ದೆಹಲಿಗೆ 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಸರಬರಾಜು ಮಾಡಿ ಇಲ್ಲವೆ ನ್ಯಾಯಾಂಗ ನಿಂದನೆ ಎದುರಿಸಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ

ರಾಷ್ಟ್ರರಾಜಧಾನಿ ದೆಹಲಿಗೆ ಶನಿವಾರವೇ 490 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

Published: 01st May 2021 05:02 PM  |   Last Updated: 01st May 2021 05:02 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : PTI

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಗೆ ಶನಿವಾರವೇ 490 ಮೆಟ್ರಿಕ್ ಟನ್ ಆಮ್ಲಜನಕ ಹಂಚಿಕೆ ಮಾಡಿ ಇಲ್ಲವೇ ನ್ಯಾಯಾಂಗ ನಿಂದನೆಯನ್ನು ಎದುರಿಸಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಆಮ್ಲಜನಕ ಪೂರೈಕೆಯ ಕೊರತೆಯಿಂದಾಗಿ ಬಾತ್ರಾ ಆಸ್ಪತ್ರೆಯಲ್ಲಿ ಎಂಟು ಮಂದಿ ಸಾವನ್ನಪ್ಪಿದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು "ಇನ್ನು ಸಾಕು" ಎಂದು ಸರ್ಕಾರಕ್ಕೆ ತಿವಿದಿದೆ.

"ದೆಹಲಿಯಲ್ಲಿ ಸಾಯುತ್ತಿರುವ ಜನರನ್ನು ನಾವು ಕಣ್ಣುಮುಚ್ಚಿ ನೋಡುತ್ತಿರುತ್ತೇವೆ ಎಂದು ನೀವು ಭಾವಿಸಿದ್ದೀರಾ?" ಕೋರ್ಟ್ ಕೇಂದ್ರವನ್ನು ಕೇಳಿದೆ.

"ನೀವು ವ್ಯವಹಾರ ನಡೆಸುವವರು,  ಆದರೆ ಇದಾಗಲೇ ನೀರು ತಲೆಯ ಮಟ್ಟಕ್ಕಿಂತ ಮೇಲೆ ಹೋಗಿದೆ." ಎಂದು ನ್ಯಾಯಾಲಯ ಹೇಳಿದೆ ಮತ್ತು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಸೋಮವಾರದವರೆಗೆ ಅಥವಾ ಅರ್ಧ ಘಂಟೆಯವರೆಗೆ ಆದೇಶವನ್ನು ಮುಂದೂಡಬೇಕೆಂಬ ಕೇಂದ್ರದ ಮನವಿಯನ್ನು ನಿರಾಕರಿಸಿದೆ.  

ದೆಹಲಿಗೆ ಕೇಂದ್ರವು 490 ಮೆಟ್ರಿಕ್ ಟನ್ ಆಮ್ಲಜನಕವನ್ನು ಹಂಚಿಕೆ ಮಾಡಿದೆ ಮತ್ತು "ನೀವು ಅದನ್ನು ಪೂರೈಸಬೇಕು" ಎಂದು ನ್ಯಾಯಪೀಠ ಹೇಳಿದೆ.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp