ಪಶ್ಚಿಮ ಬಂಗಾಳ ಯಾರ ವಶ: ಜನರ ಒಲವು ಯಾರತ್ತ-ಮೋದಿಯೋ-ದೀದಿಯೋ? 

'ಅಸಲಿ ಪರಿವರ್ತನೆ' ಘೋಷಣೆಯೊಂದಿಗೆ ಚುನಾವಣಾ ಪ್ರಚಾರಕ್ಕಿಳಿದ ಬಿಜೆಪಿಯೇ ಅಥವಾ ಮತ್ತೆ ದೀದಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೇ?

Published: 02nd May 2021 09:37 AM  |   Last Updated: 02nd May 2021 09:37 AM   |  A+A-


PM Narendra Modi and Mamata Banerjee

ಪ್ರಧಾನಿ ನರೇಂದ್ರ ಮೋದಿ -ಮಮತಾ ಬ್ಯಾನರ್ಜಿ

Posted By : Sumana Upadhyaya
Source : The New Indian Express

ಕೋಲ್ಕತ್ತಾ: 'ಅಸಲಿ ಪರಿವರ್ತನೆ' ಘೋಷಣೆಯೊಂದಿಗೆ ಚುನಾವಣಾ ಪ್ರಚಾರಕ್ಕಿಳಿದ ಬಿಜೆಪಿಯೇ ಅಥವಾ ಮತ್ತೆ ದೀದಿ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆಯೇ?

ಪಶ್ಚಿಮ ಬಂಗಾಳದಲ್ಲಿ ಈ ಬಾರಿ 8 ಸುತ್ತುಗಳಲ್ಲಿ ಸುದೀರ್ಘವಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೊರೋನಾ ಸಾಂಕ್ರಾಮಿಕ ನಡುವೆ ನಡೆದ ಬಹಳ ಕಠಿಣ ಚುನಾವಣಾ ಸ್ಪರ್ಧೆ ಎನ್ನಬಹುದು.

ಪರಸ್ಪರ ದೋಷಾರೋಪ, ಒಳ-ಹೊರಗೆ ಚರ್ಚೆಗಳು, ರಾಜಕೀಯ ವಾಗ್ದಾಳಿಗಳು ಚುನಾವಣಾ ಪ್ರಚಾರ ವೇಳೆ ಸಾಕಷ್ಟು ಕಂಡುಬಂದವು. ಚುನಾವಣಾ ಪ್ರಚಾರದಿಂದಲೇ ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾದವು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಮೊನ್ನೆ ಏಪ್ರಿಲ್ 29ರಂದು ಹೊರಬಂದ ಚುನಾವಣೋತ್ತರ ಸಮೀಕ್ಷೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿಯಿದೆ ಎಂದು ಕಂಡುಬಂದಿದೆ.

ಬಿಜೆಪಿಯ ಅಬ್ಬರದ ಪ್ರಚಾರ ಮಮತಾ ಬ್ಯಾನರ್ಜಿಯವರ ಆಡಳಿತಕ್ಕೆ ಇತಿಶ್ರೀ ಹಾಡುತ್ತದೆಯೇ ಹಾಗಾದರೆ ಅವರು ಸ್ಪರ್ಧಿಸಿರುವ ನಂದಿಗ್ರಾಮ್ ಕ್ಷೇತ್ರದ ಪರಿಸ್ಥಿತಿಯೇನು, ಮಮತಾ ಅವರ ರಾಜಕೀಯ ಭವಿಷ್ಯವೇನು? ಇಂದು ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಭದ್ರತೆ ಮಾಡಿಕೊಂಡಿದೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp