ಕೇರಳ ಕಾಂಗ್ರೆಸ್ ಅಧ್ಯಕ್ಷ ಆರ್.ಬಾಲಕೃಷ್ಣ ಪಿಳ್ಳೈ ನಿಧನ

ಕೇರಳ ಕಾಂಗ್ರೆಸ್ ನ ಸ್ಥಾಪಕ ಹಾಗೂ ಮಾಜಿ ಸಚಿವ ಆರ್ ಬಾಲಕೃಷ್ಣ ಪಿಳ್ಳೈ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

Published: 03rd May 2021 11:01 AM  |   Last Updated: 03rd May 2021 12:39 PM   |  A+A-


Kerala Congress (B) chairman R Balakrishna Pillai

ಕೇರಳ ಕಾಂಗ್ರೆಸ್ ಅಧ್ಯಕ್ಷ ಆರ್ ಬಾಲಕೃಷ್ಣ ಪಿಳ್ಳೈ

Posted By : Sumana Upadhyaya
Source : The New Indian Express

ಕೊಲ್ಲಮ್: ಕೇರಳ ಕಾಂಗ್ರೆಸ್ ನ ಸ್ಥಾಪಕ ಹಾಗೂ ಮಾಜಿ ಸಚಿವ ಆರ್ ಬಾಲಕೃಷ್ಣ ಪಿಳ್ಳೈ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಉಸಿರಾಟದ ತೊಂದರೆಯಿಂದ ಕಳೆದ ಬುಧವಾರ ಕೊಟ್ಟರಕ್ಕಾರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕೃಷ್ಣ ಪಿಳ್ಳೈ ಅವರ ಅನಾರೋಗ್ಯ ಮತ್ತಷ್ಟು ಹದಗೆಟ್ಟಿದ್ದರಿಂದ ತಿರುವನಂತಪುರದ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

ಅವರ ಪುತ್ರ, ಮಾಜಿ ಸಚಿವ ಕೆ ಬಿ ಗಣೇಶ್ ಕುಮಾರ್ ನಿನ್ನೆ ಪತನಪುರಂ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 
ಕೇರಳ ಕಾಂಗ್ರೆಸ್ ನ ಸ್ಥಾಪಕ ನಾಯಕರಲ್ಲೊಬ್ಬರಾಗಿದ್ದ ಪಿಳ್ಳೈ ಪಕ್ಷದ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸರ್ಕಾರದ ಅಬಕಾರಿ, ಸಾರಿಗೆ ಮತ್ತು ವಿದ್ಯುಚ್ಛಕ್ತಿ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಫಾರ್ಮರ್ಡ್ ಸಮುದಾಯದ ಕೇರಳ ರಾಜ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ, ಕೇರಳ ಕಾಂಗ್ರೆಸ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕೇರಳದ ವಲಕೊಮ್, ಕೊಟ್ಟರಕ್ಕರದಲ್ಲಿ 1935ರ ಮಾರ್ಚ್ 8ರಂದು ಜನಿಸಿದ್ದ ಬಾಲಕೃಷ್ಣ ಪಿಳ್ಳೈ ಅವರ ತಂದೆ ರಾಮನ್ ಪಿಳ್ಳೈ ಮತ್ತು ತಾಯಿ ಕಾರ್ತಿಯಾನಿಯಮ್ಮ. ಕಾಂಗ್ರೆಸ್ ಮೂಲಕವೇ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.ನಂತರದ ದಿನಗಳಲ್ಲಿ ಕೇರಳ ಕಾಂಗ್ರೆಸ್ ಗೆ ಸೇರಿ ಅಲ್ಲಿ ತಮ್ಮದೇ ಪಕ್ಷ ಸ್ಥಾಪಿಸಿದರು. ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಪಿಳ್ಳೈ ಸಕ್ರಿಯರಾಗಿದ್ದರು.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp