ಕೋವಿಡ್-19: ಭಾರತಕ್ಕೆ 7 ಮಿಲಿಯನ್ ಡಾಲರ್ ಮೌಲ್ಯದ ಕೋವಿಡ್ ಔಷಧಿ ದೇಣಿಗೆ ಘೋಷಿಸಿದ ಫಿಜರ್ ಸಂಸ್ಥೆ

ಕೋವಿಡ್-19 2ನೇ ಅಲೆಗೆ ತತ್ತರಿಸಿ ಹೋಗುತ್ತಿರುವ ಭಾರತಕ್ಕೆ ಜಾಗತಿಕ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಫಿಜರ್ ನೆರವು ಘೋಷಣೆ ಮಾಡಿದ್ದು, ಸುಮಾರು 7 ಮಿಲಿಯನ್ ಡಾಲರ್ ಮೊತ್ತದ ಕೋವಿಡ್-19 ಔಷಧಿಗಳನ್ನು ನೀಡುವುದಾಗಿ ಹೇಳಿದೆ.
ಫಿಜರ್ ಬಯೋಟೆಕ್
ಫಿಜರ್ ಬಯೋಟೆಕ್

ವಾಷಿಂಗ್ಟನ್: ಕೋವಿಡ್-19 2ನೇ ಅಲೆಗೆ ತತ್ತರಿಸಿ ಹೋಗುತ್ತಿರುವ ಭಾರತಕ್ಕೆ ಜಾಗತಿಕ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಫಿಜರ್ ನೆರವು ಘೋಷಣೆ ಮಾಡಿದ್ದು, ಸುಮಾರು 7 ಮಿಲಿಯನ್ ಡಾಲರ್ ಮೊತ್ತದ ಕೋವಿಡ್-19 ಔಷಧಿಗಳನ್ನು ನೀಡುವುದಾಗಿ ಹೇಳಿದೆ.

ಈ ಕುರಿತು ಮಾತನಾಡಿರುವ ಫಿಜರ್ ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ಅವರು, 'ಅಮೆಪಿರ, ಯುರೋಪ್ ಮತ್ತು ಏಷ್ಯಾದ ವಿತರಣಾ ಕೇಂದ್ರಗಳಿಂದ 70 ಮಿಲಿಯನ್ ಯುಎಸ್ಡಿ (510 ಕೋಟಿ ರೂ.ಗಳಿಗಿಂತ ಹೆಚ್ಚು) ಮೌಲ್ಯದ ಔಷಧಿಗಳನ್ನು ಭಾರತದ ಕೋವಿಡ್-19 ಚಿಕಿತ್ಸೆಯ ಪ್ರೋಟೋಕಾಲ್ ನ  ಭಾಗವಾಗಿ ಗುರುತಿಸಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

'ಭಾರತದ ಉಲ್ಬಣವಾಗಿರುವ ಕೋವಿಡ್-19 ಗಂಭೀರ ಪರಿಸ್ಥಿತಿಯಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ಸಂಕಷ್ಟದಲ್ಲಿರುವವರಿಗೆ ಒಳ್ಳೆಯದಾಗಲಿ ಎಂಗದು ಹರಸುತ್ತೇವೆ. ಈ ಸಂಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಫಿಜರ್ ಸಂಸ್ಥೆ ಭಾರತದಲ್ಲಿರುವ ತನ್ನ ಉದ್ಯೋಗಿಗಳಿಗೆ ಧೈರ್ಯ  ಹೇಳಿದೆ.

 "ಈ ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಪಾಲುದಾರರಾಗಲು ನಾವು ಬದ್ಧರಾಗಿದ್ದೇವೆ. ನಮ್ಮ ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಮಾನವೀಯ ಪರಿಹಾರ ಪ್ರಯತ್ನವನ್ನು ಸಜ್ಜುಗೊಳಿಸಲು ಶೀಘ್ರವಾಗಿ ಕೆಲಸ ಮಾಡುತ್ತಿದ್ದೇವೆ.  ಇದೀಗ, ಅಮೆರಿಕ, ಯುರೋಪ್ ಮತ್ತು ಏಷ್ಯಾದ ವಿತರಣಾ  ಕೇಂದ್ರಗಳಲ್ಲಿನ ಫಿಜರ್ ಸಹೋದ್ಯೋಗಿಗಳು ಫಿಜರ್ ಔಷಧಿಗಳನ್ನು ತ್ವರಿತವಾಗಿ ಭಾರತಕ್ಕೆ ಸಾಗಿಸಲು ಶ್ರಮಿಸುತ್ತಿದ್ದಾರೆ, ಇದನ್ನು ಭಾರತ ಸರ್ಕಾರವು ತನ್ನ ಕೋವಿಡ್-19 ಚಿಕಿತ್ಸಾ ಪ್ರೋಟೋಕಾಲ್ ನ ಭಾಗವಾಗಿ ಗುರುತಿಸಿದೆ. ನಾವು ಈ ಔಷಧಿಗಳನ್ನು ಭಾರತ ದೇಶದಲ್ಲಿರುವ ಪ್ರತಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ  ಪ್ರತಿ ಕೋವಿಡ್-19 ರೋಗಿಗಳಿಗೆ ಉಚಿತವಾಗಿ ವಿತರಿಸುವ ಯೋಜನೆ ರೂಪಿಸುತ್ತಿದ್ದೇವೆ. ಅಂತೆಯೇ ಅಗತ್ಯವಿರುವ ಫಿಜರ್ ಔಷಧಿಗಳನ್ನು ಆಸ್ಪತ್ರೆಗಳಿಗೆ ರವಾನೆ ಮಾಡಲು ಸಹಾಯ ಮಾಡುತ್ತೇವೆ" ಎಂದು ಬೌರ್ಲಾ ಹೇಳಿದ್ದಾರೆ.

70 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಈ ಔಷಧಿಗಳು ತಕ್ಷಣವೇ ಲಭ್ಯವಾಗಲಿದೆ, ಈ ಸಂಬಂಧ ಭಾರತ ಸರ್ಕಾರ ಮತ್ತು ನಮ್ಮ ಎನ್‌ಜಿಒ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ ಮತ್ತು ಅವುಗಳನ್ನು ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ತಲುಪಿಸುತ್ತೇವೆ ಎಂದು ಅವರು ಭರವಸೆ ನೀಡಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com