ಕೈಗಾರಿಕಾ ಘಟಕಗಳ ಬಳಿ 10,000 ಆಮ್ಲಜನಕಯುಕ್ತ ಬೆಡ್ ಒಳಗೊಂಡ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಕೇಂದ್ರ ಸಿದ್ಧತೆ

ಕೋವಿಡ್ ವಿರುದ್ಧ ಹೋರಾಡಲು ಜೀವ ಉಳಿಸುವ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಕೈಗಾರಿಕಾ ಘಟಕಗಳ ಬಳಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಅಗತ್ಯವಾದ ಶುದ್ಧ ಆಮ್ಲಜನಕವನ್ನು ಉತ್ಪಾದಿಸುವುದರೊಡನೆ 10,000 ಆಮ್ಲಜನಕಯುಕ್ತ ಬೆಡ್ ಗಳನ್ನು ಅಲ್ಪಾವಧಿಯಲ್ಲಿಯೇ ಲಭ್ಯವಾಗುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.
ಕೈಗಾರಿಕಾ ಘಟಕಗಳ ಬಳಿ 10,000 ಆಮ್ಲಜನಕಯುಕ್ತ ಬೆಡ್ ಒಳಗೊಂಡ ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣಕ್ಕೆ ಕೇಂದ್ರ ಸಿದ್ಧತೆ

ನವದೆಹಲಿ: ಕೋವಿಡ್ ವಿರುದ್ಧ ಹೋರಾಡಲು ಜೀವ ಉಳಿಸುವ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಕೈಗಾರಿಕಾ ಘಟಕಗಳ ಬಳಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಅಗತ್ಯವಾದ ಶುದ್ಧ ಆಮ್ಲಜನಕವನ್ನು ಉತ್ಪಾದಿಸುವುದರೊಡನೆ 10,000 ಆಮ್ಲಜನಕಯುಕ್ತ ಬೆಡ್ ಗಳನ್ನು ಅಲ್ಪಾವಧಿಯಲ್ಲಿಯೇ ಲಭ್ಯವಾಗುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.

ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆಸಿದ ಅನೇಕ ಸಭೆಗಳ ನಂತರ ಅಸ್ತಿತ್ವದಲ್ಲಿರುವ ಸಾರಜನಕ ಘಟಕಗಳನ್ನು ಆಮ್ಲಜನಕವನ್ನು ಉತ್ಪಾದಿಸಲು ಪರಿವರ್ತಿಸುವ ಸಾಧ್ಯತೆಗಳನ್ನು ಮತ್ತು ಸಾರಜನಕ ಘಟಕಗಳು ಇರುವಂತಹ ಹಲವಾರು ಸಂಭಾವ್ಯ ಕೈಗಾರಿಕೆಗಳನ್ನು ಆಮ್ಲಜನಕದ ಉತ್ಪಾದನೆಗಾಗಿ ಗುರುತಿಸಲಾಗಿದೆ ಎಂದು ಹೇಳಿಕೆಯೊಂದು  ತಿಳಿಸಿದೆ.

ಆಮ್ಲಜನಕದ ಬಳಕೆಯ ಕುರಿತ ಸಭೆಯ ನಂತರ, ಉಕ್ಕಿನ ಸ್ಥಾವರಗಳು, ಪೆಟ್ರೋಕೆಮಿಕಲ್ ಘಟಕಗಳೊಂದಿಗೆ ಸಂಸ್ಕರಣಾಗಾರಗಳು, ಸಮೃದ್ಧ ದಹನ ಪ್ರಕ್ರಿಯೆಗಳನ್ನು ಬಳಸುವ ಕೈಗಾರಿಕೆಗಳು ಮತ್ತು ವಿದ್ಯುತ್ ಸ್ಥಾವರಗಳು ಆಮ್ಲಜನಕವನ್ನು ಉತ್ಪಾದಿಸುವ ಆಮ್ಲಜನಕ ಘಟಕಗಳನ್ನು ಹೊಂದಿವೆ ಎಂದು ಸರ್ಕಾರ ಗಮನಿಸಿದೆ. "ಈ ಆಮ್ಲಜನಕವನ್ನು ವೈದ್ಯಕೀಯ ಬಳಕೆಗಾಗಿ ಬದಲಿಸಬಹುದು" ಎಂದು ಅದು ಹೇಳಿದೆ.

ಅಗತ್ಯವಾದ ಶುದ್ಧಆಮ್ಲಜನಕವನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳನ್ನು ಗುರುತಿಸುವುದು, ನಗರ ದಟ್ಟಣೆಯ ಪ್ರದೇಶಗಳು ಮತ್ತು ಬೇಡಿಕೆ ಇರುವ ಸ್ಥಳಗಳ ಸಮೀಪವಿರುವುದನ್ನು ಶಾರ್ಟ್ ಲಿಸ್ಟ್  ಮಾಡುವುದು ಮತ್ತು ಆ ಮೂಲಕ ಅಂತಹಾ ಘಟಕಗಳ ಬಳಿ ಆಮ್ಲಜನಕಯುಕ್ತ ಬೆಡ್  ಗಳೊಂದಿಗೆ ತಾತ್ಕಾಲಿಕ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಸರ್ಕಾರದ ಕಾರ್ಯಯೋಜನೆಯಾಗಿದೆ.

ಅಂತಹ ಐದು ಆಸ್ಪತ್ರೆಗಳಿಗೆ ಪ್ರಾಯೋಗಿಕ ಕಾರ್ಯಾಚರಣೆಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ, ಮತ್ತು ಇದು ಉತ್ತಮ ಪ್ರಗತಿ ಕಾಣುತ್ತಿದೆ.ಇದನ್ನು ಪಿಎಸ್ ಯುಗಳು ಅಥವಾ ಸ್ಥಾವರವನ್ನು ನಿರ್ವಹಿಸುವ ಖಾಸಗಿ ಕೈಗಾರಿಕೆಗಳ ಮೂಲಕ ಮತ್ತು ಕೇಂದ್ರ ಮತ್ತು ರಾಜ್ಯಗಳ ಸಮನ್ವಯದಿಂದ ಸಾಧಿಸಲಾಗುತ್ತಿದೆ. "ಅಂತಹ ಘಟಕಗಳ ಬಳಿ ತಾತ್ಕಾಲಿಕ ಆಸ್ಪತ್ರೆಗಳನ್ನು ಮಾಡುವ ಮೂಲಕ ಅಲ್ಪಾವಧಿಯಲ್ಲಿಯೇ ಸುಮಾರು 10,000 ಆಮ್ಲಜನಕಯುಕ್ತ ಬೆಡ್  ಗಳು ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಆಮ್ಲಜನಕಯುಕ್ತ ಬೆಡ್ ಗಳೊಂದಿಗೆ ಇಂತಹ ಹೆಚ್ಚಿನ ಸೌಲಭ್ಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸಲಾಗುತ್ತಿದೆ" ಎಂದು ಅದು ಹೇಳಿದೆ .

ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ಸ್ಥಾವರಗಳ ಸ್ಥಾಪನೆಯ ಪ್ರಗತಿಯನ್ನು ಮೋದಿ ಪರಿಶೀಲಿಸಿದರು ಮತ್ತು ಪಿಎಂ ಕೇರ್ಸ್ ಫಂಡ್, ಪಿಎಸ್ ಯುಗಳು ಮತ್ತು ಇತರರ ಕೊಡುಗೆಗಳ ಮೂಲಕ ಸುಮಾರು 1,500 ಪಿಎಸ್ಎ ಸ್ಥಾವರಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಲಾಯಿತು. ಈ ಸ್ಥಾವರಗಳು ಶೀಘ್ರವಾಗಿ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಎಂದು ಸರ್ಕಾರ ಹೇಳಿದೆ. 

ಅಸ್ತಿತ್ವದಲ್ಲಿರುವ ಸಾರಜನಕ ಘಟಕಗಳನ್ನು ಆಮ್ಲಜನಕವನ್ನು ಉತ್ಪಾದಿಸುವಂತೆ ಪರಿವರ್ತನೆಯ ಕಾರ್ಯಸಾಧ್ಯತೆಯನ್ನು ಅನ್ವೇಷಿಸಿದ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಮತ್ತೊಂದು ಸಭೆಯಲ್ಲಿ ಆಮ್ಲಜನಕದ ಉತ್ಪಾದನೆಗಾಗಿ ಅಸ್ತಿತ್ವದಲ್ಲಿರುವ ಪಿಎಸ್‌ಎ ಸಾರಜನಕ ಘಟಕಗಳನ್ನು  ಪರಿವರ್ತಿಸುವ ಪ್ರಕ್ರಿಯೆಯ ಕುರಿತು ಚರ್ಚಿಸಲಾಯಿತು. ಸಾರಜನಕ ಘಟಕಗಳಲ್ಲಿ  , ಕಾರ್ಬನ್ ಆಣ್ವಿಕ ಜರಡಿ (ಸಿಎಮ್ಎಸ್) ಅನ್ನು ಬಳಸಲಾಗುತ್ತದೆ, ಆದರೆ ಆಮ್ಲಜನಕವನ್ನು ಉತ್ಪಾದಿಸಲುಜಿಯೋಲೈಟ್ ಆಣ್ವಿಕ ಜರಡಿ (ಝಡ್ ಎಂಎಸ್) ಅಗತ್ಯವಿರುತ್ತದೆ ಎಂದು ಸರ್ಕಾರ ಗಮನಿಸಿದೆ, ಸಿಎಮ್‌ಎಸ್ ಅನ್ನು ಝಡ್ ಎಂಎಸ್ ಗೆ  ಬದಲಾಯಿಸುವ ಮೂಲಕ ಮತ್ತು ಆಮ್ಲಜನಕ ವಿಶ್ಲೇಷಕ, ನಿಯಂತ್ರಣದಂತಹ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ಪ್ರಕ್ರಿಯೆ ನಡೆಯಬೇಕಿದೆ.

ಪಿಎಂ ಪ್ರಧಾನ ಕಾರ್ಯದರ್ಶಿ, ಕ್ಯಾಬಿನೆಟ್ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸಭೆಗಳಲ್ಲಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com