ಆಂಧ್ರಪ್ರದೇಶ: ಹೊಂಡಕ್ಕೆ ಟ್ರಾಕ್ಟರ್ ಟ್ರೈಲರ್ ಉರುಳಿ ಗ್ರಾಮದ ಸರಪಂಚ್ ಸೇರಿ ಐವರ ಸಾವು

ನೆಲ್ಲೂರು ಗ್ರಾಮೀಣ ಮಂಡಲದ ಗೊಲ್ಲಕಂದುಕೂರ್ ಗ್ರಾಮದಲ್ಲಿ ಟ್ರಾಕ್ಟರ್ ಟ್ರೈಲರ್ ಹೊಂಡಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

Published: 04th May 2021 04:37 PM  |   Last Updated: 04th May 2021 04:37 PM   |  A+A-


Accident Photo

ಅಪಘಾತ ದೃಶ್ಯ

Posted By : Vishwanath S
Source : UNI

ನೆಲ್ಲೂರು(ಆಂಧ್ರ): ನೆಲ್ಲೂರು ಗ್ರಾಮೀಣ ಮಂಡಲದ ಗೊಲ್ಲಕಂದುಕೂರ್ ಗ್ರಾಮದಲ್ಲಿ ಟ್ರಾಕ್ಟರ್ ಟ್ರೈಲರ್ ಹೊಂಡಕ್ಕೆ ಉರುಳಿ ಅದರಲ್ಲಿ ಪ್ರಯಾಣಿಸುತ್ತಿದ್ದ ಐವರು ಕೃಷಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಗ್ರಾಮದ ಸರಪಂಚ್ ಅಬ್ಬು ಕೋಟಿಪೆಂಚಲಯ್ಯ(60), ಪಾಕಾ ಕೃಷ್ಣವೇಣಿ(26), ಕಿಲಾರಿ ಹರಿಬಾಬು(43), ಲಾಲಿ ಲಕ್ಷ್ಮೀಕಾಂತಮ್ಮ(45), ಮತ್ತು ತಾಂಡ್ರ ವೆಂಕಟರಮಣಮ್ಮ(19) ಅವರು ಹೊಲದಲ್ಲಿ ಬೆಳೆ ಕೊಯ್ಲುಗಾಗಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಕೋಟಂರೆಡ್ಡಿ ಶ್ರೀಧರ್ ರೆಡ್ಡಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೆ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಕೂಡಲೇ ಸರ್ಕಾರದ ಕಡೆಯಿಂದ ನೆರವು ಸಿಗುವಂತೆ ಮಾಡುತ್ತೇನೆ ಎಂದರು.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp