ದೇವರನಾಡು ಕೇರಳದಲ್ಲಿ ಈ ಬಾರಿ ವಿಜಯದ ಮಾಲೆ ಯಾರಿಗೆ? ಆರಂಭಿಕ ಎಣಿಕೆಯಲ್ಲಿ ಎಲ್ ಡಿಎಫ್ ಗೆ ಮುನ್ನಡೆ, ಯುಡಿಎಫ್ ಗೆ ಸತ್ವ ಪರೀಕ್ಷೆ  

ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಹಂಚಿಕೆಯ ನಾಲ್ಕು ದಶಕಗಳ ಚಿತ್ರಣವನ್ನು ಈ ಬಾರಿ ಎಡ ಪ್ರಜಾಸತ್ತಾತ್ಮಕ ಬಣ(ಯುಡಿಎಫ್) ಮುರಿಯುತ್ತದೆಯೇ ಎಂಬ ಸಂಶಯ ಈ ಬಾರಿ ಆರಂಭಿಕ ಚುನಾವಣಾ ಫಲಿತಾಂಶದಲ್ಲಿ ಕಂಡುಬರುತ್ತಿದೆ.

Published: 02nd May 2021 10:27 AM  |   Last Updated: 02nd May 2021 10:27 AM   |  A+A-


Officials at a counting room in Kerala.

ಮತ ಎಣಿಕೆ ಕೋಣೆಯಲ್ಲಿ ಮತಗಳ ಎಣಿಕೆ

Posted By : Sumana Upadhyaya
Source : The New Indian Express

ತಿರುವನಂತಪುರ: ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಹಂಚಿಕೆಯ ನಾಲ್ಕು ದಶಕಗಳ ಚಿತ್ರಣವನ್ನು ಈ ಬಾರಿ ಎಡ ಪ್ರಜಾಸತ್ತಾತ್ಮಕ ಬಣ(ಯುಡಿಎಫ್) ಮುರಿಯುತ್ತದೆಯೇ ಎಂಬ ಸಂಶಯ ಈ ಬಾರಿ ಆರಂಭಿಕ ಚುನಾವಣಾ ಫಲಿತಾಂಶದಲ್ಲಿ ಕಂಡುಬರುತ್ತಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅವರ ಸಂಪುಟದ 11 ಸಚಿವರು, ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ, ಹಿರಿಯ ಕಾಂಗ್ರೆಸ್ ಮುಖಂಡ ಊಮನ್ ಚಾಂಡಿ, ಮೆಟ್ರೊಮ್ಯಾನ್ ಇ ಶ್ರೀಧರನ್, ಮಾಜಿ ಕೇಂದ್ರ ಸಚಿವ ಕೆ ಜೆ ಅಲ್ಫೊನ್ಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೀಗೆ ಪ್ರಮುಖರು ಸೇರಿ 140 ಕ್ಷೇತ್ರಗಳಿಗೆ 957 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

2016ರಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಕೇರಳದ ಕಾಂಗ್ರೆಸ್ ಅಧ್ಯಕ್ಷ ಜೋಸ್ ಕೆ ಮಣಿ ಅವರಿಗೆ ಈ ಚುನಾವಣೆ ಮುಖ್ಯವಾಗಿದೆ. ಇವರು ದಶಕಗಳ ಕಾಲ ಯುಡಿಎಫ್ ಜೊತೆ ಹೊಂದಿದ್ದ ಮೈತ್ರಿಯನ್ನು ಮುರಿದು ಎಡ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೇರಳದಲ್ಲಿ ಬಹಳ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. ಹತ್ತಾರು ಸಭೆಗಳು, ರ್ಯಾಲಿಗಳು ಭಾಗಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿರುವ ಕಾಂಗ್ರೆಸ್ ಗೆ ಕೇರಳದಲ್ಲಿ ಗೆಲುವಿನ ಭರವಸೆ ಸಿಗಬಹುದೇ? 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp