ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು 7 ವರ್ಷದ ಬಾಲಕನನ್ನು ಕೊಂದ ವ್ಯಕ್ತಿ; ಬಂಧನ!

ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂಬ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಪ್ರೇಯಸಿಯ 7 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ನಲ್ಲಿ ನಡೆದಿದೆ. 

Published: 30th March 2021 01:07 AM  |   Last Updated: 30th March 2021 01:07 AM   |  A+A-


murder

ಸಾಂದರ್ಭಿಕ ಚಿತ್ರ

Posted By : Srinivas Rao BV
Source : IANS

ಆಂಧ್ರಪ್ರದೇಶ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂಬ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಪ್ರೇಯಸಿಯ 7 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲ್ ನಲ್ಲಿ ನಡೆದಿದೆ. 

ಘಟನೆಯ ಆರೋಪಿ ಬುರ್ರಿ ಜನ ರೆಡ್ಡಿ ಹಾಗೂ ಕೊಲೆಗೆ ಸಾಥ್ ನೀಡಿದ್ದ ಆತನ ಸಂಬಂಧಿ ಪಸಮ್ ಬ್ರಹ್ಮ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಗುಂಟೂರು ಜಿಲ್ಲೆಯ ಮದಿನಪಡು ಗ್ರಾಮದ ಲಕ್ಷ್ಮಿ ಎಂಬ ಮಹಿಳೆಯೊಂದಿಗೆ ಬುರ್ರಿ ಜನ ರೆಡ್ಡಿ ಅಕ್ರಮ ಸಂಬಂಧ ಹೊಂದಿದ್ದ. ಈ ಮಹಿಳೆಗೆ ದಶಕದ ಹಿಂದೆ ತುಪಾಕುಲ ಶ್ರೀನು ಎಂಬಾತನ ಜೊತೆ ವಿವಾಹವಾಗಿ ದಂಪತಿಗೆ ತುಪಾಕುಲ ಸಾಯಿ ಕಲ್ಯಾಣ್ ಎಂಬ 7 ವರ್ಷದ ಮಗನಿದ್ದ. ಲಕ್ಷ್ಮಿ ಹಾಗೂ ಆಕೆಯ ಪತಿ ಭಿನ್ನಾಭಿಪ್ರಾಯದ ಕಾರಣದಿಂದ ಬೇರಾಗಿದ್ದರು. ಲಕ್ಷ್ಮಿ ಪತಿಯಿಂದ ಬೇರ್ಪಟ್ಟು ಬೇರೆ ಊರಿನಲ್ಲಿ ಉದ್ಯೋಗಕ್ಕೆ ಸೇರಿ ತನ್ನ ತಾಯಿ ಹಾಗೂ ಮಗನೊಂದಿಗೆ ಜೀವಿಸುತ್ತಿದ್ದರು. ಮನೆಯಿಂದ ಕಚೇರಿಗೆ ಪ್ರತಿನಿತ್ಯ ಪ್ರಯಾಣಿಸುತ್ತಿದ್ದಾಗ ಲಕ್ಷ್ಮಿಗೆ ಬುರ್ರಿ ಜನ ರೆಡ್ಡಿಯ ಪರಿಚಯವಾಗಿದೆ. ನಂತರ ಇದೇ ಅಕ್ರಮ ಸಂಬಂಧಕ್ಕೆ ತಿರುಗಿದೆ.  ಮೂರು ವರ್ಷಗಳ ಕಾಲ ಇಬ್ಬರೂ ಜೊತೆಗಿದ್ದರು.

ಆದರೆ ಮಗನನ್ನು ತೊರೆಯುವಂತೆ ಬುರ್ರಿ ಜನ ರೆಡ್ಡಿ ಲಕ್ಷ್ಮಿಗೆ ಒತ್ತಡ ಹೇರಲು ಪ್ರಾರಂಭಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಲಕ್ಷ್ಮಿಯ ಮೇಲೆ ಅನುಮಾನಗೊಂಡ ರೆಡ್ದಿ, ಮಗನನ್ನು ತೊರೆದು ತನ್ನೊಂದಿಗೆ ಬರದೇ ಇದ್ದಲ್ಲಿ, ಆತನನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದ. ಇದರಿಂದ ಬೇಸತ್ತ ಮಹಿಳೆ ಮತ್ತೆ ಬೇರೆ ಊರಿಗೆ ಸ್ಥಳಾಂತರಗೊಂಡಿದ್ದರು. ಆದರೆ ಅಲ್ಲಿಗೂ ಬಂದು ಕಿರುಕುಳ ನೀಡಲು ಪ್ರಾರಂಭಿಸಿದ ರೆಡ್ಡಿ ಮಾ.23 ರಂದು ಬಾಲಕ ಮನೆಯಲ್ಲಿ ಮಲಗಿರಬೇಕಾದರೆ ರಾತ್ರಿ 11:30ಕ್ಕೆ ತನ್ನ ಸಂಬಂಧಿಯ ಸಹಾಯ ಪಡೆದು ಆತನನ್ನು ಅಮ್ಮನ ಬಳಿ ಕರೆದೊಯ್ಯುವುದಾಗಿ ನಂಬಿಸಿ ಬೈಕ್ ನಲ್ಲಿ ಕರೆದೊಯ್ದಿದ್ದಾನೆ. ಆ ದಿನ ಬಾಲಕನ ತಾಯಿ ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳಿದ್ದರು. ಇದನ್ನೇ ನಂಬಿದ ಬಾಲಕ ರೆಡ್ಡಿ ಜೊತೆ ತೆರಳಿದ್ದಾನೆ. ಈ ವೇಳೆ ಇಬ್ಬರೂ ಬಾಲಕನ ಬಳಿ ಆತನ ತಾಯಿಯ ಬಗ್ಗೆ ಕೇಳಿದ್ದಾರೆ. "ಮೂರು ದಿನಗಳ ಹಿಂದೆ ಊರಿಗೆ ತೆರಳಿದ್ದಾರೆ" ಎಂಬುದನ್ನು ಅರಿತ ರೆಡ್ಡಿ ಹಾಗೂ ಆತನ ಸಂಬಂಧಿ, ಬಾಲಕನನ್ನು ನಡು ರಸ್ತೆಯಲ್ಲಿ ರಸ್ತೆಗೆ ಅಪ್ಪಳಿಸಿ, ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದರು. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp