ಬಂಗಾಳದ ಫಲಿತಾಂಶ ಉತ್ತರ ಪ್ರದೇಶ ವಿಧಾನಸಭೆ, 2024ರ ಸಾರ್ವತ್ರಿಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ: ಯಶ್ವಂತ್ ಸಿನ್ಹಾ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ ಭಾನುವಾರ ಒತ್ತಾಯಿಸಿದ್ದಾರೆ.

Published: 02nd May 2021 06:31 PM  |   Last Updated: 02nd May 2021 06:31 PM   |  A+A-


ಯಶ್ವಂತ್ ಸಿನ್ಹಾ

Posted By : Raghavendra Adiga
Source : PTI

ಹಜಾರಿಭಾಗ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ತೃಣಮೂಲ ಕಾಂಗ್ರೆಸ್ ಉಪಾಧ್ಯಕ್ಷ ಯಶ್ವಂತ್ ಸಿನ್ಹಾ ಭಾನುವಾರ ಒತ್ತಾಯಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಸಹ ರಾಜೀನಾಮೆ ನೀಡಬೇಕೆಂದು  ಸಿನ್ಹಾ ಒತ್ತಾಯಿಸಿದರು.

ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶವು ಉತ್ತರ ಪ್ರದೇಶ ವಿಧಾನಸಭೆ ಮತ್ತು 2024 ರ ಸಂಸತ್ ಚುನಾವಣೆಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು. ದೇಶದ ಜನರು ಕೇಂದ್ರ ನಾಯಕತ್ವದ ಬದಲಾವಣೆ ಬಯಸುತ್ತಾರೆ "ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು" ಎಂದು ಅಟಲ್ ಬಿಹಾರಿ ವಾಜಪೇಯಿ ಸಂಪುಟ ಸದಸ್ಯರಾಗಿದ್ದ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ  ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಅದ್ಭುತ ಗೆಲುವು ಸಾಧಿಸಿದೆ.  ಈ ಮೂಲಕ ಮೋದಿ ಮತ್ತು ಇತರ ಉನ್ನತ ಬಿಜೆಪಿ ನಾಯಕರ ಗೆಲುವಿನ ಕಸನು ಚೂರಾಗಿದೆ ಎಂದು ಬಿಜೆಪಿ ತ್ಯಜಿಸಿದ ಸಿನ್ಹಾಹೇಳಿದ್ದಾರೆ. ಅಲ್ಲದೆ ಬಿಜೆಪಿ ನಾಯಕರು ಜಾರ್ಖಂಡ್ ಮತ್ತು ಪಕ್ಕದ ರಾಜ್ಯಗಳಿಂದ ಜನರನ್ನು ಕರೆತಂದು ರಾಜ್ಯದಲ್ಲಿ ಸಾಮೂಹಿಕ ಬೆಂಬಲವನ್ನು ಪಡೆದಿದ್ದಾರೆ ಎಂದು ಅವರು ಆರೋಪಿಸಿದರು. ತಮ್ಮ ಪ್ರಚಾರದ ಸಮಯದಲ್ಲಿ ಪಶ್ಚಿಮ ಬಂಗಾಳದ ಜನರ ಮುಂದೆ ಬ್ಯಾನರ್ಜಿ ಅವರನ್ನು ಅವಮಾನಿಸಿದ್ದಕ್ಕಾಗಿ ಅವರು ಕೇಸರಿ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದ್ದರು,

ಇದು ಕೋಟ್ಯಂತರ ಬಂಗಾಳಿಗಳ ಭಾವನೆಗಳನ್ನು ನೋಯಿಸಿದೆ.ಜನರು ಮೋದಿ ಮತ್ತು ಷಾ ಇಬ್ಬರಿಗೂ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ. ಟಿಎಂಸಿಗೆ ಮತ ಚಲಾಯಿಸುವ ಮೂಲಕ ಅವರು ಬ್ಯಾನರ್ಜಿಯೊಂದಿಗೆ ಒಗ್ಗಟ್ಟಾಗಿ ನಿಂತಿದ್ದಾರೆ ಎಂದು ಸಿನ್ಹಾ ಹೇಳಿದರು. ಚುನಾವಣಾ ಫಲಿತಾಂಶವು ಬ್ಯಾನರ್ಜಿಯವರ ಕೆಲಸ ಮತ್ತು ಅವರ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಯಿಂದ ಜನರು ತೃಪ್ತರಾಗಿದ್ದಾರೆ ಎಂಬ ಸೂಚನೆಯಾಗಿದೆ. 'ಅಸೋಲ್ ಪೊರಿಬೋರ್ತಿನ್  ಎಂಬ ಬಿಜೆಪಿ ನಾಯಕರ ಹೇಳಿಕೆಯು ಜನರನ್ನು ಮನವೊಲಿಸುವಲ್ಲಿ ವಿಫಲವಾಗಿದೆ ಎಂದು ಅವರು ಹೇಳಿದರು.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp