ಜೈಶಂಕರ್‌- ಬ್ಲಿಂಕೆನ್‌ ಭೇಟಿ: ಕೋವಿಡ್‌ ಲಸಿಕೆ ಉತ್ಪಾದನೆ ಹೆಚ್ಚಳ ಕುರಿತು ಚರ್ಚೆ 

ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರನ್ನು ಭೇಟಿಯಾದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಜಗತ್ತಿಗೇ ಮಾರಕವಾಗಿ ಪರಿಣಮಿಸಿರುವ ಕೋವಿಡ್-19 ಸಾಂಕ್ರಾಮಿಕದ ಕುರಿತು ಚರ್ಚೆ ನಡೆಸಿದ್ದಾರೆ.

Published: 04th May 2021 11:42 PM  |   Last Updated: 05th May 2021 12:32 PM   |  A+A-


EAM Jaishankar-Blinken

ಜೈಶಂಕರ್‌- ಬ್ಲಿಂಕೆನ್‌ ಭೇಟಿ

Posted By : Srinivasamurthy VN
Source : PTI

ನವದೆಹಲಿ: ಅಮೆರಿಕದ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರನ್ನು ಭೇಟಿಯಾದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಜಗತ್ತಿಗೇ ಮಾರಕವಾಗಿ ಪರಿಣಮಿಸಿರುವ ಕೋವಿಡ್-19 ಸಾಂಕ್ರಾಮಿಕದ ಕುರಿತು ಚರ್ಚೆ ನಡೆಸಿದ್ದಾರೆ.

ನಾಲ್ಕು ದಿನಗಳ ಭೇಟಿಗಾಗಿ ಬ್ರಿಟನ್‌ಗೆ ಬಂದಿರುವ ಅವರು, ಸೋಮವಾರ ಜಿ–7 ದೇಶಗಳ ವಿದೇಶಾಂಗ ಸಚಿವರ ಜತೆಗಿನ ಸಭೆಯ ನಡುವೆ, ಬ್ಲಿಂಕೆನ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಕೋವಿಡ್ ವಿರುದ್ಧದ ಭಾರತದ ಹೋರಾಟವನ್ನು ಅಮೆರಿಕ ಬೆಂಬಲಿಸಿದ್ದಕ್ಕಾಗಿ ಬ್ಲಿಂಕೆನ್‌ ಅವರಿಗೆ ಧನ್ಯವಾದ  ಅರ್ಪಿಸಿದರು. ಕೋವಿಡ್ ಸವಾಲು, ವಿಸ್ತರಿಸಿದ ಲಸಿಕೆ ಉತ್ಪಾದನಾ ಸಾಮರ್ಥ್ಯ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿದೇಶಾಂಗ ಸಚಿವಾಲಯ, "ಕೋವಿಡ್‌ ಪರಿಸ್ಥಿತಿಯನ್ನು ಎದುರಿಸಲು ಅಮೆರಿಕದದಿಂದ ದೊರೆಯುವ ಬೆಂಬಲದ ಕುರಿತು ಚರ್ಚೆ ನಡೆಸಲಾಯಿತು. ಅಂತೆಯೇ ಈ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅಮೆರಿಕ ವಿಶೇಷವಾಗಿ ನೀಡಿದ ಬೆಂಬಲ, ವಿಶೇಷವಾಗಿ  ಆಮ್ಲಜನಕ ಮತ್ತು ರೆಮ್ಡೆಸಿವಿರ್ ಪೂರೈಕೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದೆ.

ಮಂಗಳವಾರ ನಡೆದ ಜಿ-7 ದೇಶಗಳ ವಿದೇಶಾಂಗ ಮತ್ತು ಅಭಿವೃದ್ಧಿ ಸಚಿವರ ಸಭೆಗೂ ಮುನ್ನ, ಇಂಡೊ-ಪೆಸಿಫಿಕ್ ಪ್ರದೇಶ, ಹವಾಮಾನ ಬದಲಾವಣೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಮ್ಯಾನ್ಮಾರ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಜೈಶಂಕರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

‘ಬ್ಲಿಂಕೆನ್‌ ನನ್ನ ಹಳೆಯ ಸ್ನೇಹಿತ. ಅವರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತಿರುವುದು ಖುಷಿತಂದಿದೆ. ಈ ಭೇಟಿಯಲ್ಲಿ ಜಾಗತಿಕವಾಗಿ ಕೋವಿಡ್‌ ಸೃಷ್ಟಿಸಿರುವ ಸವಾಲಿನ ಬಗ್ಗೆ ವಿವರವಾದ ಚರ್ಚೆ ನಡೆದಿದೆ. ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ಸರಬರಾಜು ಕುರಿತು ಚರ್ಚಿಸಲಾಯಿತು. ಎಂದು  ಜೈಶಂಕರ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಅಂತೆಯೇ ಬ್ಲಿಂಕೆನ್ ಕೂಡ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಕೈಜೋಡಿಸುವುದಾಗಿ ಘೋಷಣೆ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp