ಕುಂಭಮೇಳಕ್ಕೆ ತೆರೆ: ಕೊರೋನಾ ಉಲ್ಬಣದ ಮಧ್ಯೆ 70 ಲಕ್ಷ ಮಂದಿ ಭಾಗಿ

ಕೊರೋನಾ ವೈರಸ್ ಉಲ್ಬಣದ ಮಧ್ಯೆ ಹರಿದ್ವಾರದಲ್ಲಿ ನಡೆದ ಕುಂಭಮೇಳಕ್ಕೆ ಶುಕ್ರವಾರ ಅಧಿಕೃತವಾಗಿ ತೆರೆಬಿದ್ದಿದ್ದು, ಮೇಳದಲ್ಲಿ ಬರೋಬ್ಬ ಎಪ್ಪತ್ತು ಲಕ್ಷ ಭಕ್ತರು ಭಾಗವಹಿಸಿದ್ದರು. ಇದು ಕೊರೋನಾ ವೈರಸ್ "ಸೂಪರ್-ಸ್ಪ್ರೆಡರ್" ಆಗಿ ಕಾರ್ಯನಿರ್ವಹಿಸಬಹುದೆಂಬ ಭೀತಿಯನ್ನು ಹುಟ್ಟುಹಾಕಿತು.
ಕುಂಭಮೇಳ
ಕುಂಭಮೇಳ

ಡೆಹ್ರಾಡೂನ್/ರಿಷಿಕೇಶ: ಕೊರೋನಾ ವೈರಸ್ ಉಲ್ಬಣದ ಮಧ್ಯೆ ಹರಿದ್ವಾರದಲ್ಲಿ ನಡೆದ ಕುಂಭಮೇಳಕ್ಕೆ ಶುಕ್ರವಾರ ಅಧಿಕೃತವಾಗಿ ತೆರೆಬಿದ್ದಿದ್ದು, ಮೇಳದಲ್ಲಿ ಬರೋಬ್ಬ ಎಪ್ಪತ್ತು ಲಕ್ಷ ಭಕ್ತರು ಭಾಗವಹಿಸಿದ್ದರು. ಇದು ಕೊರೋನಾ ವೈರಸ್ "ಸೂಪರ್-ಸ್ಪ್ರೆಡರ್" ಆಗಿ ಕಾರ್ಯನಿರ್ವಹಿಸಬಹುದೆಂಬ ಭೀತಿಯನ್ನು ಹುಟ್ಟುಹಾಕಿತು.

ಪವಿತ್ರ ಗಂಗಾದಲ್ಲಿ ಸ್ನಾನ ಮಾಡಲು ಹರಿದ್ವಾರದ ಸುತ್ತಲೂ ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಿದ್ದ ಹಿನ್ನೆಲೆಯಲ್ಲಿ 2021 ಕುಂಭಮೇಳವನ್ನು ಕೇವಲ ಒಂದು ತಿಂಗಳಿಗೆ ಕಡಿತ ಮಾಡಲಾಗಿತ್ತು. 

ಸಾಮಾನ್ಯವಾಗಿ ಕುಂಭಮೇಳ ಮೂರು ತಿಂಗಳುಗಳ ಕಾಲ ನಡೆಯುತ್ತದೆ. ಆದರೆ ಈ ಬಾರಿ ಕೊರೋನಾ ಕಳವಳದಿಂದಾಗಿ ಏಪ್ರಿಲ್ 1ರಂದು ಆರಂಭವಾಗಿ ಏಪ್ರಿಲ್ 30ಕ್ಕೆ ಅಂತ್ಯಗೊಂಡಿದೆ.

ಕುಂಭಮೇಳದಲ್ಲಿ ವೈದ್ಯಕೀಯ ಸಿಬ್ಬಂದಿ ನಡೆಸಿದ ಸುಮಾರು ಎರಡು ಲಕ್ಷ ಕೋವಿಡ್ ಪರೀಕ್ಷೆಗಳಲ್ಲಿ ಸುಮಾರು 2,600 ಭಕ್ತರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 

ಏಪ್ರಿಲ್ 12, 14 ಮತ್ತು 27 ರಂದು ಮೂರು ಶಾಹಿ ಸ್ನಾನಗಳು ನಡೆದವು, ಕೊನೆಯದನ್ನು ಸಾಂಕೇತಿಕವಾಗಿ ಮಾತ್ರ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com