ತಮಿಳುನಾಡು ಸಿಎಂ ಪಳನಿಸ್ವಾಮಿ ತಾಯಿ ಬಗ್ಗೆ ಮಾತನಾಡಿದ್ದ ಕಾಂಗ್ರೆಸ್-ಡಿಎಂಕೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಬಿಜೆಪಿ ಪ್ರಣಾಳಿಕೆಯನ್ನು ಸರಿಯಾಗಿ ಓದಿ ಮತ ನೀಡಿ. ಅಧಿಕಾರಕ್ಕೆ ಬಂದರೆ ನಮ್ಮ ಪಕ್ಷ ತಮಿಳುನಾಡಿನ ಜನರ ಸೇವೆ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

Published: 30th March 2021 04:49 PM  |   Last Updated: 30th March 2021 04:54 PM   |  A+A-


pm-modi-tn

ಪ್ರಧಾನಿ ಮೋದಿ

Posted By : Lingaraj Badiger
Source : The New Indian Express

ಧರಪುರಂ: ಬಿಜೆಪಿ ಪ್ರಣಾಳಿಕೆಯನ್ನು ಸರಿಯಾಗಿ ಓದಿ ಮತ ನೀಡಿ. ಅಧಿಕಾರಕ್ಕೆ ಬಂದರೆ ನಮ್ಮ ಪಕ್ಷ ತಮಿಳುನಾಡಿನ ಜನರ ಸೇವೆ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಇಂದು ತಮಿಳುನಾಡಿನ ಧರಪುರಂನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳು ಮಹಿಳೆಯರನ್ನು ಅವಮಾನಿಸುತ್ತಿವೆ ಎಂದು ಟೀಕಿಸಿದರು.

ಡಿಎಂಕೆ ಸಂಸದ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರ ತಾಯಿ ಬಗ್ಗೆ ನೀಡಿದ 'ಅವಹೇಳನಕಾರಿ' ಹೇಳಿಕೆಯನ್ನು ಉಲ್ಲೇಖಿಸಿದ ಪ್ರಧಾನಿ, ಇಂದು ಕಾಂಗ್ರೆಸ್ ಮತ್ತು ಡಿಎಂಕೆ ಸಿಎಂ ಪಳನಿಸ್ವಾಮಿ ಅವರ ತಾಯಿಯನ್ನು ಅವಮಾನಿಸಿದ್ದಾರೆ. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ರಾಜ್ಯದ ಇತರ ಅನೇಕ ಮಹಿಳೆಯರನ್ನು ಅವಮಾನಿಸುತ್ತಾರೆ ಎಂದರು.

ಇನ್ನು ಡಿಎಂಕೆ ಶಾಸಕ ದಿಂಡಿಗುಲ್ ಲಿಯೋನಿ ಅವರು ಮಹಿಳೆಯರ ವಿರುದ್ಧ 'ಭಯಾನಕ ಟೀಕೆಗಳನ್ನು' ಮಾಡಿದ್ದಾರೆ. ಆದರೂ ಪಕ್ಷ ಅಂತಹ ಅಭ್ಯರ್ಥಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಎಂಎಸ್‌ಎಂಇಗಳು ಕಳೆದ ವರ್ಷ ನಷ್ಟದ ಹಾದಿಯಲ್ಲಿ ಸಾಗಿದ್ದವು. ತಮ್ಮ ಸರ್ಕಾರ ಹಾಗೂ ತಾವು ವೈಯಕ್ತಿಕವಾಗಿ ಇವುಗಳ ಬೆಳವಣಿಗೆಗೆ ಸಾಧ್ಯವಾದ ಎಲ್ಲವನ್ನೂ ಮಾಡಲು ಬದ್ಧವಾಗಿದ್ದೇವೆ. ಸರ್ಕಾರ ಎಂಎಸ್ಎಂಇಗಳ ಮಾನದಂಡಗಳನ್ನು ಬದಲಾಯಿಸಿದ್ದು, ಅನೇಕ ಜನರ ವಾಣಿಜ್ಯ ವಹಿವಾಟು ಸುಲಭಗೊಳಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. 

ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp