ನಂದಿಗ್ರಾಮ: ಸುವೇಂದು ಅಧಿಕಾರಿ ವಿರುದ್ಧ 1200 ಮತಗಳಿಂದ ಗೆದ್ದ ಮಮತಾ ಬ್ಯಾನರ್ಜಿ!
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ತೊಡೆ ತಟ್ಟಿದ್ದ ಮಮತಾ ಬ್ಯಾನರ್ಜಿ ಅವರು ಇದೀಗ ಬಿಜೆಪಿ ಅಭ್ಯರ್ಥಿ ಸುವೇಂದ್ರ ಅಧಿಕಾರಿ ವಿರುದ್ಧ ಗೆಲುವು ಪಡೆದಿದ್ದಾರೆ.
Published: 02nd May 2021 04:45 PM | Last Updated: 02nd May 2021 04:45 PM | A+A A-

ಮೋದಿ-ಮಮತಾ
ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ತೊಡೆ ತಟ್ಟಿದ್ದ ಮಮತಾ ಬ್ಯಾನರ್ಜಿ ಅವರು ಇದೀಗ ಬಿಜೆಪಿ ಅಭ್ಯರ್ಥಿ ಸುವೇಂದ್ರ ಅಧಿಕಾರಿ ವಿರುದ್ಧ ಗೆಲುವು ಪಡೆದಿದ್ದಾರೆ.
ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಸ್ವಕ್ಷೇತ್ರದಲ್ಲೇ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದರು. ಇದೀಗ ಸುವೇಂದು ಅಧಿಕಾರಿಗೆ ಮಣ್ಣುಮುಕ್ಕಿಸಿರುವ ಮಮತಾ ಕೇವಲ 1200 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಸತತ ಮೂರನೇ ಬಾರಿಗೆ ಸಿಎಂ ಆಯ್ಕೆಯಾಗಿದ್ದಾರೆ.
ಬಂಗಾಳದಲ್ಲಿ 294 ಕ್ಷೇತ್ರಗಳಿಗೆ 8 ಸುತ್ತಿಗಳಲ್ಲಿ ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು ಟಿಎಂಸಿ ಬರೋಬ್ಬರಿ 210 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ತೀವ್ರ ಪ್ರಚಾರ ನಡೆಸಿದ್ದ ಬಿಜೆಪಿ ಕೇವಲ 80 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಂಗಾಳದಲ್ಲಿ ಸರಳ ಬಹುಮತಕ್ಕೆ 148 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು.