ತಮಿಳು ನಾಡು ಮುಂದಿನ ಐದು ವರ್ಷ ಯಾರ ಮುಡಿಗೆ? ಸ್ಟಾಲಿನ್-ಪಳನಿಸ್ವಾಮಿ ಭವಿಷ್ಯ ಇಂದು ನಿರ್ಧಾರ 

ತಮಿಳು ನಾಡು ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದು. ಇಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಇದು ರಾಜ್ಯದ ಮುಂದಿನ 5 ವರ್ಷಗಳ ಆಡಳಿತಕ್ಕೆ ದಿಕ್ಸೂಚಿಯಾಗುವುದು ಮಾತ್ರವಲ್ಲದೆ ದಶಕಗಳವರೆಗೆ ತಮಿಳು ನಾಡಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಬಹುದು.

Published: 02nd May 2021 08:24 AM  |   Last Updated: 02nd May 2021 08:24 AM   |  A+A-


Political leaders of Tamil Nadu

ತಮಿಳು ನಾಡಿನ ರಾಜಕೀಯ ನಾಯಕರು

Posted By : Sumana Upadhyaya
Source : The New Indian Express

ಚೆನ್ನೈ: ತಮಿಳು ನಾಡು ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದು. ಇಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಇದು ರಾಜ್ಯದ ಮುಂದಿನ 5 ವರ್ಷಗಳ ಆಡಳಿತಕ್ಕೆ ದಿಕ್ಸೂಚಿಯಾಗುವುದು ಮಾತ್ರವಲ್ಲದೆ ದಶಕಗಳವರೆಗೆ ತಮಿಳು ನಾಡಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಬಹುದು.

ಈ ಬಾರಿ ರಾಜ್ಯದ ಇಬ್ಬರು ಅನಭಿಷಿಕ್ತ ರಾಜಕೀಯ ನಾಯಕರಾದ ಎರಡು ಬಲಾಢ್ಯ ಸ್ಥಳೀಯ ಪಕ್ಷಗಳನ್ನು ಕಟ್ಟಿ ಬೆಳೆಸಿದ ಎಂ ಕರುಣಾನಿಧಿ ಮತ್ತು ಜೆ ಜಯಲಲಿತಾ ಇಬ್ಬರೂ ಇಲ್ಲ. ಜನತೆ ಈ ಬಾರಿ ಇಬ್ಬರು ಖ್ಯಾತ ನಾಯಕರಾದ ಎಂ ಕೆ ಸ್ಟಾಲಿನ್ ಮತ್ತು ಎಡಪ್ಪಡಿ ಕೆ ಪಳನಿಸ್ವಾಮಿ ಅವರ ಮಧ್ಯೆ ಆಯ್ಕೆ ಮಾಡಬೇಕು. ಇವರಿಗೆ ಸ್ವಲ್ಪ ಮಟ್ಟಿಗೆ ಸ್ಪರ್ಧೆಯೊಡ್ಡಲು ನಟ ಕಮಲ್ ಹಾಸನ್, ಟಿಟಿವಿ ದಿನಕರನ್ ಮತ್ತು ಸೀಮನ್ ಬಂದಿದ್ದರು.

ಎಂ ಕೆ ಸ್ಟಾಲಿನ್ ಮತ್ತು ಕೆ. ಪಳನಿಸ್ವಾನಿ ಇಬ್ಬರಿಗೂ ತಮ್ಮ ರಾಜಕೀಯ ಭವಿಷ್ಯವನ್ನು ಸ್ಪಷ್ಟವಾಗಿ ನಿರ್ಧರಿಸುವ ಸಮಯ. ಕಳೆದ 10 ವರ್ಷಗಳಿಂದ ಸ್ಟಾಲಿನ್ ಪಕ್ಷ ಅಧಿಕಾರದಲ್ಲಿ ಇರಲಿಲ್ಲ. ಅವರಿಗೆ ಈಗ ಉಳಿವಿನ ಪ್ರಶ್ನೆ. ಇನ್ನು ಪಳನಿಸ್ವಾಮಿಯವರಿಗೆ ತಮ್ಮ ಪಕ್ಷವನ್ನು ರಾಜ್ಯದಲ್ಲಿ ಪ್ರಭಾವದಲ್ಲಿ ಉಳಿಸಲು ಅಧಿಕಾರ ಮರಳಿ ಪಡೆಯುವುದು ಮುಖ್ಯವಾಗಿರುತ್ತದೆ.

ಇಂದು ದೇಶದ ಮಟ್ಟದಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಗಳು ವಿಶೇಷವಾಗಿದೆ. ಸದ್ಯಕ್ಕೆ ದೇಶಾದ್ಯಂತ ಬಿಜೆಪಿ ಪ್ರಮುಖ ಅಧಿಕಾರಯುತವಾದ ಪಕ್ಷವಾಗಿದೆ.

ಇನ್ನು ಸರ್ಕಾರದ ಮಟ್ಟದಲ್ಲಿ, ತಮಿಳು ನಾಡಿಗೆ ಇಂದು ಸುಭದ್ರ ಸರ್ಕಾರದ ಅಗತ್ಯವಿದೆ. ಅಲ್ಲಿ ಕೂಡ ಕಳೆದ ವರ್ಷದಿಂದ ಕೋವಿಡ್-19 ಸಾಂಕ್ರಾಮಿಕದಿಂದ ಸಾಕಷ್ಟು ಸಮಸ್ಯೆ, ಸಾವು-ನೋವು, ಆರ್ಥಿಕ ಕುಸಿತ ಉಂಟಾಗಿದೆ. ಪಳನಿಸ್ವಾಮಿ ಸರ್ಕಾರ ಸಾಕಷ್ಟು ಏಳು ಬೀಳುಗಳನ್ನು ಕಂಡಿತ್ತು. ಇನ್ನು ಮುಂದೆ ಅಧಿಕಾರಕ್ಕೆ ಬರುವ ಪಕ್ಷಕ್ಕೆ ಕೂಡ ಸಾಕಷ್ಟು ಸವಾಲುಗಳಿವೆ.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp