ಎನ್440ಕೆ ರೂಪಾಂತರಿ ಕೋವಿಡ್-19 ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ: ತಜ್ಞರು

ಎನ್ 440ಕೆ ರೂಪಾಂತರಿ ಕೋವಿಡ್-19 ಇತರ ಕೊರೋನಾವೈರಸ್ ಗಿಂತ ಹೆಚ್ಚಿನ ಅಪಾಯಕಾರಿ ಎಂಬ ವರದಿಗಳ ಬಗ್ಗೆ ಜನರು ಭಯಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜಯವಾಡ: ಎನ್ 440ಕೆ ರೂಪಾಂತರಿ ಕೋವಿಡ್-19 ಇತರ ಕೊರೋನಾವೈರಸ್ ಗಿಂತ ಹೆಚ್ಚಿನ ಅಪಾಯಕಾರಿ ಎಂಬ ವರದಿಗಳ ಬಗ್ಗೆ ಜನರು ಭಯಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸೆಂಟರ್ ಪಾರ್ ಸೆಲ್ಯೂಲರ್ ಮೊಲಿಕ್ಯೂಲರ್ ಬಯೋಲಾಜಿ ಸೆಂಟರ್ ತಜ್ಞ ರಾಕೇಶ್ ಮಿಶ್ರಾ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು,ಮತ್ತು ತೆಲಂಗಾಣದಲ್ಲಿ ಶೇ, 20ರಿಂದ 30 ರಷ್ಟು ಮಾದರಿಗಳಲ್ಲಿ ಕಾಣಿಸಿಕೊಂಡಿರುವ ಎನ್ 440ಕೆ ವೈರಾಣು ಮುಂದಿನ ದಿನಗಳಲ್ಲಿ ಮಸುಕಾಗಲಿದೆ ಎಂದರು.

ಆದಾಗ್ಯೂ,ಡಬಲ್ ಮ್ಯೂಟೆಂಟ್ ಅಥವಾ ಭಾರತದ ರೂಪಾಂತರ ಎಂದು ಹೆಸರಾಗಿರುವ ಹೊಸದಾದ ಬಿ.1617 ಕೋವಿಡ್ ವೈರಾಣು ಪ್ರಬಲವಾಗಿ ರೂಪಾಂತರವಾಗುತ್ತಿರುವುದರಿಂದ ಜನರು ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಆಗಾಗ್ಗೆ ಕೈಗಳನ್ನು ಶುದ್ದೀಕರಿಸಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳಲ್ಲಿನ ಅನೇಕ ಪ್ರಕರಣಗಳಲ್ಲಿ ಡಂಬಲ್ ಮ್ಯೂಟೆಂಟ್ ಕೊರೋನಾವೈರಸ್ ಹೆಚ್ಚಾಗಿ ಕಂಡುಬರುತ್ತಿದೆ.ಇದೇ ಕಾರಣಕ್ಕೆ ಎರಡನೇ ಅಲೆಯಲ್ಲಿ ಕೋವಿಡ್-19 ಪ್ರಕರಣಗಳನ್ನು ಹೆಚ್ಚಾಗುತ್ತಿದ್ದು, ತಜ್ಞರು ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಮಾಡುತ್ತಿದ್ದಾರೆ.ಆದಾಗ್ಯೂ, ಮುಂದಿನ ದಿನಗಳಲ್ಲಿ ಇದರ ಪ್ರಭಾವ ತಗ್ಗಲಿದೆ ಎಂದು ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com