ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು 30.21 ಬಿಲಿಯನ್ ಡಾಲರ್ ಗೆ ಜಿಗಿತ!

ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು ಪ್ರಮಾಣ 30.21 ಬಿಲಿಯನ್ ಡಾಲರ್ ಗೆ ಜಿಗಿದಿದ್ದು,  ಕಳೆದ ವರ್ಷದ ಏಪ್ರಿಲ್ ಗಿಂತ ಈ ವರ್ಷದ ಏಪ್ರಿಲ್ ನಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 
ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು 30.21 ಬಿಲಿಯನ್ ಡಾಲರ್ ಗೆ ಜಿಗಿತ!
ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು 30.21 ಬಿಲಿಯನ್ ಡಾಲರ್ ಗೆ ಜಿಗಿತ!

ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಭಾರತದ ರಫ್ತು ಪ್ರಮಾಣ 30.21 ಬಿಲಿಯನ್ ಡಾಲರ್ ಗೆ ಜಿಗಿದಿದ್ದು,  ಕಳೆದ ವರ್ಷದ ಏಪ್ರಿಲ್ ಗಿಂತ ಈ ವರ್ಷದ ಏಪ್ರಿಲ್ ನಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 

ಮೇ.02 ರಂದು ಬಿಡುಗಡೆಯಾಗಿರುವ ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ಆಮದು ಕೂಡ ಹೆಚ್ಚಿದ್ದು 2020 ರ ಏಪ್ರಿಲ್ ನಲ್ಲಿ 17.09 ಬಿಲಿಯನ್ ಡಾಲರ್ ನಷ್ಟಿದ್ದ ಆಮದು 20221 ರಲ್ಲಿ 45.45 ಬಿಲಿಯನ್ ಡಾಲರ್ ಗೆ ಏರಿಕೆ ಕಂಡಿದೆ. ಈ ಮೂಲಕ ಭಾರತ-ಅಮೆರಿಕದ ನಡುವೆ ಟ್ರೇಡ್ ಡಿಫಿಸಿಟ್ 15.24 ಬಿಲಿಯನ್ ಡಾಲರ್ ನಷ್ಟಿದೆ. ಏಪ್ರಿಲ್ 2020 ರಲ್ಲಿ 6.92 ರಷ್ಟಿದ್ದ ಟ್ರೇಡ್ ಡಿಫಿಸಿಟ್ ಶೇ.120.34 ರಷ್ಟು ಏರಿಕೆಯಾಗಿದೆ. 

ಕೋವಿಡ್-19 ಲಾಕ್ ಡೌನ್ ನ ಪರಿಣಾಮವಾಗಿ ಕಳೆದ ವರ್ಷ ರಫ್ತು ದಾಖಲೆಯ ಶೇ.60.28 ರಷ್ಟು ಕುಸಿದಿತ್ತು. ಆದರೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಅದು 34.45 ಬಿಲಿಯನ್ ನಷ್ಟು ಏರಿಕೆಯಾಗಿ ಶೇ.60.29 ರಷ್ಟಕ್ಕೆ ಏರಿಕೆಯಾಗಿತ್ತು. ಕಳೆದ ವರ್ಷ ಏಪ್ರಿಲ್ ನಲ್ಲಿ 4.65 ರಷ್ಟಿದ್ದ ತೈಲ ಆಮದು ಏಪ್ರಿಲ್ 2021 ರಲ್ಲಿ ತೈಲ ಆಮದು 10.8 ಬಿಲಿಯನ್ ನಷ್ಟಿದೆ. 

ರತ್ನ, ಚಿನ್ನಾಭರಣ, ಸೆಣಬು, ಕಾರ್ಪೆಟ್, ಕರಕುಶಲ ವಸ್ತುಗಳು, ಚರ್ಮ, ಎಲೆಕ್ಟ್ರಾನಿಕ್ ವಸ್ತುಗಳು, ತೈಲ  ಗೋಡಂಬಿ, ಎಂಜಿನಿಯರಿಂಗ್ ಉತ್ಪನ್ನಗಳು, ಪೆಟ್ರೋಲಿಯಂ ಉತ್ಪನ್ನಗಳು, ಸಮುದ್ರ ಉತ್ಪನ್ನಗಳು ಮತ್ತು ರಾಸಾಯನಿಕಗಳು ಹೆಚ್ಚು ರಫ್ತಾಗಿರುವ ಪದಾರ್ಥಗಳಾಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com