ಪಶ್ಚಿಮ ಬಂಗಾಳದ ಹೈಪ್ರೊಫೈಲ್ ಅಖಾಡ ನಂದಿಗ್ರಾಮದಲ್ಲಿ ಯಾರ ಮುನ್ನಡೆ?: ಇಲ್ಲಿದೆ ವಿವರ 

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ-2021 ಗೆ ನಡೆದಿದ್ದ ಮತದಾನದ ಮತ ಎಣಿಕೆ ಪ್ರಾರಂಭವಾಗಿದ್ದು, ಇಡೀ ರಾಜ್ಯದ ಫಲಿತಾಂಶದಷ್ಟೇ ತೂಕವನ್ನು ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಹೊಂದಿದೆ. 

Published: 02nd May 2021 09:55 AM  |   Last Updated: 02nd May 2021 09:58 AM   |  A+A-


Mamata Banerjee- Suvendu Adhikari

ಮಮತಾ ಬ್ಯಾನರ್ಜಿ-ಸುವೇಂದು ಅಧಿಕಾರಿ

Posted By : Srinivas Rao BV
Source : Online Desk

ನಂದಿಗ್ರಾಮ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ-2021 ಗೆ ನಡೆದಿದ್ದ ಮತದಾನದ ಮತ ಎಣಿಕೆ ಪ್ರಾರಂಭವಾಗಿದ್ದು, ಇಡೀ ರಾಜ್ಯದ ಫಲಿತಾಂಶದಷ್ಟೇ ತೂಕವನ್ನು ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಹೊಂದಿದೆ. 

ಸಿಎಂ ಮಮತಾ ಬ್ಯಾನರ್ಜಿ ಒಂದು ಕಾಲದಲ್ಲಿ ತಮ್ಮ ಆಪ್ತ, ಸಂಪುಟ ಸಹೋದ್ಯೋಗಿಯಾಗಿದ್ದ, ಈಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಅವರ ವಿರುದ್ಧ ಸ್ಪರ್ಧಿಸಿರುವುದು ನಂದಿಗ್ರಾಮ ವಿಧಾನಸಭಾ ಕ್ಷೇತ್ರವನ್ನು ಹೈಪ್ರೊಫೈಲ್ ಅಖಾಡವನ್ನಾಗಿಸಿದೆ. 

ಬೆಳಿಗ್ಗೆ 8 ಕ್ಕೆ ಪ್ರಾರಂಭವಾಗಿರುವ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ವಿರುದ್ಧ 4,000 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ನಂದಿಗ್ರಾಮ ಪುರ್ಬಾ ಮೇದಿನಿಪುರ್ ಜಿಲ್ಲೆಯ ವ್ಯಾಪ್ತಿಗೆ ಬರುವ ಕ್ಷೇತ್ರವಾಗಿದ್ದು, ಈ ಜಿಲ್ಲೆ ಅಧಿಕಾರಿ ಕುಟುಂಬದ ಭದ್ರಕೋಟೆಯಾಗಿದ್ದು ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ನಂದಿಗ್ರಾಮ ವಿಶೇಷ ಸ್ಥಾನವನ್ನು ಹೊಂದಿದೆ. 

2007 ರಲ್ಲಿ ಮಮತಾ ಬ್ಯಾನರ್ಜಿ ಎಡಪಕ್ಷಗಳ ವಿರುದ್ಧದ ರಾಜಕೀಯ ಚಳುವಳಿಯನ್ನು ಆರಂಭಿಸಿದ್ದು ಇದೇ ನಂದಿಗ್ರಾಮದಿಂದ, ಆ ಸಮಯದಲ್ಲಿ ಮಮತಾ ಬ್ಯಾನರ್ಜಿಗೆ ಚಳುವಳಿಯನ್ನು ಯಶಸ್ವಿಗೊಳಿಸಲು ಆಪ್ತರಾಗಿದ್ದದ್ದು ಇದೇ ಸುವೇಂದು ಅಧಿಕಾರಿ. 

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪ್ರಬಲ ಪಕ್ಷವಾಗಿ ಬೆಳೆಯುವುದಕ್ಕೆ ನಂದಿಗ್ರಾಮ ಚಳುವಳಿ ಮಹತ್ವದ ಪಾತ್ರ ವಹಿಸಿತ್ತು. ಇದೇ ಚಳುವಳಿಯ ಪ್ರಭಾವದಿಂದ 2011 ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೇರಿದ್ದರು. ಇನ್ನು ನಂದಿಗ್ರಾಮ ಒಳಪಡುವ ಲೋಕಸಭಾ ಕ್ಷೇತ್ರ ತಮ್ಲುಕ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವವರು ಸುವೇಂದು ಅಧಿಕಾರಿಯ ಕಿರಿಯ ಸಹೋದರ ದಿವ್ಯೇಂದು ಅಧಿಕಾರಿ 

ಎಡಪಕ್ಷದಿಂದ ಮೀನಾಕ್ಷಿ ಮುಖರ್ಜಿ ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದಾರೆ. ಆದರೆ ನೇರ ಹಣಾಹಣಿ ಇರುವುದು ಸುವೇಂದು ಅಧಿಕಾರಿ ಹಾಗೂ ಮಮತಾ ವಿರುದ್ಧ ಆಗಿದ್ದು ಲಭ್ಯವಿರುವ ಇತ್ತೀಚಿನ ಮಾಹಿತಿ ಪ್ರಕಾರ ಮಮತಾ ವಿರುದ್ಧ ಬಿಜೆಪಿಯ ಸುವೇಂದು ಅಧಿಕಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಟಿಎಂಸಿ ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಟಿಎಂಸಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಜೆಪಿ 106 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಕೇವಲ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp