ತಿರುಪತಿ ಲೋಕಸಭಾ ಉಪ ಚುನಾವಣೆ: ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೋಲು

ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕನ್ನಡತಿ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರು ಪರಾಭವಗೊಂಡಿದ್ದಾರೆ.

Published: 03rd May 2021 12:36 AM  |   Last Updated: 03rd May 2021 12:31 PM   |  A+A-


K. Rathna Prabha

ಕೆ. ರತ್ನಪ್ರಭಾ

Posted By : Srinivasamurthy VN
Source : ANI

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕನ್ನಡತಿ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಅವರು ಪರಾಭವಗೊಂಡಿದ್ದಾರೆ.

ಇಂದು ಪ್ರಕಟವಾದ ತಿರುಪತಿ ಲೋಕಸಭಾ ಉಪಚುನಾವಣಾ ಫಲಿತಾಂಶದಲ್ಲಿ ರತ್ನ ಪ್ರಭಾ ಅವರು, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ ಗುರುಮೂರ್ತಿ ಅವರ ವಿರುದ್ಧ ಸೋಲು ಕಂಡಿದ್ದಾರೆ. ತಿರುಪತಿ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರವಾಗಿದ್ದು, ಇಲ್ಲಿ ಎಂ ಗುರುಮೂರ್ತಿ ಅವರು ಟಿಡಿಪಿಯ ಪಣಬಾಕ  ಲಕ್ಷ್ಮೀ ಅವರನ್ನು ಮಣಿಸಿ 2.70 ಲಕ್ಷ ದಾಖಲೆಯ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಪಟ್ಟಿಯಲ್ಲಿ ಬಿಜೆಪಿ ಮತ್ತು ಜನಸೇನಾ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿದ್ದ ರತ್ನ ಪ್ರಭಾ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಒಟ್ಟು ಚಲಾವಣೆಗೊಂಡ ಮತಗಳಲ್ಲಿ ಕೆ.ರತ್ನಪ್ರಭಾ ಅವರು ಶೇ 5.9 ರಷ್ಟು ಮತಗಳನ್ನು  ಪಡೆಯುವ ಮೂಲಕ ಮೂರನೇ ಸ್ಥಾನ ಗಳಿಸಿದ್ದಾರೆ. 

ಇನ್ನು ಆಂಧ್ರಪ್ರದೇಶದಲ್ಲಿ ಆಡಳಿತಾರೂಡ ವೈಎಸ್‌ಆರ್ ಕಾಂಗ್ರೆಸ್ ತಿರುಪತಿ ಕ್ಷೇತ್ರವನ್ನು ಮರಳಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈ ಕ್ಷೇತ್ರದ ಸಂಸದರಾಗಿದ್ದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಕಳೆದ ವರ್ಷ ಕರೊನಾದಿಂದ ಮೃತಪಟ್ಟಿದ್ದರಿಂದ ತೆರವಾಗಿತ್ತು. ಏಪ್ರಿಲ್ 17 ರಂದು ಇಲ್ಲಿ ಮತದಾನ ನಡೆದಿತ್ತು.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp