ಮೇ 1 ರಿಂದ ಅಪೊಲೊ, ಫೋರ್ಟಿಸ್, ಮ್ಯಾಕ್ಸ್ ಆಸ್ಪತ್ರೆಯ ಆಯ್ದ ಕೇಂದ್ರಗಳಲ್ಲಿ 18-44 ವಯಸ್ಸಿನವರಿಗೆ ಕೋವಿಡ್ ಲಸಿಕೆ

ಅಪೊಲೊ, ಫೋರ್ಟಿಸ್ ಮತ್ತು ಮ್ಯಾಕ್ಸ್ ಎಂಬ ಮೂರು ದೊಡ್ಡ ಖಾಸಗಿ ಆಸ್ಪತ್ರೆಗಳು ಮೇ 1 ರಿಂದ ದೇಶದ ಸೀಮಿತ ಕೇಂದ್ರಗಳಲ್ಲಿ 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಶುಕ್ರವಾರ ಘೋಷಿಸಿವೆ.
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ

ನವದೆಹಲಿ: ಅಪೊಲೊ, ಫೋರ್ಟಿಸ್ ಮತ್ತು ಮ್ಯಾಕ್ಸ್ ಎಂಬ ಮೂರು ದೊಡ್ಡ ಖಾಸಗಿ ಆಸ್ಪತ್ರೆಗಳು ಮೇ 1 ರಿಂದ ದೇಶದ ಸೀಮಿತ ಕೇಂದ್ರಗಳಲ್ಲಿ 18 ರಿಂದ 44 ವರ್ಷದವರಿಗೆ ಕೋವಿಡ್ ಲಸಿಕೆ ನೀಡುವುದಾಗಿ ಶುಕ್ರವಾರ ಘೋಷಿಸಿವೆ. ಆದರೆ ದೆಹಲಿ ಸರ್ಕಾರ ತಯಾರಕರಿಂದ ಲಸಿಕೆ ಸ್ವೀಕರಿಸಿದ ನಂತರ ವ್ಯಾಕ್ಸಿನೇಷನ್ ಆರಂಭಿಸುವುದಾಗಿ ಹೇಳಿದೆ.

"ಸೀಮಿತ ಸೌಲಭ್ಯಗಳಲ್ಲಿ" ಲಸಿಕೆ ನೀಡಲಾಗುವುದು ಎಂದು ಅಪೊಲೊ ಆಸ್ಪತ್ರೆಗಳು ಹೇಳಿದರೆ, "ದೆಹಲಿಯ ಎನ್‌ಸಿಆರ್‌ನಲ್ಲಿನ ನೆಟ್‌ವರ್ಕ್‌ನಲ್ಲಿನ ಆಯ್ದ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ನೀಡಲಾಗುವುದು ಎಂದು ಮ್ಯಾಕ್ಸ್ ಹೆಲ್ತ್‌ಕೇರ್ ಘೋಷಿಸಿದೆ.

ಶನಿವಾರದಿಂದ ಉತ್ತರ ಭಾರತದ ಕೇಂದ್ರಗಳಲ್ಲಿ 18 ರಿಂದ 44 ವರ್ಷದವರಿಗೆ 1,250 ರೂ.ಗಳಿಗೆ ಕೋವಾಕ್ಸಿನ್ ನೀಡಲಾಗುವುದು, ಇದರಲ್ಲಿ ಲಸಿಕೆ ಮತ್ತು ಆಡಳಿತ ಶುಲ್ಕವೂ ಸೇರಿದೆ ಎಂದು ಫೋರ್ಟಿಸ್ ಹೆಲ್ತ್‌ಕೇರ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಧಿಕಾರಿಗಳು ಲಸಿಕೆ ಸರಬರಾಜು ಮಾಡಿದ ತಕ್ಷಣ ಇತರ ನಗರಗಳಲ್ಲಿನ ಫೋರ್ಟಿಸ್ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುವುದು ಎಂದು ಅದು ಹೇಳಿದೆ.

ಅಪೊಲೊ ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಭಾಗವಹಿಸುವುದನ್ನು ಮುಂದುವರೆಸಿದೆ. ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸೀಮಿತ ಅಪೊಲೊ ಆಸ್ಪತ್ರೆಗಳಲ್ಲಿ ಲಸಿಕೆಗಳು ಲಭ್ಯವಿದೆ. ಕೋವಿನ್ ಅಪ್ಲಿಕೇಶನ್‌ನಲ್ಲಿ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಸುರಕ್ಷಿತವಾಗಿರಿ ಎಂದು ಅಪೊಲೊ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com