ಪಂಜಾಬ್ ಗಡಿಯಲ್ಲಿ ಬಿಎಸ್ಎಫ್ ಗುಂಡಿಗೆ ಪಾಕಿಸ್ತಾನಿ ಅತಿಕ್ರಮಣಕಾರ ಹತ

ಗಡಿ ದಾಟಿ ಭಾರತೀಯ ಪ್ರಾಂತ್ಯಕ್ಕೆ ನುಗ್ಗಿದ ಪಾಕಿಸ್ತಾನದ  ಒಳನುಸುಳುಕೋರನನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್‍) ಯೋಧರು ಹತ್ಯೆ ಮಾಡಿದ್ದಾರೆ.

Published: 03rd May 2021 09:31 PM  |   Last Updated: 04th May 2021 12:28 PM   |  A+A-


Indian Army1

ಭಾರತೀಯ ಸೇನೆ

Posted By : Vishwanath S
Source : UNI

ಜಲಂಧರ್: ಗಡಿ ದಾಟಿ ಭಾರತೀಯ ಪ್ರಾಂತ್ಯಕ್ಕೆ ನುಗ್ಗಿದ ಪಾಕಿಸ್ತಾನದ  ಒಳನುಸುಳುಕೋರನನ್ನು ಗಡಿ ಭದ್ರತಾ ಪಡೆ(ಬಿಎಸ್ಎಫ್‍) ಯೋಧರು ಹತ್ಯೆ ಮಾಡಿದ್ದಾರೆ.

ಕಳೆದ ತಡ ರಾತ್ರಿ  ತಾರ್ನ್ ತರಣ್ ಜಿಲ್ಲೆಯ ಖಲ್ರಾ ಪ್ರದೇಶದ ಗಡಿ ಬಳಿ ಬಿಎಸ್ಎಫ್‍ನ  103 ನೇ ಬೆಟಾಲಿಯನ್‍ ಯೋಧರು ಅನುಮಾನಾಸ್ಪದ ವ್ಯಕ್ತಿಯೊಬ್ಬನ ಚಲನೆಯನ್ನು ಗಮನಿಸಿದ್ದಾರೆ. 

ಕೂಡಲೇ ಆತನನ್ನು ಶರಣಾಗುವಂತೆ ಪದೇ ಪದೇ ಎಚ್ಚರಿಸಿದರೂ, ಭಾರತದ ಕಡೆ ನುಗ್ಗಲು ಯತ್ನಿಸಿದಾಗ ಭದ್ರತಾ ಪಡೆಗಳು ಮತ್ತು ವ್ಯಕ್ತಿಯ ನಡುವೆ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎಂದು ಪಂಜಾಬ್ ಫ್ರಂಟಿಯರ್ಸ್ ಪ್ರಧಾನ ಕಚೇರಿಯ ವಕ್ತಾರರು ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp