ಕೋವಿಡ್-19: ತೈವಾನ್ ನಿಂದ ಭಾರತಕ್ಕೆ 500 ಆಕ್ಸಿಜನ್ ಸಿಲಿಂಡರ್, ಮತ್ತಿತರ ವೈದ್ಯಕೀಯ ಉಪಕರಣಗಳ ಪೂರೈಕೆ

ವಿನಾಶಕಾರಿ ಕೊರೋನಾವೈರಸ್ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗಿರುವ ತೈವಾನ್ ಭಾನುವಾರ 150 ಆಕ್ಸಿಜನ್ ಸಾಂದ್ರಕಗಳು ಮತ್ತು 500 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ವಿನಾಶಕಾರಿ ಕೊರೋನಾವೈರಸ್ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವಾಗಿರುವ
ತೈವಾನ್ ಭಾನುವಾರ 150 ಆಕ್ಸಿಜನ್ ಸಾಂದ್ರಕಗಳು ಮತ್ತು 500 ಆಕ್ಸಿಜನ್ ಸಿಲಿಂಡರ್ ಗಳನ್ನು ಪೂರೈಸಿದೆ.

ಮೊದಲ ಹಂತದಲ್ಲಿ 150 ಆಕ್ಸಿಜನ್ ಸಾಂದ್ರಕಗಳು ಹಾಗೂ 500 ಆಕ್ಸಿಜನ್ ಸಿಲಿಂಡರ್ ಗಳು ಇಂದು ನವದೆಹಲಿಗೆ ಆಗಮಿಸಿದ್ದು, ಇನ್ನೂ ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಶೀಘ್ರದಲ್ಲಿಯೇ ಭಾರತಕ್ಕೆ ಪೂರೈಸಲಾಗುವುದು ಎಂದು ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಸದೃಢವಾದ ಸ್ನೇಹತ್ವ ಹೊಂದಿರುವ ಭಾರತಕ್ಕೆ ತೈವಾನ್ ವೈದ್ಯಕೀಯ ಸಲಕರಣೆಗೆಳನ್ನು ಪೂರೈಸಿದೆ. ಇನ್ನೂ ಹೆಚ್ಚಿನ ವೈದ್ಯಕೀಯ ನೆರವನ್ನು ಒದಗಿಸಲಾಗುವುದು ಎಂದು ಭಾರತದಲ್ಲಿ ತೈವಾನ್ ಪ್ರತಿನಿಧಿಸುವ ಕಚೇರಿ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ತಿಳಿಸಿದೆ.

ಭಾರತ ಮತ್ತು ತೈವಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಸದೃಢವಾಗಿರಲಿ ಎಂದು ತೈವಾನ್ ಸರ್ಕಾರದ
ಪರವಾಗಿ ಹಾರೈಸುವುದಾಗಿ ತೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ಹೇಳಿದೆ. 

ಈ ಮಧ್ಯೆ ಉಜ್ಬೇಕಿಸ್ತಾನ್ 100 ಆಕ್ಸಿಜನ್ ಸಾಂದ್ರಕಗಳು, ರೆಮಿಡಿಸಿವಿರ್ ಮತ್ತಿತರ ಔಷಧಿಯನ್ನು ಭಾರತಕ್ಕೆ ಪೂರೈಸಿದೆ. ಕೋವಿಡ್-19 ಎರಡನೇ ಅಲೆ ವಿರುದ್ಧದ ಹೋರಾಟದಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ಐರ್ಲೆಂಡ್, ಬೆಲ್ಜಿಯಂ, ರೊಮಾನಿಯಾ, ಲಕ್ಸೆಂಬರ್ಗ್, ಸಿಂಗಾಪುರ, ಪೋರ್ಚಗಲ್, ಸ್ವಿಡನ್, ನ್ಯೂಜಿಲೆಂಡ್, ಕುವೈತ್, ಮಾರಿಷಿಯಸ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಭಾರತಕ್ಕೆ ನೆರವನ್ನು ನೀಡುತ್ತಿವೆ. ಹಲವು ರಾಷ್ಟ್ರಗಳು ಈಗಾಗಲೇ ವೈದ್ಯಕೀಯ ಸಲಕರಣೆಗಳನ್ನು
 ಪೂರೈಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com