ಪತ್ರಕರ್ತೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಂಚಿಕೆ: ಬಿಜೆಪಿ ನಾಯಕ ಎಸ್.ವಿ. ಶೇಖರ್ ಗೆ ಹೈಕೋರ್ಟ್ ತರಾಟೆ

ಪತ್ರಕರ್ತೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಬಿಜೆಪಿ ನಾಯಕ ಎಸ್ ವಿ ಶೇಖರ್ ನ್ನು ತರಾಟೆಗೆ ತೆಗೆದುಕೊಂಡಿದೆ. 

Published: 31st March 2021 01:28 AM  |   Last Updated: 31st March 2021 12:56 PM   |  A+A-


SV Shekher

ಬಿಜೆಪಿ ನಾಯಕ ಎಸ್ ವಿ ಶೇಖರ್

Posted By : Srinivas Rao BV
Source : The New Indian Express

ಚೆನ್ನೈ: ಪತ್ರಕರ್ತೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಬಿಜೆಪಿ ನಾಯಕ ಎಸ್ ವಿ ಶೇಖರ್ ನ್ನು ತರಾಟೆಗೆ ತೆಗೆದುಕೊಂಡಿದೆ. 

"ನೀವು ಅನಕ್ಷರಸ್ಥರಾ? ಎಂದು ಮದ್ರಾಸ್ ಹೈಕೋರ್ಟ್ ಎಸ್ ವಿ ಶೇಖರ್ ನ್ನು ತರಾಟೆಗೆ ತೆಗೆದುಕೊಂಡಿದೆ. ವಿಚಾರಣಾ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಆರೋಪ ದಾಖಲಿಸುವುದರಿಂದ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆರೋಪ ಪಟ್ಟಿ ದಾಖಲಿಸುವುದರಿಂದ ಮಧ್ಯಂತರ ತಡೆ ನೀಡಿದೆ. 

ಈ ವೇಳೆ, ಪತ್ರಕರ್ತೆಯರ ವಿರುದ್ಧ ಬಂದಿದ್ದ ಅವಹೇಳನಕಾರಿ ಪೋಸ್ಟ್ ನ್ನು ಓದದೇ ಫಾರ್ವರ್ಡ್ ಮಾಡುವುದಕ್ಕೆ ನೀವೇನು ಅನಕ್ಷರಸ್ಥರಾ? ಎಂದು ಕೋರ್ಟ್ ಪ್ರಶ್ನಿಸಿದೆ. 

2018 ರಲ್ಲಿ ತಮಿಳುನಾಡಿನ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರು ತಮ್ಮನ್ನು ಪ್ರಶ್ನೆ ಕೇಳಲು ಬಂದ ಪತ್ರಕರ್ತೆಯ ಕೆನ್ನೆಯನ್ನು ಆಕೆಯ ಅನುಮತಿ ಇಲ್ಲದೇ ತಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಪತ್ರಕರ್ತೆಯರ ವಿರುದ್ಧ ಬಂದಿದ್ದ ಅವಹೇಳನಕಾರಿ ಪೋಸ್ಟ್ ಗೆ ಸಂಬಂಧಪಟ್ಟ ಪ್ರಕರಣ ಇದಾಗಿದೆ. 


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp