | A+A A-

ಗುರ್ವಿಂದರ್ ಸಿಂಗ್ ಬಾವಾ
ನವದೆಹಲಿ: ದೆಹಲಿ ಬಿಜೆಪಿ ಮುಖಂಡರೊಬ್ಬರು ಪಶ್ಚಿಮ ದೆಹಲಿಯ ಸುಭಾಷ್ ನಗರದ ಉದ್ಯಾನವನದೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಪೋಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಿದ್ದಾರೆ.
ಮೃತರನ್ನು ಪಶ್ಚಿಮ ದೆಹಲಿ ವಲಯದ ಬಿಜೆಪಿ ಮಾಜಿ ಉಪಾಧ್ಯಕ್ಷ ಗುರ್ವಿಂದರ್ ಸಿಂಗ್ ಬಾವಾ (58) ಎಂದು ಗುರುತಿಸಲಾಗಿದೆ. ಅವರು ಹೋಳಿ ಹಬ್ಬದಂದು ಉದ್ಯಾನದೊಳಗಿನ ಗ್ರಿಲ್ ನಿಂದ ನೇಣು ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಘಟನಾ ಸ್ಥಳದಲ್ಲಿ ಯಾವ ಡೆತ್ ನೋಟ್ ಪತ್ತೆಯಾಗಿಲ್ಲ.
ಪ್ರಾಥಮಿಕ ತನಿಖೆಯ ಪ್ರಕಾರ, ಆಂತರಿಕ ಸಮಸ್ಯೆಗಳಿಂದ ನೊಂದು ಬಾವಾ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಘಟನೆಯ ಬಗ್ಗೆ ಸಂಜೆ 6 ಗಂಟೆ ಸುಮಾರಿಗೆ ನಮಗೆ ಕರೆ ಬಂತು. ತನಿಖಾ ಅಧಿಕಾರಿ ಸ್ಥಳಕ್ಕೆ ತೆರಳಿ ವ್ಯಕ್ತಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿದ್ದದ್ದನ್ನು ನೋಡಿದ್ದಾರೆ.ಬಾವಾ ಅವರ ಮಗ ಈಶ್ವೆಂದರ್ ಸಿಂಗ್ ಉದ್ಯಾನವನಕ್ಕೆ ಬಂದು ತಂದೆಯ ಶವವನ್ನು ಗುರುತಿಸಿದ್ದಾರೆ.” ಅವರ ಶವವನ್ನು ಡಿಡಿಯು ಆಸ್ಪತ್ರೆಗೆ ಸಾಗಿಸಲಾಗಿದ್ದು, ಶೀಘ್ರದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.
ಮೃತರು ಮಾಜಿ ವಕೀಲರಾಗಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.