ಕೋವಿಡ್-19 ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸಲು ಎಂಪಿ ಲ್ಯಾಡ್ ಯೋಜನೆ ಪುನಾರಂಭ ಮಾಡಿ: ಪ್ರಧಾನಿಗೆ ಡ್ಯಾನಿಶ್ ಅಲಿ ಪತ್ರ

ಕೋವಿಡ್-19 ರೋಗಿಗಳ ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸುವುದಕ್ಕೆ ಸಹಕಾರಿಯಾಗಲು ಎಂಪಿ ಲ್ಯಾಡ್ (ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆ)ಯನ್ನು ಮರುಪ್ರಾರಂಭಿಸಬೇಕೆಂದು ಪ್ರಧಾನಿಗೆ ಸಂಸದ ಕನ್ವರ್ ಡ್ಯಾನಿಶ್ ಅಲಿ ಮನವಿ ಮಾಡಿದ್ದಾರೆ. 
ಕೋವಿಡ್-19 ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸಲು ಎಂಪಿ ಲ್ಯಾಡ್ ಯೋಜನೆ ಪುನಾರಂಭ ಮಾಡಿ: ಪ್ರಧಾನಿಗೆ ಡ್ಯಾನಿಶ್ ಅಲಿ
ಕೋವಿಡ್-19 ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸಲು ಎಂಪಿ ಲ್ಯಾಡ್ ಯೋಜನೆ ಪುನಾರಂಭ ಮಾಡಿ: ಪ್ರಧಾನಿಗೆ ಡ್ಯಾನಿಶ್ ಅಲಿ

ನವದೆಹಲಿ: ಕೋವಿಡ್-19 ರೋಗಿಗಳ ಆರೋಗ್ಯ ಅಗತ್ಯತೆಗಳಿಗೆ ಸ್ಪಂದಿಸುವುದಕ್ಕೆ ಸಹಕಾರಿಯಾಗಲು ಎಂಪಿ ಲ್ಯಾಡ್ (ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆ)ಯನ್ನು ಮರುಪ್ರಾರಂಭಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಗೆ ಸಂಸದ ಕನ್ವರ್ ಡ್ಯಾನಿಶ್ ಅಲಿ ಮನವಿ ಮಾಡಿದ್ದಾರೆ. 

ಎಂಪಿ ಲ್ಯಾಡ್ ಗಳ ಮೂಲಕ ಸಂಸದರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬಹುದು ಹಾಗೂ ಕೋವಿಡ್-19 ಎರಡನೇ ಅಲೆಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಬಹುದು ಎಂದು ಡ್ಯಾನಿಶ್ ಅಲಿ ಅಭಿಪ್ರಾಯಪಟ್ಟಿದ್ದಾರೆ. 

2020-21-2021-22 ರ ಅವಧಿಗೆ ಕೇಂದ್ರ ಸರ್ಕಾರ ಎಂಪಿ ಲ್ಯಾಡ್ಸ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಎಂಪಿ ಲ್ಯಾಡ್ಸ್ ಗೆ ಹೋಗುತ್ತಿದ್ದ ನಿಧಿಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ಆರೋಗ್ಯ ಸೇವೆಗಳನ್ನು ನಿರ್ವಹಣೆ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ಆದರೆ ಎಂಪಿ ಲ್ಯಾಡ್ಸ್ ನ್ನು ಈಗ ಪುನಃ ಪ್ರಾರಂಭಿಸುವುದಕ್ಕೆ ಒತ್ತಾಯಿಸಿರುವ ಉತ್ತರ ಪ್ರದೇಶದ ಅಮ್ರೋಹ ಕ್ಷೇತ್ರದ ಬಿಎಸ್ ಪಿ ಸಂಸದ ಅಲಿ, ಕೋವಿಡ್-19 ಸೋಂಕು ಹರಡುತ್ತಿರುವುದರಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. 

ಅಮ್ರೋಹ ಲೋಕಸಭಾ ಕ್ಷೇತ್ರದ ಗ್ರಾಮ ಗ್ರಾಮಗಳಿಗೂ ಕೋವಿಡ್-19 ಹರಡಿದೆ.  ಔಷಧ, ಬೆಡ್ ಗಳು, ಆಕ್ಸಿಜನ್ ಗಳು ಹಾಗೂ ಇನ್ನಿತರ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. ಆದರೆ ವೈದ್ಯಕೀಯ ಸಪೋರ್ಟ್ ವ್ಯವಸ್ಥೆ ಇಲ್ಲ ಎಂದು ಅಲಿ ಹೇಳಿದ್ದಾರೆ. 

"ನನ್ನ ಕ್ಷೇತ್ರಕ್ಕೆ ಈ ವರೆಗೂ ಯಾವುದೇ ಗಮನಾರ್ಹವಾದ ವೈದ್ಯಕೀಯ ಸೌಲಭ್ಯಗಳನ್ನೂ ಪಿಎಂ ಕೇರ್ಸ್ ಹಾಗೂ ಎಂಪಿ ಲ್ಯಾಡ್ ನಿಂದ ನೀಡಿಲ್ಲ. ಇದರಿಂದ ನನ್ನ ಕ್ಷೇತ್ರದ ಜನತೆ ನರಳುತ್ತಿದ್ದಾರೆ" ಎಂದು ಪತ್ರದಲ್ಲಿ ಅಲಿ ಹೇಳಿದ್ದಾರೆ. 

"ಈ ಪರಿಸ್ಥಿತಿಯಲ್ಲಿ ಎಲ್ಲಾ ಸಂಸದರಿಗೂ ಎರಡು ವರ್ಷಗಳಿಂದ ತಡೆಹಿಡಿಯಲಾಗಿದ್ದ ಹಣವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡುತ್ತಿದ್ದೇನೆ" ಎಂದು ಪ್ರಧಾನಿಗೆ ಅಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com