ಸೌಮ್ಯ ಲಕ್ಷಣಗಳಿರುವ ರೋಗಿಗಳಿಗೆ CT-Scan ಬೇಕಿಲ್ಲ... ಇದರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು: ಏಮ್ಸ್ ನಿರ್ದೇಶಕ ಗುಲೇರಿಯಾ

ಸೌಮ್ಯ ಲಕ್ಷಣಗಳಿರುವ ರೋಗಿಗಳಿಗೆ CT-Scan ಅಗತ್ಯವಿಲ್ಲ.. ಇದರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂದು ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

Published: 03rd May 2021 08:56 PM  |   Last Updated: 04th May 2021 12:26 PM   |  A+A-


CT scan

ಸಿಟಿ ಸ್ಕ್ಯಾನ್

Posted By : Srinivasamurthy VN
Source : PTI

ನವದೆಹಲಿ: ಸೌಮ್ಯ ಲಕ್ಷಣಗಳಿರುವ ರೋಗಿಗಳಿಗೆ CT-Scan ಅಗತ್ಯವಿಲ್ಲ.. ಇದರಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂದು ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

CT-Scan ಕುರಿತಂತೆ ದೇಶಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ಬಗ್ಗೆ ಎಚ್ಚರಿಕೆ ನೀಡಿರುವ ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು, ಸೌಮ್ಯ ಲಕ್ಷಣಗಳಿರುವ ರೋಗಿಗಳಿಗೆ CT-Scan ಅಗತ್ಯವಿಲ್ಲ. ಸಿಟಿ ಸ್ಕ್ಯಾನ್ ನಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು  ಎಂದು ಹೇಳಿದ್ದಾರೆ. 

ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ನಡುವೆಯೇ ಹೆಚ್ಚಿನ ಸಂಖ್ಯೆಯ ಜನರು CT-Scanಗೆ ಒಳಗಾಗುತ್ತಿದ್ದಾರೆ. ಹಲವು ಜನರಲ್ಲಿ ಕೊವಿಡ್ ಲಕ್ಷಣಗಳು ಕಂಡುಬಂದರೂ ಕೂಡ ಅವರ ಟೆಸ್ಟ್ ವರದಿ ನಕಾರಾತ್ಮಕ ಹೊರಬರುತ್ತಿದೆ. ಈ ಹಿನ್ನಲೆಯಲ್ಲಿ ವೈದ್ಯರೂ ಕೂಡ ಅವರಿಗೆ CT-Scan ಮಾಡಿಸಲು  ಸಲಹೆ ನೀಡುತ್ತಿದ್ದಾರೆ. ಕೊರೊನಾದ ಸಣ್ಣ-ಪುಟ್ಟ ಲಕ್ಷಣಗಳಿದ್ದರೆ, CT-Scan ಮಾಡಿಸುವ ಅವಶ್ಯಕತೆ ಇಲ್ಲ. ಏಕೆಂದರೆ CT-Scan ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ. ಇದರಿಂದ ಕೊರೊನಾ ಬಳಿಕ ಕ್ಯಾನ್ಸರ್ ಬರುವ ಸಂಭವನೀಯತೆ ಹೆಚ್ಚಾಗುತ್ತದೆ. ವಿಶೇಷವಾಗಿ  ಕಿರಿಯ ಜನರಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

'CT-Scan ಹಾಗೂ ಬಯೋಮಾರ್ಕ್ ರಕ್ತ ಪರೀಕ್ಷೆಗಳನ್ನು ತಪ್ಪಾಗಿ ಉಪಯೋಗಿಸಲಾಗುತ್ತಿದೆ. ಒಂದು ವೇಳೆ ಕೊರೋನಾದ ಸೌಮ್ಯ ಲಕ್ಷಣಗಳಿದ್ದರೆ, ಸಿಟಿ ಸ್ಕ್ಯಾನ್ ನಡೆಸುವುದರ ಯಾವುದೇ ಲಾಭ ಇಲ್ಲ. ಒಂದು ಸಿಟಿ ಸ್ಕ್ಯಾನ್ ಎದೆಭಾಗದ 300-400 ಎಕ್ಸ್ ರೇಗೆ ಸಮನಾಗಿರುತ್ತದೆ. ಇದು ತುಂಬಾ  ಹಾನಿಕಾರಕವಾಗಿರುತ್ತದೆ. ಇತೀಚಿನ ದಿನಗಳಲ್ಲಿ ಬಹುತೇಕ ಜನರು CT-Scanಗೆ ಒಳಗಾಗುತ್ತಿದ್ದಾರೆ. CT-Scan ಅವಶ್ಯಕತೆ ಇಲ್ಲ ಎಂದಾದಲ್ಲಿ, ಅದನ್ನು ಮಾಡಿಸಿ ನೀವು ಅನಾವಶ್ಯಕವಾಗಿ ನಿಮಗೆ ನೀವೇ ಹಾನಿಯನ್ನು ತಂದೊಡ್ಡುಕೊಳ್ಳುತ್ತಿದ್ದೀರಿ. ಇದರರ್ಥ ಸಿ.ಟಿ ಸ್ಕ್ಯಾನ್ ಮಾಡಿಸಿ ನಿಮ್ಮ ಶರೀರವನ್ನು  ವಿಕಿರಣಗಳ ಸಂಪರ್ಕಕಕ್ಕೆ ತಳ್ಳುತ್ತಿರುವಿರಿ ಎಂದರ್ಥ. ಇದರಿಂದ ನಂತರದ ದಿನಗಳಲ್ಲಿ ಕ್ಯಾನ್ಸರ್ ಆಗುವ ಸಂಭವನೀಯತೆ ಹೆಚ್ಚಾಗುತ್ತದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ.

ಅಂತೆಯೇ ಸಿಟಿ ಸ್ಕ್ಯಾನ್ ನಿಂದಾಗಿ ರೋಗನಿರೋಧಕ ಪ್ರತಿಕ್ರಿಯೆಯನ್ನು ನಿಗ್ರಹಿಸುವ ಅಪಾಯ ಕೂಡ ಇದ್ದು, ಅನೇಕ ಜನರಲ್ಲಿ ರೋಗದ ಕೋರ್ಸ್ ಅನ್ನು ಉಲ್ಬಣಗೊಳಿಸುವ ಆತಂಕವಿದೆ. 

ಹೋಮ್ ಕ್ವಾರಂಟೀನ್ ನಲ್ಲಿರುವ ವೈದ್ಯರ ಸಂಪರ್ಕದಲ್ಲಿರಿ
ಇದೇ ವೇಳೆ ಹೋಮ್ ಕ್ವಾರಂಟೀನ್ ನಲ್ಲಿರುವ ಜನರು ಯಾವಾಗಲು ತಮ್ಮ ವೈದ್ಯರ ಸಂಪರ್ಕದಲ್ಲಿರಬೇಕು ಎಂದು ಡಾ. ಗುಲೇರಿಯಾ ಸಲಹೆ ನೀಡಿದ್ದಾರೆ. ಆಕ್ಷಿಜನ್ ಸ್ಯಾಚ್ಯುರೇಶನ್ 93 ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಮತ್ತು ಎದೆನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ.
 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp