ದೇಶ ಸಂಕಷ್ಟದಲ್ಲಿರುವಾಗ ಪ್ರಧಾನಿ ನೂತನ ನಿವಾಸಕ್ಕೆ 13 ಸಾವಿರ ಕೋಟಿ ಖರ್ಚು ಮಾಡುವ ಅಗತ್ಯವಿದೆಯೇ?: ಪ್ರಿಯಾಂಕಾ ಕಿಡಿ

ದೇಶದ ಜನರು ಆಕ್ಸಿಜನ್ ಗಾಗಿ ಪರದಾಡುತ್ತಿರುವಾಗ ಪ್ರಧಾನಿಯವರ ನೂತನ ನಿವಾಸಕ್ಕಾಗಿ 13 ಸಾವಿರ ಕೋಟಿ ಹಣ ಖರ್ಚು ಮಾಡುವ ಅಗತ್ಯವಿದೆಯೇ? ಈ ಹಣವನ್ನು ಜನರ ಜೀವ ಉಳಿಸುವ ಕಾರ್ಯಗಳಿಗೆ ಬಳಸಬಾರದೆ ಎಂದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

Published: 04th May 2021 05:05 PM  |   Last Updated: 04th May 2021 07:00 PM   |  A+A-


Narendra Modi-Priyanka Vadra

ನರೇಂದ್ರ ಮೋದಿ-ಪ್ರಿಯಾಂಕಾ ವಾದ್ರಾ

Posted By : Vishwanath S
Source : UNI

ನವದೆಹಲಿ: ದೇಶದ ಜನರು ಆಕ್ಸಿಜನ್ ಗಾಗಿ ಪರದಾಡುತ್ತಿರುವಾಗ ಪ್ರಧಾನಿಯವರ ನೂತನ ನಿವಾಸಕ್ಕಾಗಿ 13 ಸಾವಿರ ಕೋಟಿ ಹಣ ಖರ್ಚು ಮಾಡುವ ಅಗತ್ಯವಿದೆಯೇ? ಈ ಹಣವನ್ನು ಜನರ ಜೀವ ಉಳಿಸುವ ಕಾರ್ಯಗಳಿಗೆ ಬಳಸಬಾರದೆ ಎಂದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೆಂಟ್ರಲ್ ವಿಸ್ತಾ ಯೋಜನೆಯಡಿ ಪ್ರಧಾನಿಯವರ ನೂತನ ಗೃಹ ನಿರ್ಮಾಣ ಸೇರಿದಂತೆ ದೇಶದ ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಟ್ಟಿರುವ ಎಲ್ಲ ಸಂಪನ್ಮೂಲಗಳನ್ನು ಕೇಂದ್ರ ಸರ್ಕಾರ ಕೋವಿಡ್ ನಿಂದ ಸಂಕಷ್ಟದಲ್ಲಿರುವ ಜನರ ಜೀವ ಉಳಿಸಲು ವಿನಿಯೋಗಿಸಬೇಕು. 

ಕೋವಿಡ್ ಲಸಿಕೆ ಮತ್ತು ಆಮ್ಲಜನಕದ ಕೊರತೆಯಿಂದ ಜನರು ಸಂಕಷ್ಟ ಎದುರಿಸುತ್ತಿರುವ ವೇಳೆಯಲ್ಲಿ ಇಂಥ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿರುವ ಹಣವನ್ನು ಜನರ ಜೀವ ಉಳಿಸಲು ಬಳಸಬೇಕು' ಎಂದು ಒತ್ತಾಯಿಸಿದ್ದಾರೆ.

ಕೋವಿಡ್ ನಿಂದಾಗಿ ದೇಶದಾದ್ಯಂತ ಏಕಕಾಲಕ್ಕೆ ಆಮ್ಲಜನಕ, ಹಾಸಿಗೆ, ಲಸಿಕೆ, ಔಷಧಗಳ ಕೊರತೆಯಿಂದ ಜನರು ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ನೂತನ ನಿವಾಸಕ್ಕಾಗಿ ವ್ಯಯಿಸುವ 13 ಸಾವಿರ ಕೋಟಿ ಹಣವನ್ನು ಜನರ ಜೀವ ಉಳಿಸುವ ಕಾರ್ಯಗಳಿಗೆ ಬಳಸುವಂತೆ ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರ ನೂತನ ನಿವಾಸ ಡಿಸೆಂಬರ್ 2022ರೊಳಗೆ ಪೂರ್ಣಗೊಳ್ಳುವ ಸುದ್ದಿ ಹಾಗೂ ದೇಶದಲ್ಲಿ ಲಸಿಕೆ, ಆಮ್ಲಜನಕ ಕೊರತೆ ಇರುವ ಸುದ್ದಿಗಳ ತುಣುಕುಗಳನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.  

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp