ಒಡಿಶಾದಲ್ಲಿ ಮೇ 5 ರಿಂದ 14 ದಿನ ಲಾಕ್ ಡೌನ್ 

 ಕೋವಿಡ್-19 ನಿಂದ ಒಡಿಶಾ ರಾಜ್ಯಾದ್ಯಂತ ಪರಿಸ್ಥಿತಿ ತೀವ್ರ ರೀತಿಯಲ್ಲಿ ಹದೆಗೆಟ್ಟಿದ್ದು, ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ 14 ದಿನಗಳ ಲಾಕ್ ಡೌನ್ ನ್ನು ಸರ್ಕಾರ ಭಾನುವಾರ ಘೋಷಿಸಿದೆ. ಮೇ 5ರಿಂದ ಮೇ 19ರವರೆಗೂ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಕೋವಿಡ್-19 ನಿಂದ ಒಡಿಶಾ ರಾಜ್ಯಾದ್ಯಂತ ಪರಿಸ್ಥಿತಿ ತೀವ್ರ ರೀತಿಯಲ್ಲಿ ಹದೆಗೆಟ್ಟಿದ್ದು, ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ 14 ದಿನಗಳ ಲಾಕ್ ಡೌನ್ ನ್ನು ಸರ್ಕಾರ ಭಾನುವಾರ ಘೋಷಿಸಿದೆ. ಮೇ 5ರಿಂದ ಮೇ 19ರವರೆಗೂ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

 ಮುಖ್ಯ ಕಾರ್ಯದರ್ಶಿ ಸುರೇಶ್ ಚಂದ್ರ ಮಹಾಪಾತ್ರ ಲಾಕ್ ಡೌನ್ ನಿರ್ಧಾರವನ್ನು ಪ್ರಕಟಿಸಿದ್ದಾರೆ.  ಆದಾಗ್ಯೂ,ಎಲ್ಲಾ ನಗರಗಳಲ್ಲಿ  ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗಿನ  ವೀಕೆಂಡ್ ಬಂದ್ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಅಂತರ್ ರಾಜ್ಯ ಮತ್ತು ರಾಜ್ಯದೊಳಗೆ ಮೇ 19ರವರೆಗೂ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೃಷಿ  ಸಂಬಂಧಿತ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.ನರ್ಸರಿ,ನೀರಾವರಿ,ಸಂಸ್ಕರಣೆ ಮತ್ತು ಪ್ಯಾಕೇಜ್ ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಮಹಾಪಾತ್ರ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com