ಸಿಖ್ಖರ ಧಾರ್ಮಿಕ ಗುರು ತೇಜ್ ಬಹದ್ದೂರ್ ರ 400ನೇ ಜಯಂತಿ: ದೆಹಲಿಯ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಧಾನಿ ಪೂಜೆ ಸಲ್ಲಿಕೆ   

ಸಿಖ್ ಧರ್ಮೀಯರ 9ನೇ ಧಾರ್ಮಿಕ ಗುರು ಗುರು ತೇಜ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪರ್ವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ದೆಹಲಿಯಲ್ಲಿರುವ ಗುರುದ್ವಾರ ಗಂಜ್ ಸಾಹಿಬ್ ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Published: 01st May 2021 09:27 AM  |   Last Updated: 01st May 2021 10:56 AM   |  A+A-


PM Modi at Gurudwar in Delhi

ಗುರುದ್ವಾರದಲ್ಲಿ ಪ್ರಧಾನಿ ವಿಶೇಷ ಪೂಜೆ ಸಲ್ಲಿಕೆ

Posted By : Sumana Upadhyaya
Source : ANI

ನವದೆಹಲಿ: ಸಿಖ್ ಧರ್ಮೀಯರ 9ನೇ ಧಾರ್ಮಿಕ ಗುರು ಗುರು ತೇಜ್ ಬಹದ್ದೂರ್ ಅವರ 400 ನೇ ಜಯಂತ್ಯೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ದೆಹಲಿಯಲ್ಲಿರುವ ಗುರುದ್ವಾರ ಗಂಜ್ ಸಾಹಿಬ್ ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಯಾವುದೇ ಭದ್ರತೆ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳಿಲ್ಲದೆ ಸರಳವಾಗಿ ಗುರುದ್ವಾರಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ, ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ಇದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ ಪ್ರಧಾನಿ, 400ನೇ ಪ್ರಕಾಶ್ ಪುರಬ್ ಸಂದರ್ಭದಲ್ಲಿ ನಾನು ಗೌರವಪೂರ್ವಕವಾಗಿ ಗುರು ತೇಜ ಬಹದ್ದೂರ್ ಅವರಿಗೆ ನಮಿಸುತ್ತೇನೆ. ಧೈರ್ಯ, ಸಾಹಸ ಮತ್ತು ಸಮಾಜದ ನಿರ್ಗತಿಕರ ಏಳಿಗೆಗಾಗಿ ಸೇವೆ ಸಲ್ಲಿಸುತ್ತಿದ್ದ ತೇಜ ಬಹದ್ದೂರ್ ಅವರನ್ನು ಜಗತ್ತಿನಾದ್ಯಂತ ಜನರು ಗೌರವಿಸಿ ಪ್ರೀತಿಸುತ್ತಿದ್ದರು. ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಖಂಡಿಸುತ್ತಿದ್ದರು. ಅವರ ಶ್ರೇಷ್ಠ ತ್ಯಾಗ ಶಕ್ತಿ ಮತ್ತು ಪ್ರೇರಣೆಯನ್ನು ಹಲವರಿಗೆ ನೀಡಲಿದೆ ಎಂದು ಹೇಳಿದ್ದಾರೆ.

ಗುರು ತೇಜ ಬಹದ್ದೂರ್ ಅವರ 400ನೇ ಜಯಂತಿ ಸಂದರ್ಭದಲ್ಲಿ ಸಿಖ್ಖರ ಪವಿತ್ರ ಖ್ಯಾತ ದೇವಾಲಯ ಅಮೃತಸರದ ಸ್ವರ್ಣ ಮಂದಿರದಲ್ಲಿ ಭಕ್ತರು ಸರೋವರದಲ್ಲಿ ಸ್ನಾನ ಮಾಡುತ್ತಾರೆ, ಆದರೆ ಈ ಬಾರಿ ಕೊರೋನಾ ಕಾರಣದಿಂದ ಸಾಂಪ್ರದಾಯಿಕವಾಗಿ ಸರಳ ಆಚರಣೆ ನಡೆಯುತ್ತದೆ.

ಸಿಖ್ಖರ 9ನೇ ಧಾರ್ಮಿಕ ಗುರು ತೇಜ ಬಹದ್ದೂರ್ ಏಪ್ರಿಲ್ 1, 1621ರಿಂದ ನವೆಂಬರ್ 11, 1675ರವರೆಗೆ ಧರ್ಮ ಗುರುವಾಗಿದ್ದರು.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp